
ವ್ಯಕ್ತಿಗಿಂತ ಸಮಾಜದ ಹಿತ ಬಯಸುವ ಸಾಹಿತ್ಯ ಸೃಷ್ಠಿ ಅಗತ್ಯ: ಯು.ಸಿ. ಹೊಳ್ಳ
ಬೈಂದೂರು: ಉಡುಪಿ ಜಿಲ್ಲೆಯ ಧಾರ್ಮಿಕ, ಸಾಹಿತ್ಯಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವ್ಯಕ್ತಿ ಉಪ್ಪುಂದ ಚಂದ್ರಶೇಖರ ಹೊಳ್ಳ. ಹುಟ್ಟು ಹೋರಾಟಗಾರರಾಗಿ ತನ್ನ ಕ್ರೀಯಾಶೀಲ ವ್ಯಕ್ತಿತ್ವ ಹಾಗೂ
[...]