ಕಲಾಕ್ಷೇತ್ರ ಕುಂದಾಪುರ: ಭಜನ್ ಸಂಧ್ಯಾ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ದಶಮಾನೋತ್ಸವ ಸಂಭ್ರಮದಲ್ಲಿರುವ ಕಲಾಕ್ಷೇತ್ರ ಕುಂದಾಪುರ ಸಂಸ್ಥೆ ಆಯೋಜಿಸಿದ ಪ್ರಕಾಶ ಯಡಿಯಾಳ್ ಹಾಗೂ ಅವಿನಾಶ್ ಹೆಬ್ಬಾರ್ ಸಂಸ್ಮರಣೆಯ ಭಜನ್ ಸಂಧ್ಯಾ ಕಾರ್ಯಕ್ರಮ ಬೋರ್ಡ್ ಹೈಸ್ಕೂಲು ಬಯಲು ರಂಗಮಂದಿರದಲ್ಲಿ ಶನಿವಾರ ಜರುಗಿತು.

ಉಸ್ತಾದ್ ಹುಮಾಯುನ್ ಹರ್ಲಾಪುರ್ ಶಿವಮೊಗ್ಗ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಜರುಗಿತು. ತಬಲದಲ್ಲಿ ವಿದ್ವಾನ್ ಅಕ್ಷಯ್ ಜೋಶಿ ಹುಬ್ಬಳ್ಳಿ, ಸಹಗಾಯನದಲ್ಲಿ ನಿಶಾದ್ ಹರ್ಲಾಪುರ್, ಹಾರ್ಮೊನಿಯಂನಲ್ಲಿ ವಿದ್ವಾನ್ ಭರತ್ ಹೆಗಡೆ ಶಿರಸಿ, ತಂಬೂರಿಯಲ್ಲಿ ದಿಲ್‌ಶಾದ್ ಹರ್ಲಾಪುರ್ ಸಹಕರಿಸಿದರು.

ಪ್ರಕಾಶ ಯಡಿಯಾಳ್ ಹಾಗೂ ಅವಿನಾಶ್ ಹೆಬ್ಬಾರ್ ಅವರ ಭಾವಚಿತ್ರಕ್ಕೆ ಪುಪ್ಪ ಅರ್ಪಿಸಿದ ಖುಷಿ ಯಡಿಯಾಳ್, ಧ್ವನಿ ಯಡಿಯಾಳ್ ಅವ್ಯಕ್ತ ಹೆಬ್ಬಾರ್ ಹಾಗೂ ಅಲಕಾ ಹೆಬ್ಬಾರ್ ನುಡಿನಮನ ಸಲ್ಲಿಸಿದರು.

ಚಕ್ರೇಶ್ ಯಡಿಯಾಳ್ ಕಲಾವಿದರನ್ನು ಗೌರವಿಸಿದರು. ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಕುಂದಾಪುರ ಪ್ರಸ್ತಾವಿಕ ಮಾತುಗಳನ್ನಾಡಿದರು.

ಭಜನ್ ಸಂಧ್ಯಾಕ್ಕೂ ಮುನ್ನ ಸುಮುಖ ಆಚಾರ್ಯ ಅವರಿಂದ ಸಿತಾರ್ ವಾದನ ಜರುಗಿತು. ರಾಜೇಶ್ ಭಾಗವತ್ ತಬಲಾ ವಾದಕರಾಗಿ ಸಹಕರಿಸಿದರು.

 

Leave a Reply

Your email address will not be published. Required fields are marked *

two + seventeen =