ವಿಸ್ಮಯಕಾರಿ ತಾಣ ‘ಬೆಳ್ಕಲ್ ತೀರ್ಥ’

Call us

Call us

ಗೋವಿಂದತೀರ್ಥಎಂದು ಕರೆಯುವ ಈ ಜಲಧಾರೆಯಡಿ ಮಿಂದರೆ ಪಾಪ ನಾಶವಾಗಿ ನವಚೈತನ್ಯ ಮೂಡುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಪ್ರತಿ ವರ್ಷ ಎಳ್ಳಮವಾಸ್ಯೆಯ ದಿನ ಸಾವಿರಾರು ಮಂದಿ ಬೆಟ್ಟ-ಗುಡ್ಡವನ್ನು ಹತ್ತಿ ಜಲಧಾರೆಯ ಸೊಬಗನ್ನು ಸವಿಯಲು ಬರುತ್ತಾರೆ.

Click Here

Call us

Call us

ಇರುವುದೆಲ್ಲಿ? ಬೆಳ್ಕಲ್ ತೀರ್ಥ ಕೊಲ್ಲೂರು ಸಮೀಪದ ಜಡ್ಕಲ್ ಎಂಬ ಗ್ರಾಮದಲ್ಲಿದೆ. ಐದು ಕಿ. ಮೀ. ದೂರ ದುರ್ಗಮ ಕಾಡಿನಲ್ಲಿ ಸಂಚರಿಸಬೇಕಾದ ಕಾರಣ ವಾಹನಗಳ ಮೂಲಕ ಬಂದು, ದೂರದಲ್ಲೇ ನಿಲ್ಲಿಸಿ ಟ್ರೆಕ್ಕಿಂಗ್ ಕೈಗೊಳ್ಳುವುದು ಸೂಕ್ತ.

Click here

Click Here

Call us

Visit Now

ಜಲಧಾರೆ: ಸುಮಾರು 600 ಅಡಿ ಎತ್ತರದಿಂದ ಧುಮ್ಮಿಕ್ಕುವುದೇ ಬೆಳ್ಕಲ್ ತೀರ್ಥ. ಕೊಡಚಾದ್ರಿ ಬೆಟ್ಟದ ಹಿಮ್ಮುಖವಾದ ಬಂಡೆಯ ಮೇಲೆ ಕವಲು ಕವಲಾಗಿ ಜಲಧಾರೆ ಇಳಿದು ಮುತ್ತಿನ ಹನಿಗಳ ಮಾಲೆಯನ್ನು ಸೃಷ್ಟಿಸುವ ಪರಿಯೇ ಸೊಗಸು.

ಗೋವಿಂದನ ಮಹಿಮೆ: ಬೆಳ್ಕಲ್ ತೀರ್ಥಕ್ಕೆ ಗೋವಿಂದ ತೀರ್ಥ ಎಂಬ ಹೆಸರು ಬರಲು ಮುಖ್ಯ ಕಾರಣವೂ ಇದೆ. ಜಲಧಾರೆಯ ಕೆಳಗೆ ನಿಂತು ಮೇಲಕ್ಕೆ ಮುಖ ಮಾಡಿ ‘ಗೋವಿಂದಾ’ ಎಂದು ಗೋವಿಂದನ ನಾಮ ಜಪ ಮಾಡಿದರೆ ಜಲಧಾರೆಯ ನೀರು ಅತ್ತಕಡೆಯಿಂದ ವೇಗವಾಗಿ ಸಾಗಿಬಂದು ಆಶೀರ್ವಾದದ ರೂಪದಲ್ಲಿ ತಲೆಯ ಮೇಲೆ ಬಂದು ಸುರಿಯುತ್ತದೆ ಎಂಬ ನಂಬಿಕೆಯಿದೆ.

