ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಗನ್ನಡದ ಬಹುನಿರೀಕ್ಷೆಯ ಚಿತ್ರ ’ಬಿಲಿಂಡರ್’ ತೆರೆಗೆ ಅಪ್ಪಳಿಸಲು ಸಿದ್ದಗೊಂಡಿದೆ. ಎಪ್ರಿಲ್ 22ರಿಂದ ಕುಂದಾಪುರ ವಿನಾಯಕ ಚಿತ್ರಮಂದಿರ ಹಾಗೂ ಉಡುಪಿಯ ಕಲ್ಪನಾ ಚಿತ್ರಮಂದಿರಗಳಲ್ಲಿ ಬಿಲಿಂಡರ್ ತೆರೆ ಕಾಣಲಿದೆ.
ಖ್ಯಾತ ಸಂಗೀತ ನಿರ್ದೇಶಕ, ಕುಂದಾಪುರ ಕನ್ನಡದ ಚಿತ್ರ ನಿರ್ದೇಶಕ ರವಿ ಬಸ್ರೂರ್ ಅವರು ಈ ಭಾರಿ ಸ್ವತಃ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಜಾ ಶೆಟ್ಟಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ರಘು ಪಾಂಡೇಶ್ವರ್ ಸೇರಿದಂತೆ ಬಹುಪಾಲು ಕುಂದಾಪುರ ತಾಲೂಕಿನ ಪ್ರತಿಭೆಗಳೇ ನಟಿಸಿದ್ದಾರೆ. ಚಿತ್ರವನ್ನು ಸ್ವತಃ ರವಿ ಬಸ್ರೂರ್ ನಿರ್ದೇಶಿಸಿದ್ದರೇ, ಸಚಿನ್ ಬಸ್ರೂರ್ ಮೊದಲ ಭಾರಿಗೆ ಕ್ಯಾಮರ್ ಹಿಡಿದ್ದಾರೆ.
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನಿತ್ ರಾಜ್ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಲಿಂಡರ್ ಚಿತ್ರದ ಎರಡು ಹಾಡುಗಳಿಗೆ ಧ್ವನಿಯಾಗಿರುವುದು ಸಾಮಾಜಿಕ ತಾಣಗಳನ್ನು ವೈರಲ್ ಆಗಿ ಚಿತ್ರದ ಬಗ್ಗೆ ಭಾರಿ ನೀರಿಕ್ಷೆ ಹುಟ್ಟಿಸಿತ್ತು. ಟ್ರೇಲರ್ ಹಾಗೂ ಹಾಡುಗಳು ಸೋಗಸಾಗಿ ಮುಡಿಬಂದಿದ್ದು ಚಿತ್ರಕಥೆ ಹೇಗಿರಲಿದೆ ಎಂಬುದನ್ನು ತೆರೆಯ ಮುಂದೆ ಕುಳಿತೇ ನೋಡಬೇಕಿದೆ. ಕುಂದಾಪ್ರ ಕನ್ನಡದಲ್ಲಿ ಚಿತ್ರ ನಿರ್ಮಿಸುವ ಸಾಹಸಕ್ಕೆ ಕೈ ಹಾಕಿ ಭಾಷಾಭಿಮಾನ ಮೆರೆಯುತ್ತಿರುವ ರವಿ ಬಸ್ರೂರ್ ಅವರ ಕಾರ್ಯಕ್ಕೆ ಚಿತ್ರವನ್ನು ನೋಡಿ ಬೆಂಬಲ ನೀಡಬೇಕಿದೆ.
ಇದನ್ನೂ ಓದಿ
► ನಮ್ ಕುಂದಗನ್ನಡದಲ್ಲೂ ಹಾಡಿರ್ ಪವರ್ಸ್ಟಾರ್ ಪುನಿತ್ ರಾಜ್ಕುಮಾರ್. ಇದ್ ಬಿಲಿಂಡರ್ ಖದರ್ – http://kundapraa.com/?p=12184
► ವೀಡಿಯೋ ನೋಡಿ | ಬಿಲಿಂಡರ್ ಚಿತ್ರಕ್ಕೆ ಪುನಿತ್ ರಾಜಕುಮಾರ್ ಹಾಡು! – http://kundapraa.com/?p=12604
► ವೀಡಿಯೋ: ಕನ್ನಡ ಸಿನೆಮಾ ಬಿಲಿಂಡರ್ ಗೆ ನಟ ಶ್ರೀಮರಳಿ ಹಾಡು – http://kundapraa.com/?p=12920
► ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾನೆ ಕುಂದಾಪುರದ ಕುವರ – http://kundapraa.com/?p=4479
► ಕುಂದಾಪುರ ಕನ್ನಡದ ಸಿನೆಮಾ ಗರ್ಗರ್ಮಂಡ್ಲ – http://kundapraa.com/?p=2383