ಭಂಡಾರಿ ಸಮಾಜ ಸಂಘ: ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿವೇತನ ವಿತರಣೆ

Call us

Call us

ಬೈಂದೂರು: ಸಂಘಟನೆಯಿಂದ ಸಮುದಾಯದ ಸದಸ್ಯರ ಸಂಪರ್ಕ ಬೆಳೆದು ಪರಿಚಯದೊಂದಿಗೆ ಸಂಬಂಧ ಬೆಳೆಯಲು ಸಹಕಾರಿಯಾಗುತ್ತದೆ. ಮಹಿಳೆಯರು ಹೆಚ್ಚಿನ ಮುತುವರ್ಜಿಯಿಂದ ಸಂಘಟನೆಯಲ್ಲಿ ಪಾಲ್ಗೊಂಡು ಸಮುದಾಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಂಘವನ್ನು ಬಲಪಡಿಸಬೇಕು ಎಂದು ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉಡುಪಿ ಸತೀಶ್ ಭಂಡಾರಿ ಹೇಳಿದರು.

Click here

Click Here

Call us

Call us

Visit Now

Call us

Call us

ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಬೈಂದೂರು ವಲಯ ಭಂಡಾರಿ ಸಮಾಜ ಸಂಘದ ದ್ವಿತೀಯ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಂಘಟನೆಯನ್ನು ಬಲಪಡಿಸುವುದರ ಮೂಲಕ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಟಿವಿ, ಮೊಬೈಲ್‌ಗಳಿಂದ ಇಂದು ಮಕ್ಕಳ ಶಿಕ್ಷಣ ಹಾಳಾಗುತ್ತಿದೆ. ಇದರ ಬದಲಾಗಿ ಶಿಕ್ಷಣದ ಜೊತೆ ಸಾಹಿತ್ಯ, ಕಲೆ, ಕ್ರೀಡಾ ಕ್ಷೇತ್ರಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ವಲಯದ ಅಧ್ಯಕ್ಷ ಬಾಬು ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಹೆಮ್ಮಾಡಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ನಾಡಾ ಗ್ರಾಪಂ ಸದಸ್ಯೆ ಮನೋರಮಾ ರಾಜು ಭಂಡಾರಿ, ಹಕ್ಲಾಡಿ ಗ್ರಾಪಂ ಸದಸ್ಯ ಸುಭಾಷ್ ಭಂಡಾರಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿವೃತ್ತ ಅಧಿಕಾರಿ ಸಹದೇವ ಭಂಡಾರಿ, ಹಿರಿಯ ವೃತ್ತಿ ಬಾಂಧವ ಮಂಜು ಭಂಡಾರಿ ಕಡಾಟಿ, ರಾಷ್ಟ್ರಮಟ್ಟದ ನೆಟ್‌ಬಾಲ್ ಕ್ರೀಡಾಪಟು ಶಿಲ್ಪಾ ಸಾಲಿಮಕ್ಕಿ, ಮಂಗಳೂರು ವಿ.ವಿ. ತಂಡದ ಕಬ್ಬಡಿ ಆಟಗಾರ ಧನ್ಯಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು. ಸಮುದಾಯದ ಅರ್ಹ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಭಾಭವನದ ಮಾಲಿಕ ಮಂಜು ದೇವಾಡಿಗ ಉಪಸ್ಥಿತರಿದ್ದರು.

ನಿಧಿ ಪ್ರಾರ್ಥಿಸಿದರು. ಕಾರ್ಯದರ್ಶಿ ನಾಗೇಶ ಭಂಡಾರಿ ಪ್ರಾಸ್ತಾವಿಸಿ, ನಿರೂಪಿಸಿದರು. ನಯನ್ ಕುಮಾರ್ ಹೆಮ್ಮಾಡಿ ಸ್ವಾಗತಿಸಿ, ಸಂದೀಪ್ ಭಂಡಾರಿ ವಂದಿಸಿದರು. ಬೆಳಿಗ್ಗೆ ಸಮುದಾಯದವರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.

news Nayak Bhandari Sangha1 ??????????????????????????????? ??????????????????????????????? ???????????????????????????????

Call us

Leave a Reply

Your email address will not be published. Required fields are marked *

three × two =