ಸ್ಟೇ ವ್ಯವಸ್ಥೆ ಮಾಡಿಕೊಳ್ಳಿ: ಬೆಳ್ಕಲ್ ತೀರ್ಥ ಚಾರಣ ಕೈಗೊಳ್ಳುವುದಾದರೆ ಫುಡ್, ಸ್ಟೇ ಬಗ್ಗೆ ಕೊಲ್ಲೂರಿನಲ್ಲೇ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. ಬೆಳ್ಕಲ್, ಜಡ್ಕಲ್‌ನಲ್ಲಿ ಸಣ್ಣಪುಟ್ಟ ಅಂಗಡಿ, ಹೋಟೆಲ್ ಗಳು ಸಿಗುತ್ತವಾದರೂ ಸದಾಕಾಲ ಊಟ, ತಿಂಡಿ ಸಿಗುವ ಖಾತ್ರಿಯಿರುವುದಿಲ್ಲ. ಹಾಗಾಗಿ ಪ್ರವಾಸ ಕೈಗೊಳ್ಳುವ ಮೊದಲೇ ಈ ಬಗ್ಗೆ ವ್ಯವಸ್ಥೆ ಮಾಡಿಕೊಳ್ಳಬೇಕು.

Call us

ಎಷ್ಟು ದೂರ? ಬೆಳ್ಕಲ್ ತೀರ್ಥ ಕೊಲ್ಲೂರಿನಿಂದ 14 ಕಿ.ಮೀ. ದೂರದಲ್ಲಿದೆ. ಜಡ್ಕಲ್‌ನಿಂದ 12 ಕಿ. ಮೀ., ಮುದೂರು ಹಳ್ಳಿಯಿಂದ 8 ಕಿ. ಮೀ., ಉಡುಪಿಯಿಂದ 92, ಮಂಗಳೂರಿನಿಂದ 150, ಬೆಂಗಳೂರಿನಿಂದ 443 ಕಿ.ಮೀ. ದೂರದಲ್ಲಿದೆ.

ಬೆಳ್ಕಲ್ ತೀರ್ಥಕ್ಕೆ ಹೋಗಲು ಕೊಲ್ಲೂರಿನಿಂದ ಐದು ಕಿ.ಮೀ. ಹಿಂದಕ್ಕೆ ಸಿಗುವ ಹಾಲ್ಕಲ್ ಜಂಕ್ಷನ್ನಿನಿಂದ ಬಲಭಾಗಕ್ಕೆ ಜಡ್ಕಲ್ ಮಾರ್ಗವಾಗಿ ಮುಂದಕ್ಕೆ ಸಾಗಬೇಕು. ಜಡ್ಕಲ್ ದಾಟಿ ಮುಂದಕ್ಕೆ ಮುದೂರು ಕಡೆ ಹೋದರೆ ಅಲ್ಲಿಂದ ಕಚ್ಛಾರಸ್ತೆಯಲ್ಲಿ ಐದು ಕಿ. ಮೀ. ಸಾಗಿದಾಗ ದೇವಸ್ಥಾನ ಎದುರಾಗುತ್ತದೆ. ಅಲ್ಲಿ ವಾಹನ ನಿಲ್ಲಿಸಿ ದುರ್ಗಮ ಕಾಡಿನಲ್ಲಿ ಚಾರಣ ಕೈಗೊಂಡರೆ ಬೆಳ್ಕಲ್ ತೀರ್ಥ ತಲುಪಬಹುದು. ಬೆಳ್ಕಲ್ ತೀರ್ಥಕ್ಕೆ ಹೋಗುವ ರಸ್ತೆ ಇನ್ನೂ ಸುಧಾರಿಸದ ಕಾರಣ ಬೈಕ್, ಕಾರಿನ ಸಂಚಾರ ತುಸು ಕಷ್ಟ. ಜೀಪ್ ವಾಹನ ರಸ್ತೆಗೆ ಸೂಕ್ತವಾಗಿದೆ.

-ಶಶಿಧರ, ಬೆಳ್ಳಾಯರು

_MG_8336 _MG_8261 _MG_8276

Leave a Reply

Your email address will not be published. Required fields are marked *

seventeen − 4 =