ಬಾಳೆಮನೆ ಕುಟುಂಬಸ್ಥರ ಚತುಷ್ಪವಿತ್ರ ನಾಗಮಂಡಲ ಸೇವಗೆ ಚಪ್ಪರ ಮುಹೂರ್ತ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಾಳೆಮನೆ ಕುಟುಂಬಸ್ಥರು ನಡೆಸಲಿರುವ ಚತುಷ್ಪಪವಿತ್ರ ನಾಗಮಂಡಲ ಸೇವೆಗೆ ಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಣಪತಿ ಪೂಜೆ ನಂತರ ಚಪ್ಪರ ಮುಹೂರ್ತ ನಡೆಯಿತು. ಕುಂದಬಾರಂದಾಡಿ ವೇ.ಮೂ.ಚೆನ್ನಕೇಶವ ಉಪಾಧ್ಯ ಹಾಗೂ ಪುರೋಹಿತ ವರ್ಗ ಬೆಳಗ್ಗೆ ಗಣಹೋಮ, ದೇವತಾ ಕಾರ‍್ಯ, ಬಾಳೆಮನೆ ನಾಗದೇವರ ಬನದಲ್ಲಿ ವಿಶೇಷ ಪೂಜೆ, ಮಂಗಳಾರತಿ ಸಲ್ಲಿಸಿದ ನಂತರ ಚಪ್ಪರ ಮುಹೂರ್ತ ನಡೆಸಲಾಯಿತು.

ನಾಗದರ್ಶನ ಮಂಟಪ, ಪಾಕಶಾಲೆ, ಯಜ್ಞಶಾಲೆ, ಹಿಂಗಾರ ಸಂಗ್ರಹ ಗೋಡಾನ್, ಹೊರೆ ಕಾಣಿಗೆ ಹಾಗೂ ಹಸಿರುವಾಣಿ ಸಂಗ್ರಹಲಾಯಕ್ಕೆ ಭೂಮಿ ಪೂಜೆ ನೆರವೇರಿಸಿ, ಕಂಬ ನೆಡುವ ಮೂಲಕ ಚಪ್ಪರ ಮಹೂರ್ತ ಸಂಪನ್ನಗೊಂಡಿತು. ಬಾಳೆಮನೆ ಹಿರಿಯ ಕುಟುಂಬಸ್ಥ ದೀಕ್ಷೆ ಹಿಡಿದ ಬಾಳೆಮನೆ ನರಸಿಂಹ ಶೆಟ್ಟಿ ಹಾಗೂ ಪತ್ನಿ ದೇವಕಿ ಶೆಟ್ಟಿ ಚಪ್ಪರ ಮೂಹೂರ್ತ ಧಾರ್ಮಿಕ ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು.

ಪ್ರಗತಿಪರ ಕೃಷಿಕ ಸಬ್ಲಾಡಿ ಮಂಜಯ್ಯ ಶೆಟ್ಟಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ್ ಶೆಟ್ಟಿ, ನ್ಯಾಯವಾದಿ ಟಿ.ಬಿ.ಶೆಟ್ಟಿ ಕಂಬ ನೆಡುವ ಮೂಲಕ ಚಪ್ಪರ ಮಹೂರ್ತಕ್ಕೆ ಚಾಲನೆ ನೀಡಿದರು.

