ಮಂಗಳೂರು ವಿ.ವಿ ಪದವಿ ಪರೀಕ್ಷೆ: ಭಂಡಾರ್ಕಾರ‍್ಸ್ ಕಾಲೇಜಿಗೆ ಏಳು ರ‍್ಯಾಂಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ೨೦೧೯ರ ಏಪ್ರಿಲ್‌ನಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿಗೆ ಏಳು ರ‍್ಯಾಂಕ್‌ಗಳು ಬಂದಿವೆ. ಕಾಲೇಜಿನ ಬಿ.ಸಿ.ಎ ಪದವಿಯಲ್ಲಿ ನಾಲ್ಕು ರ‍್ಯಾಂಕ್‌ಗಳು, ಮತ್ತು ಬಿ.ಎಸ್.ಸಿ, ಬಿ.ಬಿ.ಎ ಮತ್ತು ಬಿ.ಎ ಪದವಿಗೆ ತಲಾ ಒಂದು ರ‍್ಯಾಂಕ್‌ಗಳು ಬಂದಿವೆ.

ಕಾಲೇಜಿನ ಬಿ.ಎಸ್.ಸಿ. ಪದವಿಯಲ್ಲಿ 3ನೇ ರ‍್ಯಾಂಕ್ ಪಡೆದಿರುವ ಸಹನಾ ಕುಂದಾಪುರದ ಬೀಜಾಡಿ ಗ್ರಾಮದ ನಾರಾಯಣ ದೇವಾಡಿಗ ಅವರ ಪುತ್ರಿಯಾಗಿದ್ದಾರೆ.

ಕಾಲೇಜಿನ ಬಿ.ಸಿ.ಎ ಪದವಿಯಲ್ಲಿ ಕುಂದಾಪುರದ ವಡೆರಹೋಬಳಿಯ ಸುರೇಶ ಬಿ. ಬಂಗೇರ ಮತ್ತು ಪಾರ್ವತಿ ದಂಪತಿಗಳ ಪುತ್ರ ಪ್ರತ್ವಿಕ್ ಎಸ್.ಬಂಗೇರ ನಾಲ್ಕನೇ ರ‍್ಯಾಂಕ್, ಮೇಲ್‌ಹೊಸೂರು ಗ್ರಾಮದ ಚಂದ್ರಶೇಖರ ಅವರ ಪುತ್ರಿ ಸ್ವಾತಿ ಎಂಟನೇ ರ‍್ಯಾಂಕ್, ಚಿತ್ತೂರು ಗ್ರಾಮದ ನಾರಾಯಣ ಶೆಟ್ಟಿ ಮತ್ತು ರುದ್ರಮ್ಮ ದಂಪತಿಯ ಪುತ್ರಿ ರಮ್ಯ ಒಂಬತ್ತನೇ ರ‍್ಯಾಂಕ್, ಮತ್ತು ಆಲೂರು ಗ್ರಾಮದ ಭಾಸ್ಕರ ಅವರ ಪುತ್ರ ಸುಜನ್ 10ನೇ ರ‍್ಯಾಂಕ್ ಬಂದಿವೆ.

ಬಿ.ಬಿ.ಎ ಪದವಿಯಲ್ಲಿ ಕುಂದಾಪುರದ ಕೆದೂರು ಗ್ರಾಮದ ಶಂಕರ ಶೆಟ್ಟಿ ಅವರ ಪುತ್ರಿ ಶೆಟ್ಟಿ ಪ್ರಿಯಾಂಕಾ ಶಂಕರ ಆರನೇ ರ‍್ಯಾಂಕ್ ಪಡೆದಿದ್ದಾರೆ. ಕಾಲೇಜಿನ ಬಿ.ಎ ಪದವಿಯಲ್ಲಿ ಬ್ರಹ್ಮಾವರದ ಹತ್ತಿರದ ಆರೂರು ಗ್ರಾಮದ ಆನಂದ ರಾವ್‌ರ ಪುತ್ರಿ ಎ. ಅಂಬಿಕಾ ರಾವ್ ಏಳನೇ ರ‍್ಯಾಂಕ್ ಪಡೆದಿದ್ದಾರೆ. ರ‍್ಯಾಂಕ್ ಪಡೆದಿರುವವರೆಲ್ಲರಿಗೂ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

4 × 5 =