ನಮ್ ಭಾಷಿ ಮೇಲಿನ್ ಅಭಿಮಾನು ಅಂದ್ರೆ ಇದ್ ಕಾಣಿ. 2ನೇ ವಾರ್ವೂ ‘ಬಿಲಿಂಡರ್’ ಪಿಚ್ಚರ್ ಲಾಯ್ಕ್ ಓಡ್ತಿತ್

Call us

Call us

* ಅಶ್ವಥ್ ಆಚಾರ್ಯ ಯಡಬೆಟ್ಟು | ಕುಂದಾಪ್ರ ಡಾಟ್ ಕಾಂ.
ಕುಂದಾಪ್ರ ಕನ್ನಡು ಅಂದೇಳ್ರೆ ಕೆಲವ್ರಿಗ್ ಬಾರಿ ಸಸಾರು. ಓದುಕ್ ಬರುಕೆ ಬರದೆ ಇಪ್ಪವ್ ಮಾತ್ರ ಈ ಭಾಷಿ ಮಾತಾಡುದ್ ಅಂದೇಳಿ ಎಣ್ಸಕಂಡ್, ನಮ್ಮ ಭಾಷಿನ ಬಾರಿ ತಾತ್ಸಾರ ಮಾಡಿ ಕಾಂಬುಕೆ ಶುರು ಮಾಡಿರ್. ಅದ್ರಲ್ಲೂ ಕನ್ನಡ ಚಿತ್ರರಂಗದಾಗೆ ಕುಂದಾಪ್ರ ಕನ್ನಡ ಬರೀ ತಮಾಷಿ ಮಾಡುಕೆ ಮಾತ್ರ. ಕುಂದಾಪ್ರ ಕನ್ನಡದಗೆ ಮಾತಾಡ್ರೆ ಜನ ನಗಾರ್ಡ್ತ್ ಅಂದೇಳಿ ಅದ್ಕೆ ಬಳ್ಸಕಂಬುಕೆ ಶುರು ಮಾಡಿರ್. ಇದನ್ನೆಲ್ಲಾ ಕಾಂಬತಿಕೆ ನಂಗೆ ಎಣ್ಸುದ್, ನಮ್ಮ ಭಾಷ್ಯಂಗೆ ಎಂತಾರೂ ಸಾಧ್ಯುಕ್ ಆತೀಲ್ಯಾ ಅಂದೇಳಿ.

