ಸಂಸದರ ನಿಧಿ ಬಳಕೆಯಲ್ಲಿ ಬಿ. ವೈ. ರಾಘವೇಂದ್ರ ಅವರಿಗೆ ದೇಶದಲ್ಲೇ 2ನೇ ಸ್ಥಾನ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಂಸದರ ನಿಧಿಯಡಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು ಸಂಸದರ ನಿಧಿ ಬಳಕೆಯಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ದೇಶಕ್ಕೆ ಎರಡನೇ ಸ್ಥಾನದಲ್ಲಿದ್ದಾರೆ.

Call us

Click Here

Click here

Click Here

Call us

Visit Now

Click here

2019-20ರ ಸಾಲಿಗೆ ಸಂಬಂಧಿಸಿದಂತೆ 5 ಕೋಟಿ ರೂ. ಅನುದಾನ ಹಾಗೂ 10ರಿಂದ 15ನೇ ಲೋಕಸಭೆವರೆಗೆ ಬಳಕೆಯಾಗದೆ ಇದ್ದ 4.40 ಕೋಟಿ ರೂ. ಅನುದಾನವೂ ಸೇರಿದಂತೆ 9,40 ಕೋಟಿ ರೂ.ದಲ್ಲಿ ಈಗಾಗಲೇ 9 ಕೋಟಿ ರೂ. ಬಳಕೆ ಮಾಡಿದ್ದಾರೆ.

ಸಾರ್ವಜನಿಕ ಬಸ್ ಶೆಲ್ಟರ್, ಹೈಮಾಸ್ಟ್ ಲೈಟ್, ಶಾಲಾ ಕೊಠಡಿ ಮತ್ತು ಸಾರ್ವಜನಿಕ ಸಮುದಾಯ ಭವನಕ್ಕೆ 4.70 ಕೋಟಿ ರೂ., ರಸ್ತೆ ನಿರ್ಮಾಣಕ್ಕೆ 2.93 ಕೋಟಿ ರೂ., ಕರೊನಾ ನಿರ್ವಹಣೆಗೆ ಆರೋಗ್ಯ ಇಲಾಖೆಗೆ ಆಂಬುಲೆನ್ಸ್ ಮತ್ತು ಡಯಾಲಿಸಿಸ್ ಯಂತ್ರ ಅಳವಡಿಕೆಗೆ 82.50 ಲಕ್ಷ ರೂ., ಕುಡಿಯುವ ನೀರಿನ ಘಟಕಕ್ಕೆ 42 ಲಕ್ಷ ರೂ. ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನ, ಇತ್ಯಾದಿ ಅನೇಕ ಉಪಯುಕ್ತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉಳಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉಳಿದ ಅನುದಾನ ಬಳಕೆ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೂ ಕಾರಣರಾಗಿದ್ದಾರೆ.

ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2020-21 ಹಾಗೂ 2021-22ರ ಎರಡು ವರ್ಷಗಳ ಸಂಸದರ ನಿಧಿಯನ್ನು ಕರೊನಾ ಸಂಕಷ್ಟದ ಆರ್ಥಿಕ ಪರಿಸ್ಥಿತಿ ನಿರ್ವಹಣೆಗೆ ನೀಡಲಾಗಿತ್ತು.

ಕರೊನಾ ಸಾಂಕ್ರಾಮಿಕ ರೋಗದ ಹರಡುವಿಕೆಯ ಹಿನ್ನಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2020-21 ಹಾಗೂ 2021-22 ಎರಡು ವರ್ಷಗಳ ಸಂಸದರ ನಿಧಿಯನ್ನು ಕೊರೊನಾ ಸಂಕಷ್ಟದ ಆರ್ಥಿಕ ಪರಿಸ್ಥಿತಿ ನಿರ್ವಹಣೆಗೆ ನೀಡಲಾಗಿತ್ತು.

Call us

ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು 2021-22ನೇ ಸಾಲಿಗೆ ಸ್ಥಗಿತಗೊಂಡಿದ್ದ ಸಂಸದರ ನಿಧಿಯಲ್ಲಿ 2 ಕೋಟಿ ರೂ. ಬಿಡುಗಡೆ ಮಾಡಿರುವುದಕ್ಕೆ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

5 + 14 =