ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಭಾರಿ ಅವ್ಯವಹಾರ: ಬಿ.ಟಿ. ಮಂಜುನಾಥ ಪೂಜಾರಿ ಆರೋಪ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಸಂಬಂದಪಟ್ಟವರ ಗಮನಕ್ಕೆ ತಂದಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ. ಸಹಕಾರಿ ಸಂಘದ ಅವ್ಯವಹಾರ ತನಿಖೆ ಮಾಡಿ ತಪ್ಪಿತಸ್ತರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ ವಿಧಾನಸೌಧ ಮುಂದೆ ಧರಣಿ ನಡೆಸುವುದಾಗಿ ಸಂಘದ ಸದಸ್ಯ ಬಿ. ಟಿ. ಮಂಜುನಾಥ ಪೂಜಾರಿ ಎಚ್ಚರಿಸಿದ್ದಾರೆ.

Call us

Call us

Call us

ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಹತ್ತಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಉಡುಪಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಅವರು ಮಾಮೂಲಿ ಅರ್ಜಿ ಎಂದು ಪರಿಗಣಿಸಿ ತಮ್ಮ ಕೈಕೆಳಗಿನ ಸಂಸ್ಥೆಯಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆಯುತ್ತಿದ್ದರೂ ತಮಗೆ ಏನು ಸಂಬಂಧ ಇಲ್ಲ ಎಂಬಂತೆ ವರ್ತಿಸಿ ಮಾಹಿತಿ ನೀಡಲು ಅವಕಾಶ ಇಲ್ಲ ಎಂದು ಹಿಂಬರಹ ನೀಡಿ ಕೈ ತೊಳೆದುಕೊಂಡಿದ್ದಾರೆ.

Call us

Call us

ಆ ನಂತರ ಕುಂದಾಪುರ ಸಹಾಯಕ ಪೋಲಿಸ್ ಅಧೀಕ್ಷಕರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೂ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಸಚಿವರಿಗೂ ದೂರು ನೀಡಿದ್ದು ಯಾರಿಂದಲೂ ಸಕಾರತ್ಮಕ ಸ್ಪಂದನೆ ದೊರೆತಿಲ್ಲ. ಕರ್ನಾಟಕ ಲೋಕಾಯುಕ್ತಕ್ಕೆ ಕೂಡ ದೂರು ನೀಡಿದ್ದು, ಅವರು ನನಗೆ ಮಾಹಿತಿ ನೀಡಿ ಅವ್ಯವಹಾರ ಆಗಿದೆ ಎಂದು ಅದರಲ್ಲಿ ನಾನೇ ಎಲ್ಲಾ ದಾಖಲೆಗಳನ್ನು ನೀಡಬೇಕೆಂದು ಉತ್ತರಿಸಿದ್ದು, ಲೋಕಾಯುಕ್ತ ಇಲಾಖೆಯವರು ಕೂಡಾ ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.

ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಜನಪ್ರಿಯ ಅಧ್ಯಕ್ಷರಾದ ಜಯರಾಮ ಭಂಡಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ರಮೇಶ ಗಾಣಿಗ ಹಾಗೂ ಮ್ಯಾನೇಜರ್ ಈಗ ಮೃತಪಟ್ಟಿರುವ ಸಂಪತ್ ಕಾಮತ್ ಸೇರಿ ಸುಮಾರು 30 ಕೋಟಿಗೂ ಮಿಕ್ಕಿ ಅವ್ಯವಹಾರ ನೆಡೆಸಿರುವುದು ಈಗಿನ ಲೆಕ್ಕಪರಿಶೋಧನೆ (ಅಡಿಟ್) ತನಿಖೆಯಲ್ಲಿ ತಿಳಿದು ಬಂದಿದ್ದು, ವ್ಯವಹಾರದಲ್ಲಿ ನಾಮಾಕಾವಸ್ತೆಗೆ 2-3 ಕೋಟಿ ರೂಪಾಯಿಗಳನ್ನು ಇವರಿಂದ ಕಟ್ಟಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಷಂಡ್ಯತ್ರ ನಡೆಯುತ್ತಿರುವುದಾಗಿ ಕಂಡು ಬಂದಿರುತ್ತದೆ. ಇವರೆಗೆ ಅಧಿಕೃತ ಲೆಕ್ಕಪರಿಶೋಧಕರನ್ನು ನೇಮಿಸಿದೆ ಇರುವುದನ್ನು ಕಂಡರೆ ಪ್ರಕರಣದಲ್ಲಿ ಎಲ್ಲರೂ ಭಾಗಿಯಾಗಿರುತ್ತಾರೆಂದು ಅರ್ಥವಾಗುತ್ತಿದೆ. ಸಿದ್ದಾಪುರ ವ್ಯವಸಹಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಿಗೂ ದೂರು ನೀಡಿದ್ದು ಇವರೆಗೂ ಯಾವುದೇ ನಿರೀಕ್ಷಿತ ಕ್ರಮ ಆಗಿರುವುದಿಲ್ಲ. ಇಷ್ಟು ದೊಡ್ಡ ಮೊತ್ತದ ಅವ್ಯವಹಾರ ನಡೆದರೂ ಇವರೆಗೂ ಯಾರ ವಿರುದ್ದವೂ ಪ್ರಕರಣ ದಾಖಾಲಾಗಿರುವುದಿಲ್ಲ. ಅವ್ಯವಹಾರದಲ್ಲಿ ಮೇಲಾಧಿಕಾರಿಗಳ ಪಾತ್ರವೂ ಇರುವುದು ಕಂಡು ಬರುತ್ತದೆ ಎಂದವರು ಆರೋಪಿಸಿದರು.

ಈ ಪ್ರಕರಣದಲ್ಲಿ ಗಂಭೀರ ಸ್ವರೂಪದಾಗಿದ್ದು ಸಾವಿರಾರು ಜನರು ನಂಬಿಕೊಂಡು ಬಂದಿರುವ ಪ್ರಾಥಮಿಕ ಸಹಕಾರಿ ಸಂಘ ಇದಾಗಿದ್ದು ನಿವೃತ್ತಿ ವೇತನ, ಪಿಂಚಣಿ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಕ್ಕಳ ಮದುವೆಯ ಬಗ್ಗೆ ಸಂಸ್ಥೆಯಲ್ಲಿ ಠೇವಣಿ ಇಟ್ಟವರು ಕಳವಳ ಪಡುವಂತಾಗಿದೆ.

ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಇಲ್ಲವೆ ಸಿಬಿಐಗೆ ಒಪ್ಪಿಸಿ ಸಮಗ್ರ ತನಿಕೆ ನಡೆಸಿ ತಪ್ಪಿಸ್ಥರ ವಿರುದ್ದ ಕಾನುನು ಕ್ರಮ ಕೈಗೊಂಡು ಸಂಘದ ಹಿತ ಕಾಪಾಡುವಂತೆ ಅವರು ಆಗ್ರಹಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ದಿವಾಕರ ಹೆಗ್ಡೆ, ಸುದರ್ಶನ ಶೆಟ್ಟಿ, ಶಾಂತರಾಮ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

sixteen + 1 =