Call us

Call us

ಹೀಂಗೆ ನಮ್ ಭಾಷಿ ನಮ್ಮ ಜನ ನಮ್ಮ ನಾಟ್ಕ ಕಂಡ್ಕಂಡ್ ಖಷಿ ಪಡುವತಿಗೆ ಎಂಟ್ರಿ ಕೊಟ್ರ್ ಕಾಣಿ ರವಿ ಬಸ್ರೂರ್ ಅಂದೇಳಿ. ಕುಂದಾಪ್ರ ಕನ್ನಡದಾಗೆ ಫಸ್ಟ್ ಬಂತ್ ಕಾಣಿ ಒಂದ್ ಹಾಡ್ ” ಅಪ್ಪಯ್ಯ ಕಾಣಿ ಅಬ್ಬಿ ಮಾಡತ್ ಕಾಣಿ”. ಯಾರ್ ಬಾಯಗೇ ಕೇಂಡ್ರು ಅದೇ ಹಾಡ್, ಮಕ್ಕಳ್ ಮರಿ, ಹಳಿಯರ್, ಎಳಿಯರ್ ಎಲ್ಲರೂ ಪದ್ಯ ಕೇಂಡ್ ತಲೆ ಆಡ್ಸದ್ದೆ ಆಡ್ಸದ್. ಮದರಂಗಿ ಮನ್ಯಾಗೂ ಅದೆ ಪದ್ಯ ಮದಿ ಮನಿ, ಸ್ಕೂಲ್ ಡೇ, ವಾರ್ಷಿಕೋತ್ಸವ ಹೀಂಗೆ ಯಾವ ಕಾರ್ಯಕ್ರಮಕ್ಕೂ ಹ್ವಾರೂ ಒಂದ್ ಸಲ ಆ ಪದ್ಯ ಕೆಂಬುಕ್ ಸಿಗತ್ತಿತ್. ಕಡಿಕೆ ವಿಜಯ ಪ್ರಕಾಶ್ ಸ್ವರದಂಗೆ ಅನಿತಾ ಓ ಅನಿತಾ ಅಂದೇಳಿ ಪದ್ಯ ಹಾಡ್ಸರ್, ಅದ ಅಂತು ಇನ್ನು ಕೆಲವ್ರ ಮೊಬೈಲ್ ರಿಂಗ್ ಟೋನ್ ಆಯಿ ಇಟ್ಟಕಂಡಿರ್. / ಕುಂದಾಪ್ರ ಡಾಟ್ ಕಾಂ / ಊರ ಬದಿಗೆ ಇಷ್ಟೇಲ್ಲಾ ಸುದ್ದಿ ಮಾಡಿದ ನಮ್ಮ ರವಿ ಬಸ್ರೂರ್, ನಮಗೆ ಗುರ್ತಾ ಆಪತಿಗೆ ಕನ್ನಡ ಸಿನೆಮಾ ಇಂಡಸ್ಟ್ರೀಲಿ ಒಳ್ಳೆ ಸಂಗೀತ ನಿರ್ದೇಶಕ ಆಯಿ, ಬ್ಯಾಗ್ರೌಂಡ್ ಸ್ಕೋರ್‌ರ್ ಆಯಿ ಹೇಸರ್ ಮಾಡಿದ್ರ್. ವರ್ಷದ ಹಿಂದೆ ಉಗ್ರಂ ಪಿಕ್ಚರ್ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ಕೂಡ ತಕಂಡಿರ್. ಇಷ್ಟಕ್ಕೇ ಸುಮ್ನೆ ಕುಂತ್ಕಣದೇ ನಮ್ಮ ಊರಿನ ಪ್ರತಿಭೆಗಳನ್ನು ಬಳ್ಸಕಂಡ್, ಈ ಭಾಗದಲ್ಲೆ ಮೊದ್ಲ ಸಾರಿಗೆ ನಮ್ಮ ಕುಂದಾಪ್ರ ಕನ್ನಡದ ಒಂದು ಕಮರ್ಶೀಯಲ್ ಕನ್ನಡ ಪಿಚ್ಚರ್ ಗರ್‌ಗರ್ ಮಂಡ್ಲ ತಯಾರ್ ಮಾಡಿ ಸೈ ಎಣ್ಸಿಕಂಡ್ರ್. ನಮ್ಮ ಭಾಷಿ ಬೆಳಿಕಿ ನಮ್ಮ ಭಾಷಿ ಮಾತಾಡುಕೆ ನಾಚ್ಕಿ ಮಾಡ್ಕಂಬುಕೆ ಆಗ ಅಂದೇಳಿ ಹೋದೆಲ್ಲೇಲ್ಲಾ ಹೇಳ್ತಾ ಬಂದ್ರ್. ಕುಂದಾಪ್ರ ಡಾಟ್ ಕಾಂ ಲೇಖನ.

