ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ‘ಬಿಂದುಶ್ರೀ’ ಪ್ರಶಸ್ತಿ ಪ್ರದಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕನ್ನಡದಲ್ಲಿ ಸಿನೆಮಾ ಮಾಡುವುದು ಸವಾಲಿನ ಕೆಲಸವಾಗಿದೆ. ಸಿನೆಮಾ ತಯಾರಕರು ಹಾಗೂ ವೀಕ್ಷಕರ ನಡುವಿನ ಕೊಂಡಿ ತಪ್ಪಿದೆ. ಜನರಿಗೆ ಸಿನೆಮಾ ಮಾಡುವವರು ಇದ್ದಾರೆಂದೂ, ಸಿನೆಮಾ ಮಾಡುವವರಿಗೆ ನೋಡುವ ಜನರಿದ್ದಾರೆಂದೂ ತಿಳಿದಿದೆ ಆದರೆ ಪ್ರದರ್ಶನ ಹಾಗೂ ವಿತರಣಾ ವ್ಯವಸ್ಥೆ ವೈಫಲ್ಯದಿಂದಾಗಿ ಇವರಿಬ್ಬರ ನಡುವಿನ ಕಂದಕ ನಿರ್ಮಾಣವಾಗಿದೆ. ಇದರ ನಡುವೆಯೂ ಕೆಲವರು ಛಲದಿಂದ ಕಲಾತ್ಮಕ ಚಿತ್ರಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕರ್ನಾಟಕ ಸರಕಾರದ ಕೊಡುಗೆ ದೊಡ್ಡದು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.

Call us

Call us

ಅವರು ಸುರಭಿ ಬೈಂದೂರು ಸಂಸ್ಥೆಯು ೧೭ನೇ ವರ್ಷದ ಸಂಭ್ರಮದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ‘ಬಿಂದುಶ್ರೀ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಕರ್ನಾಟಕದ ಸಾಹಿತ್ಯ, ರಂಗಭೂಮಿ, ಜಾನಪದ, ಸಿನೆಮಾ ಕ್ಷೇತ್ರಕ್ಕೆ ಕರಾವಳಿ ನೀಡಿದ ಕೊಡುಗೆ ಸಣ್ಣದಲ್ಲ. ಪ್ರತಿಭಾವಂತರ ದಂಡು ಈ ಭಾಗದಲ್ಲಿದೆ ಎಂದ ಅವರು ಸಿನೆಮಾ ಎಂದರೆ ಕೇವಲ ನಟ ನಟಿಯರಷ್ಟೇ ಅಲ್ಲ. ಅದರ ಹಿಂದೆ ಅನೇಕರು ಕೆಲಸ ಮಾಡುತ್ತಾರೆ. ಅದರ ಪರಿಣಾಮವಾಗಿ ಉತ್ತಮ ಚಿತ್ರಗಳು ಮೂಡಿಬರುತ್ತದೆ. ಕಲಾತ್ಮಕ ಸಿನೆಮಾಗಳು ಸಿನೆಮಾ ನೋಡುವ ದೃಷ್ಠಿಯೋನವನ್ನು ಬದಲಿಸುವುದಲ್ಲದೇ, ಪ್ರೇಕ್ಷಕರ ಮೇಲೆ ವಿಚಕ್ಷಣ ಪರಿಣಾಮ ಬೀರುವ ಸಿನೆಮಾಗಳ ಬಗೆಗೆ ಅರಿವು ಮೂಡುತ್ತದೆ ಎಂದರು.

Call us

Call us

ಬೈಂದೂರು ಶಾಸಕ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಿದರು. ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ, ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ, ಖಜಾಂಚಿ ಬಿ.ಸಿ ಮಹಾಬಲೇಶ್ವರ ಮಯ್ಯ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಎಸ್. ಜನಾರ್ಧನ ಮರವಂತೆ ಅಭಿನಂದನಾ ನುಡಿಗಳನ್ನಾಡಿದರು. ಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಚಿತ್ರಕಲಾ ಸ್ವರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸುರಭಿ ಸಂಸ್ಥೆಯ ವ್ಯವಸ್ಥಾಪಕ ಗಣಪತಿ ಹೋಬಳಿದಾರ್ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಣ ವೈ ಕೊರಗ ವಂದಿಸಿದರು. ವ್ಯವಸ್ಥಾಪಕ ಸುಧಾಕರ ಪಿ. ಬೈಂದೂರು ನಿರೂಪಿಸಿದರು.

Leave a Reply

Your email address will not be published. Required fields are marked *

1 × two =