ಬವಳಾಡಿ ಸಹೋದರನ ಕೊಲೆ ಪ್ರಕರಣ: ಹಲ್ಲೆಗೊಳಗಾದ ಇನ್ನೊರ್ವನ ಸಾವು

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಒಡಹುಟ್ಟಿದ ಅಣ್ಣನನ್ನೆ ಕ್ಷುಲ್ಲಕ ಕಾರಣಕ್ಕಾಗಿ ಕೊಲೆಗೈದು ಪೈಶಾಚಿಕ ಕೃತ್ಯ ನಡೆಸಿದ್ದ ಘಟನೆ ಹಸಿಯಾಗಿರುವಾಗಲೇ ಅಣ್ಣ ತಮ್ಮಂದಿರ ಜಗಳ ತಪ್ಪಿಸುವ ಸಚಿದರ್ಭ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆದಿದ್ದ ಅವರ ಭಾವ ಭಾನುವಾರ ರಾತ್ರಿ ತಮ್ಮ ಮನೆಯ ಬಳಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ವಂಡ್ಸೆ ಮೂಲದ ಬಾಬು (47) ಮೃತಪಟ್ಟ ದುರ್ದೈವಿ

Call us

Call us

Click Here

Visit Now

ಬಿಜೂರು ಗ್ರಾಮದ ಬವಳಾಡಿ ಮೇಲ್ಮಕಿ ಚೌಕಿ ಕುಪ್ಪು ಕೊರಗ ಪುತ್ರನಾದ ಸಂತೋಷ (೨೦) ಮೇ. ೨ರ ತಡರಾತ್ರಿ ಕುಡಿದ ಮತ್ತಿನಲ್ಲಿ, ಕ್ಷುಲ್ಲಕ ಕಾರಣಕ್ಕೆ ತನ್ನ ಒಡಹುಟ್ಟಿದ ಅಣ್ಣನಾದ ನಾಗರಾಜ ಎಂಬುವವನನ್ನು ತನ್ನ ತಂದೆಯ ಊರುಗೋಲಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸುತ್ತಿದ್ದಾಗ, ಅದನ್ನು ತಪ್ಪಿಸಲು ಹೋದ ಅವನ ಬಾವ (ನಾಗರಾಜನ ತಂಗಿಯ ಗಂಡ) ಬಾಬುವಿನ ಮೇಲೂ ಹಲ್ಲೆ ಮಾಡಿದ್ದನು, ತೀವ್ರ ಹಲ್ಲೆಗೊಳಗಾದ ನಾಗರಾಜ ಅದೇ ದಿನ ತಡರಾತ್ರಿ ಮೃತಪಟ್ಟರೇ, ಆತನ ಬಾವನಾದ ಬಾಬು ಅವನನ್ನು ಚಿಕಿತ್ಸೆಗಾಗಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಲಾಗಿತ್ತು.

Click here

Click Here

Call us

Call us

ಆತನನ್ನು ತಪಾಸಣೆ ಮಾಡಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಶನಿವಾರ ಬೆಳಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ತೆರಳುವಂತೆ ಅಲ್ಲಿಂದ ಕಳುಹಿಸಿಕೊಟ್ಟರು, ಆದರೆ ಆತ ಕುಂದಾಪುರಕ್ಕೆ ತೆರಳದೆ ಕೊಲೆಗೀಡಾದ ತನ್ನ ಬಾವ ನಾಗರಾಜನ ಅಂತಿಮ ಸಂಸ್ಕಾರ ಪೂರೈಸಿ ಆ ಬಳಿಕ ಕುಂದಾಪುರಕ್ಕೆ ತೆರಳಲು ಯೋಚನೆ ಮಾಡಿದ್ದನು, ಆದರೆ ಆತ ಒಂದು ದಿನ ಕಳೆದರೂ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ತೆರಳಲಿಲ್ಲ. ತೀವ್ರ ಅಸ್ವಸ್ಥಗೊಂಡಿದ್ದ ಆತ ಭಾನುವಾರ ರಾತ್ರಿ ತಮ್ಮ ಮನೆಯಲ್ಲಿ ಮತ್ತೆ ಕುಡಿದು ಮಲಗಿದ್ದು, ತಡರಾತ್ರಿ ಮೂತ್ರ ವಿಸರ್ಜನೆಗೆ ತೆರಳಿದಾಗ ಹೊರಗಡೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮೃತಪಟ್ಟ ಬಾಬು ವಂಡ್ಸೆ ಮೂಲದವನಾಗಿದ್ದು, ತನ್ನ ಪತ್ನಿಯ ಮನೆಯಲ್ಲಿಯೇ ನೆಲೆಸಿದ್ದನು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read: ► ಕ್ಷುಲ್ಲಕ ಕಾರಣಕ್ಕೆ ಅಣ್ಣನನ್ನೇ ಕೊಲೆಗೈದ ತಮ್ಮ – https://kundapraa.com/?p=32044

Leave a Reply

Your email address will not be published. Required fields are marked *

one × five =