ಕೊಲ್ಲೂರು: ಅಮೂಲ್ಯ ಮಂಜ ಅವರ ಭರತನಾಟ್ಯ ಪ್ರದರ್ಶನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವದಲ್ಲಿ ಹೈದರಬಾದಿನ ಭರತನಾಟ್ಯ ಕಲಾವಿದೆ ಮಾರಣಕಟ್ಟೆ ಅಮೂಲ್ಯ ಮಂಜ ಅವರ ಭರತನಾಟ್ಯ ಪ್ರದರ್ಶನ ನಡೆಯಿತು.

Call us

Call us

Visit Now

ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹೈದರಬಾದ್‌ನ ಹೋಟೆಲ್ ಉದ್ಯಮಿ, ಸಮಾಜ ಸೇವಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹಾಗೂ ಶಾಂತಿ ಕೆ. ಮಂಜ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ ಚಿತ್ತೂರು, ರಮೆಶ್ ಗಾಣಿಗ ಕೊಲ್ಲೂರು, ರಾಜೇಶ್ ಕಾರಂತ ಉಪ್ಪಿನಕುದ್ರು, ಕೆ.ವಿ. ಶ್ರಿಧರ ಅಡಿಗ ಕೊಲ್ಲೂರು, ಅಂಬಿಕಾ ದೇವಾಡಿಗ, ನರಸಿಂಹ ಹಳಗೇರಿ, ಜಯಂತಿ ವಿಜಯಕೃಷ್ಣ, ಕ್ಷೇತ್ರ ಸಿಬ್ಬಂದಿ ವರ್ಗ ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು.

Click Here

Click here

Click Here

Call us

Call us

ಅಮೂಲ್ಯ ಅವರು ಗಜವದನ, ಪುಷ್ಪಾಂಜಲಿ, ತ್ರಿಶಕ್ತಿ ದರ್ಶನ, ಭೋಷಂಬೋ, ಶ್ರೀ ಮೂಕಾಂಬಿಕಾ ಸ್ತೋತ್ರ’ದ ಭರತನಾಟ್ಯ ಪ್ರದರ್ಶನವನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ದೇವಸ್ಥಾನದ ಅರ್ಚಕ ನರಸಿಂಹ ಅಡಿಗ ಅವರು ಈ ಸಂದರ್ಭ ಮಾತನಾಡಿ ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾದ ಭರತ ನಾಟ್ಯ ಕಲಾ ಪ್ರಪಂಚದ ಶ್ರೇಷ್ಟ ಕಲೆಗಳಲ್ಲಿ ಒಂದು. ಅಮೂಲ್ಯ ಅವರು ದೂರದ ಹೈದರಬಾದಿನಲ್ಲಿ ಈ ಕಲೆಯನ್ನು ಅಭ್ಯಸಿಸಿ ಅದರಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ನವರಾತ್ರಿಯ ಈ ಸಂದರ್ಭ ಕೊಲ್ಲೂರಿಗೆ ಆಗಮಿಸಿ ಕಾರ್ಯಕ್ರಮ ನೀಡಿದ ಅಮೂಲ್ಯ ಮಂಜ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಅಮೂಲ್ಯ ಅವರಿಗೆ ದೇವಿ ಪ್ರಸಾದ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *

3 × 2 =