ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಬೊಲ್ದು’ ತುಳು ಚಿತ್ರ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಷ್ಟಿತ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಿಖಿಲ್ ಮಂಜೂ ಲಿಂಗಯ್ಯ ನಿರ್ದೇಶನದ ತುಳು ಕಲಾತ್ಮಕ ಚಲನಚಿತ್ರ “WHITE” (ಬೊಲ್ದು) ಸ್ಪರ್ಧಾತ್ಮಕ ವಿಭಾಗದಲ್ಲಿ ಆಯ್ಕೆಯಾಗಿದೆ.

Call us

Call us

Click Here

Visit Now

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಕೋಸ್ಟಲ್‌ವುಡ್‌ನ ಪ್ರಥಮ ತುಳು ಚಿತ್ರ ಇದಾಗಿರುವುದಲ್ಲದೇ, ಕರ್ನಾಟಕದಿಂದ ಆಯ್ಕೆಯಾದ ಏಕೈಕ ಚಿತ್ರ ಎನಿಸಿಕೊಂಡಿದೆ.

Click here

Click Here

Call us

Call us

ನಟ, ನಿರ್ದೇಶಕ ಗಿರೀಶ್ ಬೈಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಹಣ- ಪಿ.ವಿ.ಆರ್.ಸ್ವಾಮಿ., ಸಂಭಾಷಣೆ-ಬಿ.ಶಿವಾನಂದ., ಸಂಕಲನ-ಆದಿತ್ಯ ಕುಣಿಗಲ್. ಚಿತ್ರದ ಸಂಭಾಷಣೆ ತುಳುವಿಗೆ ಅನುವಾದಿಸಿದ್ದಾರೆ ವಿಜೇಶ್ ದೇವಾಡಿಗ ಮಂಗಳಾದೇವಿ.

ಸಿನೆಮಾ ಕಥಾ ಹಂದರ:
ಅಂಗಾರ ತನ್ನ ಮಾನಸಿಕ ಅಸ್ವಸ್ಥತೆಯ ಹೆಂಡತಿ ಮತ್ತು ತಾಯಿಯೊಂದಿಗೆ ಬುದ್ಧಿಮಾಂದ್ಯ ಮಗಳ ಸಂಸಾರದ ಜವಾಬ್ದಾರಿ ಹೊತ್ತಿದ್ದ. ಮಗಳನ್ನು ಹಿಂಸಿಸುತ್ತಿದ್ದ ಸೊಸೆಯಿಂದ ಮೊಮ್ಮಗಳು ಸೂಜಿಯನ್ನು ಕಾಪಾಡಲು ಅಜ್ಜಿ ಬೇರೆ ಊರಿಗೆ ಮೊಮ್ಮಗಳೊಂದಿಗೆ ಗುಟ್ಟಾಗಿ ಹೋಗುತ್ತಾಳೆ. ಇತ್ತ ಹೆಂಡತಿಯ ಮರಣಾನಂತರ ಪ್ರೀತಿಯ ಮಗಳನ್ನು ಕಾಣದೇ ಅಂಗಾರ ಕಂಗಾಲಾಗುತ್ತಾನೆ. ಹದಿವಯಸ್ಸಿಗೆ ಬಂದ ಸೂಜಿಯನ್ನು ಸಾಕಲು ತನ್ನಿಂದ ಸಾಧ್ಯವಾಗದೇ ಓಉಔ ಒಂದರ ಸಹಾಯ ಪಡೆಯಲು ಅಜ್ಜಿ ಆಲೋಚಿಸಿದಾಗ ಅವಳ ಆಕಸ್ಮಿಕ ಮರಣವಾಗುತ್ತದೆ. ಅದೇ ಸಮಯದಲ್ಲಿ ಅದೇಗೊ ಅಜ್ಜಿಯ ಮನೆ ಕಂಡು ಹುಡುಕಿದ ಅಂಗಾರ ತನ್ನ ಬುದ್ಧಿಮಾಂದ್ಯ ಮಗಳನ್ನು ಕರೆದುಕೊಂಡು ಮನೆಗೆ ಹೋಗುತ್ತಾನೆ. ಅಪ್ಪನ ಆರೈಕೆಯಲ್ಲಿರುವಾಗ ಸೂಜಿ ತಂದೆಯಲ್ಲೇ ಆಕರ್ಷಿತಳಾಗುತ್ತಾಳೆ. ಪರಿಸ್ಥಿತಿಯನ್ನು ಅರಿತ ಅಂಗಾರನಿಗೆ ಇಂತಹ ಮಕ್ಕಳನ್ನು ಸಾಕಲೆಂದೇ ಇರುವ ವಿಶೇಷ ಶಾಲೆಯೇ ಯೋಗ್ಯ ಎಂದು ತಿಳಿದು ಎನ್‌ಜಿಓ ಮೊರೆ ಹೋಗುತ್ತಾನೆ.

Leave a Reply

Your email address will not be published. Required fields are marked *

one × 3 =