ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ 5 ರ‍್ಯಾಂಕ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಕಳೆದ 2017ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಒಟ್ಟು 5 ರ‍್ಯಾಂಕ್ ಬಂದಿವೆ.

Call us

Call us

ಬಿ.ಎಸ್ಸಿ ಪದವಿ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿ ಅಂಚೆ ಇಲಾಖೆ ಉದ್ಯೋಗಿಗಳಾಗಿರುವ ಉಪ್ಪುಂದದ ಶಿವಾನಂದ ಭಟ್ ಮತ್ತು ಶಾರದಾ ಭಟ್ ದಂಪತಿಯ ಪುತ್ರಿ ಶಾಂಭವಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಕುಂದಾಪುರದ ಕುಂದಪ್ರಭ ಪತ್ರಿಕೆಯ ಸಂಪಾದಕರಾದ ಯು.ಎಸ್.ಶೆಣೈ ಮತ್ತು ಸಾಧನಾ ಶೆಣೈ ದಂಪತಿಯ ಪುತ್ರಿ ಯು. ಸಂಗೀತಾ ಶೆಣೈ ಎಂಟನೇ ರ‍್ಯಾಂಕ್ ಪಡೆದಿದ್ದಾರೆ.

ಬಿ.ಸಿ.ಎ ಪದವಿ ವಿಭಾಗದಲ್ಲಿ ಹೊಸಾಡು ಗ್ರಾಮದ ಗುಜ್ಜಾಡಿಯ ರಾಮ ಪೂಜಾರಿ ಮತ್ತು ರುಕ್ಮಿಣಿ ದಂಪತಿಯ ಪುತ್ರಿ ಸಂಧ್ಯಾ ಐದನೇ ರ‍್ಯಾಂಕ್ ಪಡೆದಿದ್ದಾರೆ. ಮಣಿಪಾಲದ ನಾಗೇಂದ್ರ ಕಾಮತ್ ಅವರ ಪುತ್ರ ಕಾರ್ತಿಕ್ ಎನ್.ಕಾಮತ್ ಹತ್ತನೇ ರ‍್ಯಾಂಕ್ ಪಡೆದಿದ್ದಾರೆ.

Call us

Call us

ಬಿ.ಎ ಪದವಿ ವಿಭಾಗದಲ್ಲಿ ಕುಂದಾಪುರದ ಟಿ . ಬಿ ನಗರದ ಶಂಕರ್ ಮತ್ತು ಜಾನಕಿಯವರ ಪುತ್ರಿ ರಜನಿ ಒಂಬತ್ತನೇ ರ‍್ಯಾಂಕ್ ಪಡೆದಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ವಿಶ್ವಸ್ಥರು, ಪ್ರಾಂಶುಪಾಲರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನುತಿಳಿಸಿದ್ದಾರೆ.

Leave a Reply

Your email address will not be published. Required fields are marked *

2 × four =