‘ಬಣ್ಣದ ಕುಡಿಕೆ’ ಕವನ ಸಂಕಲನ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸುಜಾತ ಸದಾರಾಮ ಅವರ ಚೊಚ್ಚಲ ಕವನ ಸಂಕಲನ ’ಬಣ್ಣದ ಕುಡಿಕೆ’ಯನ್ನು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಆಡಳಿತಾಧಿಕಾರಿಯೂ ಹಾಗೂ ಶ್ರೀಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ, ಹಟ್ಟಿಯಂಗಡಿಯ ಉಪಾಧ್ಯಕ್ಷರೂ ಆದ ಡಾ. ಹೆಚ್. ಶಾಂತಾರಾಮ್ ಲೋಕಾರ್ಪಣೆ ಗೊಳಿಸಿದರು.

ಬದುಕಿನ ಘಟ್ಟಿ ಅನುಭವದ ವಿವಿಧ ವಸ್ತು-ವಿಷಯಗಳನ್ನು ಆಯ್ದುಕೊಂಡು ರಚಿಸಲಾಗಿರುವ ಈ ಕವನ ಸಂಕಲನವು ವಿಭಿನ್ನ ಶೈಲಿಯ ಐವತ್ತೈದು ಕವನಗಳನ್ನು ಒಳಗೊಂಡಿದ್ದು ಇಂತಹ ಇನ್ನಷ್ಟು ಕೃತಿಗಳು ಅವರಿಂದ ಹೊರ ಬರಲಿ ಎಂದು ಗಣ್ಯರು ಶುಭ ಹಾರೈಸಿದರು. ಪಾಲಕ-ಪೋಷಕರಲ್ಲಿ ಮಕ್ಕಳು ಸಾಹಿತ್ಯದ ಕುರಿತು ಒಲವನ್ನು ಬೆಳೆಸಿಕೊಂಡು ಪುಸ್ತಕ ಪ್ರೇಮಿಗಳಾಗುವಂತೆ ಪ್ರೇರೇಪಿಸಲು, ಆ ಮೂಲಕ ವಿವಿಧ ಲೇಖಕರ ಅನುಭವದ ಸಿರಿಯನ್ನು ಪಡೆಯಲು ನೆರವಾಗುವಂತೆ ವಿನಂತಿಸಿದರು. ಈ ಕೃತಿಯಲ್ಲಿನ ’ಬೆಂಕಿಯಲ್ಲಿ ಅರಳಿದ ಹಾಡು’ ಎಂಬ ಕವನ ಒಂದನ್ನು ಕೃತಿಕಾರರು ವಾಚಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್. ಟಿ. ತಿಮ್ಮಪ್ಪ ಹೆಗಡೆ, ಮಾಜಿ ಶಾಸಕರು, ಸಾಗರ ಇವರು ವಹಿಸಿಕೊಂಡಿದ್ದರು. ಸಭೆಯಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ, ಹಟ್ಟಿಯಂಗಡಿಯ ಕಾರ್ಯದರ್ಶಿ ಹೆಚ್. ಬಾಲಚಂದ್ರ ಭಟ್ಟ, ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ ಕುಮಾರ, ಆಡಳಿತಾಧಿಕಾರಿ ವೀಣಾರಶ್ಮಿ ಎಮ್, ಉಪಪ್ರಾಂಶುಪಾಲ ರಾಮ ದೇವಾಡಿಗ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಉದಯ ಕುಮಾರ, ಕಾರ್ಯದರ್ಶಿ ಕೋಟಿ ಪೂಜಾರಿ, ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

19 + 11 =