ಭಾರತ್ ಗ್ಯಾಸ್ ‘ಕಿಚನ್ ಚಾಂಪ್’ ಅಡುಗೆ ಸ್ವರ್ಧೆ: ವಿಜೇತರಿಗೆ ಆಕರ್ಷಕ ನಗದು ಬಹುಮಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಭಾರತ್ ಗ್ಯಾಸ್ ತನ್ನ ಗ್ರಾಹಕರಿಗಾಗಿ ಆಯೋಜಿಸಲಾಗಿರುವ ಅಡುಗೆ ಸ್ಪರ್ಧೆ ‘ಕಿಚನ್ ಚಾಂಪ್’ನಲ್ಲಿ ಭಾಗವಹಿಸಲು ಮೇ.31 ಕೊನೆಯ ದಿನವಾಗಿದೆ. ರಾಷ್ಟಮಟ್ಟದ ವಿಜೇತರಿಗೆ ರೂ. 51,000, ರನ್ನರ್ ಅಪ್ಗೆ ರೂ.25,000 ಹಾಗೂ 5 ಮಂದಿಗೆ ರೂ.10,000 ಬಹುಮಾನವಿದೆ. ರಾಜ್ಯಮಟ್ಟದಲ್ಲಿ ವಿಜೇತರಾಗುವವರಿಗೂ ಬಹುಮಾನವಿದ್ದು ಇದರೊಂದಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಬೈಂದೂರಿನ ಶಾತೇರಿ ಕಾಮಾಕ್ಷಿ ಎಂಟರ್ಪ್ರೈಸಸ್ನ ಗ್ರಾಹಕರಿಗೆ ಪ್ರತ್ಯೇಕವಾಗಿ ತಲಾ ರೂ.10,000 ಬಹುಮಾನವನ್ನು ಘೋಷಿಸಲಾಗಿದೆ.

Call us

Call us

ಸ್ವರ್ಧೆಯ ನಿಯಮಗಳು: ಸ್ವರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ನೀವು ತಯಾರಿಸುವ ಅಡುಗೆಗೆ ಬೇಕಾದ ಪದಾರ್ಥ, ಮಾಡುವ ವಿಧಾನ, ನಿಮ್ಮ ಹೆಸರು, ವಿಳಾಸ, ರಾಜ್ಯ ಹಾಗೂ ಸಂಪರ್ಕ ವಿವರಗಳನ್ನು ಲಿಖಿತ ರೂಪದಲ್ಲಿಯೇ ಸಲ್ಲಿಸಬೇಕು. ಇದರೊಂದಿಗೆ ಮೊಬೈಲ್ ಪೋನ್ ಅಡ್ಡಲಾಗಿ ಇರಿಸಿ ಎಂಪಿ-4 ಪಾರ್ಮ್ಯಾಟಿನಲ್ಲಿ 2 ನಿಮಿಷ ಮೀರದಂತೆ ಅಡುಗೆ ತಯಾರಿಯ ಸಣ್ಣ ವೀಡಿಯೋ ಮಾಡಿ ಕಳುಹಿಸಬೇಕು. ಸ್ವರ್ಧೆಯಲ್ಲಿ ಭಾಗವಹಿಸಲು ಮೇ.31 ಕೊನೆಯ ದಿನವಾಗಿದೆ.

ಅಡಗೆಯ ವೀಡಿಯೋ ಹಾಗೂ ಲಿಖಿತ ರೂಪದ ಮಾಹಿತಿಯನ್ನು [email protected] ಗೆ ಈಮೇಲ್ ಮಾಡುವುದು. ವಿಡಿಯೋ ಫೈಲ್ 25ಎಂಬಿಗಿಂತ ಹೆಚ್ಚಿದ್ದರೆ ವಿ-ಟ್ಯಾನ್ಸ್’ಫರ್ ಮೂಲಕ ಕಳುಹಿಸಬೇಕು. ಒಬ್ಬ ಸ್ವರ್ಧಿಯಿಂದ ಒಂದು ವಿಡಿಯೋ ಮಾತ್ರ ಸ್ವೀಕರಿಸಲಾಗುವುದು ಪ್ರತಿ ರಾಜ್ಯದಿಂದ 3 ಟಾಪ್ ವಿಜೇತರು ಆಲ್ ಇಂಡಯಾ ಫಿನಾಲೆಗೆ ಆಯ್ಕೆಯಾಗುವರು. ರಾಷ್ಟ್ರೀಯ ವಿಜೇತರನ್ನು ಖ್ಯಾತ ಚೆಫ್ ಅಜಯ್ ಚೋಪ್ರಾ ನಿರ್ಧರಿಸುತ್ತಾರೆ.

Call us

Call us

ರಾಜ್ಯಮಟ್ಟದಲ್ಲಿ ವಿಜೇತರಾಗುವ ಸ್ವರ್ಧಿಗಳಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನವಿದ್ದು, ಕ್ರಮವಾಗಿ ರೂ.5,000, ರೂ.2,000 ಹಾಗೂ 3,000ರೂ ನೀಡಲಾಗುತ್ತದೆ. ಇದರೊಂದಿಗೆ ರಾಷ್ಟ್ರಮಟ್ಟದಲ್ಲಿ ವಿಜೇತರಾಗುವವರಿಗೆ ಶಾತೇರಿ ಕಾಮಾಕ್ಷಿ ಎಂಟರ್ಪ್ರೈಸಸ್ನಿಂದ ತಲಾ ರೂ.10,000 ನಗದು ಬಹುಮಾನವನ್ನು ನೀಡಲಾಗುತ್ತದೆ.

ಬೈಂದೂರು ಶಾತೇರಿ ಕಾಮಾಕ್ಷಿ ಎಂಟರ್ಪ್ರೈಸಸ್ನ ಗ್ರಾಹಕರು ತಾವು ಸಿದ್ಧಪಡಿಸಿದ ವೀಡಿಯೋವನ್ನು ಬೈಂದೂರು ಗ್ಯಾಸ್ ಏಜನ್ಸಿಗೆ ನಿಮ್ಮ ಗ್ಯಾಸ್ ನಂಬರ್ ಹಾಗೂ ನಿಮ್ಮ ವಿವರಗಳೊಂದಿಗೆ ವಾಟ್ಸಪ್ ಮಾಡಬಹುದು – ವಾಟ್ಸಪ್ ಸಂಖ್ಯೆ 7026207246

ಹೆಚ್ಚಿನ ಮಾಹಿತಿಗಾಗಿ – 0854-251927

Leave a Reply

Your email address will not be published. Required fields are marked *

1 × 1 =