ಭೋಜಪುರಿ ಭಾಷೆಯಲ್ಲಿ ಕತ್ತಲೆಕೋಣೆ ಸಿನಿಮಾ ಬಿಡುಗಡೆಗೆ ನಿರ್ಮಾಪಕನ ಒಲವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಕತ್ತಲೆಕೋಣೆ ಕನ್ನಡ ಸಿನಿಮಾದ ಮೇಲೆ ಭೋಜಪುರಿ ನಿರ್ಮಾಪಕರು ಆಸಕ್ತಿ ತೋರಿಸಿ, ಭೋಜಪುರಿ ಭಾಷೆಯಲ್ಲಿ ಸಿನೆಮಾ ಬಿಡುಗಡೆಗೆ ಒಲವು ತೋರಿದ್ದಾರೆ.

Click Here

Call us

Call us

ಸಿನೆಮಾದಲ್ಲಿ ಪತ್ರಕರ್ತನೊರ್ವ ನೈಜ ಘಟನೆಯನ್ನು ಆಧರಿಸಿ ವರದಿಗೆ ತೆರಳುವ ಕಥೆ ಒಂದೆಡೆಯಾದರೆ, ಒರ್ವ ಬಾಲಕನ ಮುಗ್ದ ಮನಸ್ಸಿನ ಮೇಲೆ ಬೀಳುವ ಪರಿಣಾಮದಿಂದ ಆತ ಮಾನಸಿಕ ಖಿನ್ನತೆಗೆ ಒಳಗಾಗಿ ನರಳಾಡುವ ದೃಶ್ಯದ ನಿರೂಪಣೆ ಕಥೆಯ ಇನ್ನೊಂದು ಭಾಗ. ಇದೀಗ ಈ ಸಿನಿಮಾ ಮರಾಠಿಯಲ್ಲಿ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸಿಕೊಂಡಿದ್ದು, ಭೋಜಪುರಿ ನಿರ್ಮಾಪಕರೊಬ್ಬರು ಸಿನಿಮಾವನ್ನ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಸಿನಿಮಾ ನಿರ್ಮಾಪಕ ಪಿಆರ್ ಅಮೀನ್ ಹಾಗೂ ಭೋಜಪುರಿ ಭಾಷೆಯ ಸಿನೆಮಾ ನಿರ್ಮಾಪಕರ ನಡುವಿನ ಮಾತುಕತೆ ಇನ್ನಷ್ಟೇ ಬಾಕಿ ಇದೆ. ಅಂದುಕೊಂಡಂತೆ ನಡೆದರೆ ಕತ್ತಲೆ ಕೋಣೆ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾ ಭೋಜಪುರಿ ಚಿತ್ರರಂಗದಲ್ಲಿ ಸದ್ದು ಮಾಡಲಿದೆ.

Click here

Click Here

Call us

Visit Now

ಕತ್ತಲೆಕೋಣೆ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾವಾಗಿದ್ದು, 1998ರ ಸತ್ಯ ಘಟನೆಯನ್ನು ಒಳಗೊಂಡ ಉಡುಪಿ ಜಿಲ್ಲೆಯಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿದೆ. ಇದರ ಆಧಾರದಲ್ಲಿಯೇ ಯುವ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ಒಂದು ಭಿನ್ನವಾದ ಸಿನಿಮಾ ಮಾಡಿದ್ದರು. ಇದಕ್ಕೆ ನಿರ್ಮಾಪಕರಾದ ಪಿಆರ್ ಅಮಿನ್ ಬಂಡವಾಳ ಹಾಕಿದ್ದು ಸಹ ನಿರ್ಮಾಪಕರಾಗಿ ಶ್ರೀನಿವಾಸ ಶಿವಮೊಗ್ಗ ಸಾಥ್ ನೀಡಿದ್ದರು.

ನಿರ್ದೇಶಕ ಸಂದೇಶ್ ಶೆಟ್ಟಿ, ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದರು. ಸಿನೆಮಾದ ಬಹುಪಾಲು ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿತ್ತು. 2018ರಲ್ಲಿ ಕರ್ನಾಟಕದಾದ್ಯಂತ 70 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೊಂಡಿದ್ದು ಚಿತ್ರ ಯಶಸ್ವಿ ಅತ್ತ ದಾಪುಗಾಲು ಹಾಕಿದ್ದರು. ಮಳೆಯಿಂದ ಸಿನಿಮಾ ಅಷ್ಟು ಹಣ ಸಂಪಾದನೆ ಮಾಡದಿದ್ದರು ಆ ವರ್ಷದಲ್ಲಿ ಉತ್ತಮವಾದ ಹಾರರ್ ಸಿನಿಮಾ ಎಂದು ಪ್ರೆಕ್ಷರಲ್ಲಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾದ ನಿರ್ದೇಶನದಲ್ಲಿ ಸಂದೇಶ ಶೆಟ್ಟಿ ಸೈ ಎನಿಸಿಕೊಂಡಿದ್ದರು.

Call us

Leave a Reply

Your email address will not be published. Required fields are marked *

seventeen − seven =