ಬ್ಯೂಟಿ ಬೈಂದೂರು ಸ್ವರ್ಧೆ : ‘ರುಪೀ ಮಾಲ್’ನಲ್ಲಿ ರೂಪದರ್ಶಿ ಆಗಬಯಸುವವರಿಗೊಂದು ಅವಕಾಶ

ಕುಂದಾಪ್ರ ಡಾಟ್ ಕಾಂ’ ಸುದ್ದಿ
ಬೈಂದೂರು: ಇಲ್ಲಿನ ಪ್ರಥಮ ಶಾಪಿಂಗ್ ಮಾಲ್ ’ರುಪೀ ಮಾಲ್’ ಎ.೬ರ ಯುಗಾದಿಯಂದು ಬೈಂದೂರು ಮುಖ್ಯರಸ್ತೆಯ ಸಿಟಿ ಪಾಯಿಂಟ್‌ನಲ್ಲಿ ಶುಭಾರಂಭಗೊಂಡಿದ್ದು, ಸಂಸ್ಥೆಯ ಅಧಿಕೃತ ರೂಪದರ್ಶಿಯಾಗಿ ಕಾಣಿಸಿಕೊಳ್ಳಲು ಬೈಂದೂರು ಸುತ್ತಲಿನ ಯುವತಿಯರನ್ನು ಆಹ್ವಾನಿಸಿದ್ದು, ಬ್ಯೂಟಿ ಬೈಂದೂರು ಸ್ವರ್ಧೆಯನ್ನು ಆಯೋಜಿಸಿದೆ.

18 ರಿಂದ 25 ವರ್ಷದ ಸುಂದರ ಯುವತಿಯರು ’ಬ್ಯೂಟಿ ಬೈಂದೂರು’ ಸ್ವರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಸ್ವರ್ಧೆಯ ವಿಜೇತರ ಪೋಟೋಗಳು ಸಂಸ್ಥೆಯ ಮುದ್ರಣ ಮತ್ತು ಹೊರಾಂಗಣ ಜಾಹೀರಾತು ಫಲಕಗಳಲ್ಲಿ ಒಂದು ವರ್ಷದ ಅವಧಿಗೆ ಕಾಣಿಸಿಕೊಳ್ಳಲಿದೆ. ಅಲ್ಲದೇ ಸ್ವರ್ಧೆಯಲ್ಲಿ ವಿಜೇತರಾದವರಿಗೆ ರೂ. 10,000ದ ಗಿಫ್ಟ್ ವೋಚರ್ ಹಾಗೂ ರನ್ನರ್ ಅಪ್ ಆಗುವವರಿಗೆ ರೂ.5000ದ ಗಿಫ್ಟ್ ವೋಚರ್ ಬಹುಮಾನವಾಗಿ ನೀಡಲಾಗುತ್ತದೆ. ಆಸಕ್ತ ಯುವತಿಯರು 9611917204 ಸಂಖ್ಯೆಗೆ ವಾಟ್ಸಪ್ ಮೂಲಕ ಒಂದು ಕ್ಲೂಸಪ್ ಪೋಟೋ ಹಾಗೂ ಒಂದು ಪುಲ್ ಸೈಜ್ ಪೋಟೋವನ್ನು ಎಪ್ರಿಲ್ 30ರ ಒಳಗೆ ಕಳುಹಿಸಬಹುದಾಗಿದೆ.

ಮೊದಲ ಸುತ್ತಿನಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನಲ್ಲಿ ಭಾಗವಹಿಸಲು ಕರೆಮಾಡಿ ತಿಳಿಸಲಾಗುತ್ತದೆ. ಎರಡನೇ ಸುತ್ತಿನಲ್ಲಿ ಆಯ್ಕೆಯಾಗುವ 10 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಅಂತಿಮ ಸುತ್ತಿಗೆ ಆಯ್ಕೆಯಾಗುವವರಿಗೆ ಗಿಫ್ಟ್ ವೋಚರ್ ನೀಡಲಾಗುತ್ತದೆ. ಎಲ್ಲಾ ಗಿಫ್ಟ್ ವೋಚರ್‌ಗಳನ್ನು ರುಪೀ ಮಾಲ್‌ನ ಫ್ಯಾಶನ್ ಸ್ಟೋರ್‌ನಲ್ಲಿ ಬಳಸಬಹುದಾಗಿದೆ.

ಹೈಪರ್ ಮಾರ್ಕೆಟ್ ಆರಂಭಗೊಂಡ ಬಳಿಕ ಎಲ್ಲಾ ರೀತಿಯ ಗ್ರೋಸರಿಗಳು, ತಾಜಾ ತರಕಾರಿಗಳು, ಮೀನು, ಹಲಾಲ್ ಚಿಕನ್, ಮಟನ್, ಎಲ್ಲಾ ಬಗೆಯ ಪ್ಲಾಸ್ಟಿಕ್ ವಸ್ತುಗಳು, ಸ್ಟೀಲ್ ವಸ್ತುಗಳು, ಗೃಹೋಪಯೋಗಿ ಸಾಮಾಗ್ರಿಗಳು, ಮೊಬೈಲ್ ಪೋನ್ ಹಾಗೂ ಇನ್ನಿತರ ವಸ್ತುಗಳು ಆಕರ್ಷಕ ಆಫರ್‌ನೊಂದಿಗೆ ರುಪೀ ಮಾಲ್‌ನಲ್ಲಿ ಮಾರಟವಾಗುತ್ತಿದೆ. ೫೦% ಆಫರ್ ಕ್ಯಾಂಪೆನ್ ಆರಂಭಗೊಂಡ ಬಳಿಕ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ೬೦ ದಿನಗಳ ಅವಧಿಯಲ್ಲಿ ರುಪೀ ಮಾಲ್‌ನಲ್ಲಿ ರೆಸ್ಟೋರೆಂಟ್, ಜ್ಯುವೆಲ್ಲರಿ, ಬ್ಯೂಟಿ ಪಾರ್ಲರ್, ಎಲೆಕ್ಟ್ರಾನಿಕ್ಸ್ ಶಾಪ್, ಒಳಾಂಗಣ ಕ್ರೀಡೆಗಳು ಮೊದಲಾದವುಗಳು ಆರಂಭಗೊಳ್ಳಲಿದ್ದು, ವಾರಾಂತ್ಯದ ವಿಹಾರ ತಾಣವಾಗಿ ಮಾರ್ಪಾಡಾಗಲಿದೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇರುವ ಯುವತಿಯರಿಗೆ ಇದೊಂದು ಸದವಕಾಶವಾಗಿದ್ದು ಗುಣಮಟ್ಟದ ಪೋಟೋವನ್ನು ವಾಟ್ಸಪ್ ಮಾಡುವ ಮೂಲಕ ಈ ಸ್ವರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

Leave a Reply

Your email address will not be published. Required fields are marked *

five × 1 =