Call us

ಸದ್ಯ ಈ ವರ್ಷ ರವೀ ಬಸ್ರೂರ್ ಅವ್ರೆ ಹೀರೋ ಆಯಿ ಆಕ್ಟ್ ಮಾಡಿ, ಡೈರೆಕ್ಷನ್ ಮಾಡಿ ಬಿಲಿಂಡರ್ ಅಂದೇಳಿ ಕುಂದಾಪ್ರ ಕನ್ನಡ ಪಿಕ್ಚರ್ ತೆಗ್ದಿರ್. ಎರಡ್ ವಾರ ಮೇಲ್ ಆಯ್ತ್ ಪಿಕ್ಚರ್ ಒಳ್ಳೆ ಒಡ್ತಾ ಇತ್. ನಮ್ಮ ಭಾಷಿ ಮೇಲೆ ಅವರ್ ಇಟ್ಟ ಅಭಿಮಾನಕ್ಕೆ ನಾನು ಪಿಕ್ಚರ್ ಕಾಂಬುಕೆ ನನ್ನ ದೋಸ್ತಿಗಳೊಟ್ಟಿಗೆ ಹೋಗ್ದೆ. ಪಿಕ್ಚರ್ ಲಾಯಕ್ ಇತ್, ಅಂದ್ರಂಗೂ ಅಪ್ಪು ಹಾಡದ್ ಪದ್ಯ ಅಂತು ಬಾರಿ ಸಾಪ್ ಇತ್. ಶ್ರಿಮುರುಳಿ ಹಾಡದ್ ಹೀರೋ ಎಂಟ್ರಿ ಪದ್ಯ ಅಂತೂ ತಮಿಳ್ಂಗೆ ಧನುಷ್ ಪಿಕ್ಚರ್ಂಗೆ ಬಪ್ಪು ಪದ್ಯದ ಕಣೇಗೇ ಇತ್. ಹೊಸಬ್ರೆ ಸೇರಿ ಮಾಡಿದ್ ಪಿಕ್ಚರ್, ಪ್ರತಿಯೊಬ್ಬ ನಟನ ಕಷ್ಟ ಆ ಪಿಕ್ಚರ್‌ಗೆ ಇತ್ ಅಂದೇಳಿ ಪಿಕ್ಚರ್ ಕಂಡ್ಕೂಡ್ಲೇ ಗೊತಾತ್. ಒಂದ್ ಪಿಕ್ಚರ್ ನಮ್ಮ ಭಾಷೆಗೆ ಬರತ್ ಅಂದೇಳಿ ಕನಸ್ ಮನಸ್‌ನಗೂ ಎಣ್ಸದೆ ಇದ್ದಾಗಲಿಕೆ, ಇಪ್ಪ ಗಡಿಬಿಡಿ ಕೆಲಸದ ಒಳಗೆ ನಮ್ಮ ಭಾಷಿ ಬೆಳುಕೆ ಒಂದು ಪಿಕ್ಚರ್ ಮಾಡಿದ ರವಿ ಬಸ್ರೂರ್ ಅವರಿಗೊಂದು ದೊಡ್ಡ ಸೆಲ್ಯೂಟ್. ಕುಂದಾಪ್ರ ಡಾಟ್ ಕಾಂ ಲೇಖನ.