Call us

ನಾಗಮಂಡಲ ಸೇವೆ ನೇತೃತ್ವ ವಹಿಸಿದ ಕುಂದಾಪುರ ತಾಲೂಕ್ ಪಂಚಾಯತ್ ಮಾಜಿ ಉಪಾಧ್ಯಕ್ಷ ಬಾಳೆಮನೆ ಸಂತೋಷ್ ಕುಮಾರ್ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ರಾಜೀವ ಶೆಟ್ಟಿ ನೂಜಾಡಿ, ಗಣಪಯ್ಯ ಶೆಟ್ಟಿ ಬಾಳೆಮನೆ, ಊರಿನ ಹಿರಿಯ ಆನಗಳ್ಳಿ ನರಸಿಂಹ ಶೆಟ್ಟಿ, ಕುಂದಾಪುರ ತಾಪಂ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕಡ್ಕೆ, ಹಕ್ಲಾಡಿ ಗ್ರಾಪಂ ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ, ಹಕ್ಲಾಡಿ ಗ್ರಾಪಂ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್, ಸದಸ್ಯರಾದ ಸತೀಶ್ ಶೆಟ್ಟಿ ಯಳೂರು, ಜಯಂತ ಶೆಟ್ಟಿ ನೂಜಾಡಿ, ಕೋಟಿ ಸುಧಾಕರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿ ಹರ್ಕೂರು ಕಟ್ಟಿನಮಕ್ಕಿ ಚಿತ್ತರಂಜನ್ ಹೆಗ್ಡೆ, ಸೇನಾಪುರ ಶ್ರೀ ಮಹಾವಿಷ್ಣು ದೇವಸ್ಥಾನ ಅನುವಂಶೀಯ ಅರ್ಚಕ ವೆಂಕಟೇಶ ಮಂಜರು, ಮೊಗವೀರ ಹಿರಿಯ ಮುಖಂಡ ಸೂರ ಮೊಗವೀರ, ಗಿರಿ ಮೊಗವೀರ ಬಟ್ಟೆಕುದ್ರು, ಸಂತೋಷ್ ಮೊಗವೀರ ತೊಪ್ಲು, ಬಾಳೆಮನೆ ಗಣಪಯ್ಯ ಶೆಟ್ಟಿ, ಮುಖ್ಯಶಿಕ್ಷಕ ಸದಾಶಿವ ಶೆಟ್ಟಿ ಸೇನಾಪುರ, ಪ್ರಾಥಮಿಕ ಶಿಕ್ಷಕ ಸಂಘ ಅಧ್ಯಕ್ಷ ಶಶಿಧರ ಶೆಟ್ಟಿ, ಮಾಜಿ ಜಿಪಂ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ, ಉದ್ಯಮಿ ರಘುರಾಮ ಶೆಟ್ಟಿ ಯಳೂರು, ಬೈಂದೂರು ಬಿಜೆಪಿ ಮಾಜಿ ಅಧ್ಯಕ್ಷ ಪ್ರಣಯ ಕುಮಾರ್ ಶೆಟ್ಟಿ ಯಳೂರು ಮುಂತಾದವರು ಇದ್ದರು.

ನಾಗಮಂಡಲೋತ್ಸವದಲ್ಲಿ ಚಪ್ಪರಕ್ಕೆ ಮಹತ್ವವಿದ್ದು, ಎಲ್ಲಾ ಕಾರ‍್ಯಕ್ರಮಗಳು ಚಪ್ಪರದಡಿಯಲ್ಲೇ ನಡೆಯುತ್ತದೆ. ನಾಗನರ್ತನ ಮಂಟಪದಲ್ಲಿ ನಾಗ ದೇವರ ಆಹ್ವಾನಿಸಿ, ಪ್ರಣಪ್ರತಿಷ್ಠಾಪನೆ ಮಾಡಲಾಗುತ್ತದೆ. ಎಲ್ಲಾ ಧಾರ್ಮಿಕ ಕಾರ‍್ಯಕ್ರಮಗಳು ನಿರ್ವಿಘ್ನವಾಗಿ, ಸಾಂಗೋಪಾಂಗವಾಗಿ ನಡೆಯುವ ಸಲುವಾಗಿ ಚಪ್ಪರ ಮುಹೂರ್ತ ಮಹತ್ವ ಪಡೆಯುತ್ತದೆ. ಚಪ್ಪರ ಮಹೂರ್ತವಲ್ಲದೆ ವಾಸ್ತಹೋಮ ಇನ್ನಿತರ ಕಾರ‍್ಯಕ್ರಮ ಕೂಡಾ ನಡೆಯಲಿದೆ. ಮನೆ ಕಟ್ಟುವ ಮುನ್ನಾ ಪಂಚಾಗ ಪೂಜೆಮಾಡಿದ ಹಾಗೆ ಚಪ್ಪರ ಮುಹೂರ್ತವೂ ಮಹತ್ವ ಪಡೆದಿದೆ.  – ಸಬ್ಲಾಡಿ ಮಂಜಯ್ಯ ಶೆಟ್ಟಿ, ಪ್ರಗತಿಪರ ಕೃಷಿಕರು

Leave a Reply

Your email address will not be published. Required fields are marked *

fifteen + 14 =