ಬೆಂಗಳೂರು ಮೆಜೆಸ್ಟಿಕ್‌ನಿಂದ- ಕಾರವಾರಕ್ಕೆ ರೈಲು. ರೂ.290ರಲ್ಲಿ ಕುಂದಾಪುರಕ್ಕೆ ಪ್ರಯಾಣ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರವಾರ ಬೆಂಗಳೂರು ರೈಲು ಸೆ.20ರಿಂದ ಯಶವಂತಪುರ ಬದಲು ಮೆಜೆಸ್ಟಿಕ್ ಮೂಲಕ ಪ್ರಯಾಣ ಆರಂಭಿಸಲಿದೆ. ಇದರಿಂದಾಗಿ ಅರ್ಧ ಗಂಟೆ ಮೊದಲು ತಲುಪಲಿದೆ.

Call us

ಸಂಜೆ 6:20ಕ್ಕೆ ಮೆಜೆಸ್ಟಿಕ್ ಬಿಡುವ ಈ ರೈಲು ಮೊದಲಿನ ಸಮಯಕ್ಕೇ ಕುಂದಾಪುರ ತಲುಪಲಿದೆ. 1:20 ಸುಬ್ರಹ್ಮಣ್ಯ, 1:49 ಕಾಣಿಯೂರು, 2:08 ಪುತ್ತೂರು, 2:39 ಬಂಟ್ವಾಳ, 3:57 ಸುರತ್ಕಲ್, 4:12 ಮುಲ್ಕಿ, 4:20 ಉಡುಪಿ, 4:42 ಬಾರ್ಕೂರು, 4:54 ಕುಂದಾಪುರ, 5:18 ಬೈಂದೂರು, 8:25ಕ್ಕೆ ಕಾರವಾರ ತಲುಪಲಿದೆ.

Call us

ರಾತ್ರಿ 8:05ಕ್ಕೆ ಬೈಂದೂರು, 8:30ಕ್ಕೆ ಕುಂದಾಪುರ ಬಿಡುವ ಈ ರೈಲು, ಬೆಳಗ್ಗೆ 7:15ಕ್ಕೆ ಯಶವಂತಪುರ ಮತ್ತು 8ಕ್ಕೆ ಮೆಜೆಸ್ಟಿಕ್ ತಲುಪಲಿದೆ.

ಕುಂದಾಪುರ – ಬೆಂಗಳೂರು ಪ್ರಯಾಣದಲ್ಲಿ ಪ್ರಯಾಣಿಕರಿಗೆ ಅರ್ದ ಗಂಟೆ ಕಡಿತವಾಗಿದೆ. ಕಾರವಾರ ಸಂಸದ ಅನಂತ್ ಕುಮಾರ್ ಹೆಗಡೆ ಮೂಲಕ ರೈಲ್ವೆ ಯಾತ್ರಿಕರ ಸಂಘ ನಡೆಸಿದ ಪ್ರಯತ್ನ ಯಶಸ್ವಿಯಾಗಿದ್ದು, ಯಶವಂತಪುರ ಮುಂಚಿನ 8 ಗಂಟೆ ಬದಲಿಗೆ 7:25ಕ್ಕೆ ತಲುಪಿ ಮೆಜೆಸ್ಟಿಕ್ 8ಕ್ಕೆ ತಲುಪುತ್ತದೆ. ಬೆಂಗಳೂರಿಂದ ಪಡೀಲ್‌ವರೆಗೆ ಬರುವ ಸಮಯ ಹಾಗೂ ಪಡೀಲ್‌ನಿಂದ ಬೆಂಗಳೂರು ಸಮಯದಲ್ಲಿ ಬದಲಾವಣೆ ಆಗಿಲ್ಲ.

Leave a Reply

Your email address will not be published. Required fields are marked *

7 − four =