ಅತ್ತಿಹಳ್ಳಿ ನುಡಿ ಪ್ರತಿಷ್ಠಾನ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಹಂಪಿ: ಮಲೆನಾಡಿನ ದಟ್ಟವಾದ ಕಾಡುಗಳ ಮಧ್ಯೆ ಇರುವ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿರುವ ನುಡಿ ಪ್ರತಿಷ್ಠಾನವು ಕನ್ನಡೇತರರಿಗೆ ಆನ್‌ಲೈನ್ ಮೂಲಕ ಕನ್ನಡ ಕಲಿಸುವ ಮಹತ್ಕಾರ್ಯದ ಜೊತೆಗೆ ಪುಸ್ತಕ ಪ್ರಕಟಣೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡವನ್ನು ಸಾಗರದಾಚೆಗೂ ವಿಸ್ತರಿಸಲು ಹೊರಟಿರುವುದು ಶ್ಲಾಘನೀಯ ಎಂದು ವಿಜಯನಗರ ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ. ಚಿ. ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

Click Here

Call us

Call us

ಅವರು ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಆನ್‌ಲೈನ್ ಮೂಲಕ ಹಾಸನ ಜಿಲ್ಲೆಯ ಅತ್ತಿಹಳ್ಳಿ ಗ್ರಾಮದಲ್ಲಿರುವ ನುಡಿ ಪ್ರತಿಷ್ಠಾನವನ್ನು ಉದ್ಘಾಟಿಸಿ ಮಾತನಾಡಿದರು.

Click here

Click Here

Call us

Visit Now

ಅನ್ಯರಿಗೆ ನಮ್ಮ ಸಂಸ್ಕೃತಿಯನ್ನು, ಕನ್ನಡ ಪರ ಚಿಂತನೆಗಳನ್ನು ಪರಿಚಯಿಸುವ ಕಾರ್ಯ ಮುಖ್ಯವಾದುದು. ಕನ್ನಡವನ್ನು ಕಟ್ಟುವ ಕಾರ್ಯ ಇಂದು ವಿವಿಧ ನೆಲೆಗಳಲ್ಲಿ ಆಗಬೇಕಿದೆ. ಈ ಮೂಲಕ ಯುವ ಪೀಳಿಗೆಯನ್ನು ರಾಷ್ಟ್ರಕಟ್ಟುವ ಕಾರ್ಯದಲ್ಲಿ ಕೈಜೋಡಿಸಲು ಸನ್ನದ್ಧಗೊಳಿಸಬೇಕಾದ ತುರ್ತು ಇಂದು ನಮ್ಮ ಮುಂದಿದೆ. ಒಟ್ಟಿನಲ್ಲಿ ಶಿಕ್ಷಣದ ಮೂಲಕ ಪ್ರಜ್ಞಾವಂತ ನಾಗರೀಕರನ್ನು ತಯಾರು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ನುಡಿ ಪ್ರತಿಷ್ಠಾನದ ಸಾಮಾಜಿಕ ಜಾಲತಾಣಗಳನ್ನು ಸಕ್ರಿಯಗೊಳಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಮಾತನಾಡಿ, ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯದಲ್ಲಿ ಈಗಾಗಲೇ ತನ್ನನ್ನು ತೊಡಗಿಸಿಕೊಂಡಿರುವ ನುಡಿ ಪ್ರತಿಷ್ಠಾನವು ಸಾಹಿತ್ಯಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳಲು ಮುಂದಡಿ ಇಟ್ಟಿರುವ ವಿಚಾರ ಅಬಿನಂದನಾರ್ಹ ಎಂದರು.

ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಿಂದ ಪ್ರತಿಷ್ಠಾನವು ಪಡೆದ ನೋಂದಣಿ ಪ್ರಮಾಣಮತ್ರವನ್ನು ಅನಾವರಣಗೊಳಿಸಿ ಮಾತನಾಡಿದ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕ ಪ್ರೊ. ಪಿ. ಮಹಾದೇವಯ್ಯ; ಪ್ರತಿಷ್ಠಾನವು ಆರಂಭದ ದಿನಗಳಿಂದಲೂ ಕನ್ನಡ ಕಲಿಸುವ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿರುವ ನುಡಿ ಪ್ರತಿಷ್ಠಾನವು ಪುಸ್ತಕ ಪ್ರಕಟಣೆಯ ಮೂಲಕವೂ ಕನ್ನಡ ಸಂಸ್ಕೃತಿಯ ಪಸರಣೆಯನ್ನು ಮಾಡುವ ಹೊಣೆಯನ್ನು ಹೊಂದಿದೆ ಎಂದು ಅಭಿಪ್ರಾಯಿಸಿದರು.

Call us

ನುಡಿ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರಜ್ವಲ್ ಎ. ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಯಕ್ರಮದಲ್ಲಿ ವಿಶ್ವವಿದ್ಯಾಲಯದ ಆಡಳಿತ ವರ್ಗವನ್ನು ಪ್ರತಿಷ್ಠಾನದ ಪರವಾಗಿ ಗೌರವಿಸಲಾಯಿತು. ಸಂಶೋಧನಾರ್ಥಿಗಳಾದ ಸುವರ್ಣಮ್ಮ ಕೆ. ನಿರೂಪಿಸಿದ ಕಾರ್ಯಕ್ರಮವನ್ನು ಡಾ. ರಕ್ಷಿತ್ ಸ್ವಾಗತಿಸಿ, ಕು. ಯಲ್ಲವ್ವ ಹೆಬ್ಬಳ್ಳಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ನಿಕಾಯದ ಡೀನರಾದ ಡಾ. ಮಾಧವ ಪೆರಾಜೆ, ವಿವಿಯ ಪ್ರಾಧ್ಯಾಪಕ ವರ್ಗ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ನಾಡಿನ ವಿವಿಧೆಡೆಯಿಂದ ಹಲವು ಶಿಕ್ಷಣಾಸಕ್ತರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

16 + six =