ರವಿ ಬಸ್ರೂರ್ ಮಾಡದ್ ಪ್ರಯತ್ನ ಇನ್ ಬಪ್ಪು ಹೊಸ ಪೀಳಿಗೆಗೆ ಒಂದು ದಾರಿದೀಪು ಇದ್ದಂಗ್. ಇನ್ನಷ್ಟ ಪ್ರಯತ್ನ ಇನ್ನಷ್ಟ ಪ್ರತಿಭೆಗಳು ಹುಟ್ಟಿ ಬಂದ್ರೆ ನಮ್ಮ ಭಾಷಿ ಈ ಭೂಮಿ ಇಪ್ಪಲೋರಿಗೆ ಇರತ್. ನಮ್ಮ ಭಾಷಿಗೂ ಒಂದು ಬೆಲೆ ಬರತ್. ನಮ್ಮ ಭಾಷಿಗೆ ನಮ್ಮ ಜನ ಮಾಡು ಪ್ರಯತ್ನಕ್ಕೆ ಕೈ ಜೋಡ್ಸುವ. ರವಿ ಬಸ್ರೂರ್ ಮುಂದೂ ಒಳ್ಳೊಳ್ಳೆ ಪಿಚ್ಚರ್ ಮಾಡ್ಲಿ. ನಮ್ಮ ಭಾಷೆಗೆ ಪಿಚ್ಚರ್ ಮಾಡೋರಿಗೆ ಎಲ್ಲರೂ ಹೆಲ್ಪ್ ಮಾಡ್ಲಿ. ಯಾರಿಗೇ ಗೋತ್ತಿತ್ ಮುಂದೊಂದ್ ದಿನ ನಮ್ಮ ಭಾಷೆಯ ಚಿತ್ರರಂಗ ತುಳು ಚಿತ್ರರಂಗದಷ್ಟೆ ಬ್ಯುಸಿ ಆರೂ ಆಯ್ತ್. ಅದ್ಕೆ ನಾವ್ ನೀವೆಲ್ಲ ಸಾಥ್ ಕೊಡ್ಕ್ ಅಷ್ಟೇ ಕಾಣಿ. / ಕುಂದಾಪ್ರ ಡಾಟ್ ಕಾಂ /

ಇದನ್ನೂ ಓದಿ:

► ಸ್ಯಾಂಡಲ್‌ವುಡ್‌ಗೆ ಸಾಟಿಯಾಗಬಲ್ಲ ‘ಬಿಲಿಂಡರ್’ ಪ್ರಯತ್ನಕ್ಕೆ ಪ್ರೇಕ್ಷಕ ಫಿದಾ – http://kundapraa.com/?p=13574
► ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾನೆ ಕುಂದಾಪುರದ ಕುವರ – http://kundapraa.com/?p=4479
► ನಮ್ ಕುಂದಗನ್ನಡದಲ್ಲೂ ಹಾಡಿರ್ ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್. ಇದ್ ಬಿಲಿಂಡರ್ ಖದರ್ – http://kundapraa.com/?p=12184
► ಎ.22ರಿಂದ ಕುಂದಾಪ್ರ ಕನ್ನಡದ ಬಹುನಿರೀಕ್ಷೆಯ ಚಿತ್ರ ’ಬಿಲಿಂಡರ್’ ತೆರೆಗೆ – http://kundapraa.com/?p=13447
► ಬಿಲಿಂಡರ್ ಕುಂದಾಪ್ರ ಭಾಷೆಗಾಗಿ ಮಾಡಿದ ಚಿತ್ರ. ತಪ್ಪಿದ್ರೆ ಹೇಳಿ ತಿದ್ಕೊತಿವಿ: ರವಿ ಬಸ್ರೂರು – http://kundapraa.com/?p=13544
► ಕುಂದಾಪುರ ಕನ್ನಡದ ಸಿನೆಮಾ ಗರ್‍ಗರ್‍ಮಂಡ್ಲ (ಸಂದರ್ಶನ)- http://kundapraa.com/?p=2383
► ವೀಡಿಯೋ ನೋಡಿ | ಬಿಲಿಂಡರ್ ಚಿತ್ರಕ್ಕೆ ಪುನಿತ್ ರಾಜಕುಮಾರ್ ಹಾಡು! – http://kundapraa.com/?p=12604
► ವೀಡಿಯೋ: ಕನ್ನಡ ಸಿನೆಮಾ ಬಿಲಿಂಡರ್ ಗೆ ನಟ ಶ್ರೀಮರಳಿ ಹಾಡು – http://kundapraa.com/?p=12920

Bilindar-Poster-Kundapra5 Bilindar-Team-Kundapra Bilindar-Poster-Kundapra3 Bilindar-Poster-Kundapra2Bilindar-poster-Kundapra9Bilindar-Poster-Kundapra6Bilindar-poster-Kundapra8Bilindar-Poster-Kundapra4

Leave a Reply

Your email address will not be published. Required fields are marked *

3 × three =