ರಂಗಭೂಮಿ, ಕಿರುತೆರೆಯಲ್ಲಿ ಉದಯಿಸುತ್ತಿರುವ ಸೂರ್ಯ. ಮೂಡುಬಗೆಯ ಯುವ ಪ್ರತಿಭೆ

Call us

Call us

Call us

Call us

ಕರುಣಾಕರ ಬಳ್ಕೂರು | ಕುಂದಾಪ್ರ ಡಾಟ್ ಕಾಂ ಲೇಖನ
ಬಣ್ಣ ಹಚ್ಚಿ ರಂಗದಲ್ಲಿ ಕಾಣಿಸಿಕೊಂಡರೆ ಅಜ್ಜಿಯೇ ಬಂದು ಮಾತನಾಡಿದಂತೆ ಭಾಸವಾಗುತ್ತದೆ. ನೆರೆಗೆ ಕಟ್ಟಿದ ಮುಖ, ಕೆಂಪು ಸೀರೆ, ಗೂನು ಬೆನ್ನು, ವಟ ವಟ ಮಾತುಗಳು. ಹೀಗೆ ಇವರೊಬ್ಬರೇ ಆ ಪಾತ್ರಕ್ಕೆ ಜೀವತುಂಬಬಲ್ಲರೆಂದು ಸಲಿಸಾಗಿ ಅನ್ನಿಸುವಷ್ಟು ಪಾತ್ರದೊಂದಿಗೆ ಬೆರೆತು ಕಲೆಯಲ್ಲೊಂದು ಜೀವ ತುಂಬಿ ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ ಗ್ರಾಮೀಣ ಪ್ರದೇಶದ ಅಪ್ಪಟ್ಟ ಯುವ ಪ್ರತಿಭೆ ಸೂರ್ಯ ಎಂ.

Call us

Click Here

Click here

Click Here

Call us

Visit Now

Click here

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಮೂಡುಬಗೆ ಸೂರ್ಯ ಅವರ ಹುಟ್ಟೂರು. ತಂದೆ ಶೀನ ಮಡಿವಾಳ ಮತ್ತು ರುದ್ರು ಮಡಿವಾಳ್ತಿ ದಂಪತಿಗಳ ಮೂವರು ಮಕ್ಕಳಲ್ಲಿ ಈತ ಕಿರಿಯವ. ಪ್ರಾಥಮಿಕ ಶಿಕ್ಷಣ ಸಂದರ್ಭದಲ್ಲಿಯೇ ಅಭಿಯನದ ಬಗ್ಗೆ ಆಸಕ್ತಿ ಮೂಡಿಸಿಕೊಂಡವನು. ಬೇಲೂರು ಐತಾಳ್ ಸರ್ ಅವರ ಗುರು ಪ್ರೋತ್ಸಾಹ ಇನ್ನಷ್ಟು ಸಾಧನೆಗೆ ಪ್ರೇರಣೆಯಾಯಿತು. 3 ವರ್ಷಗಳ ಕಾಲ ನೀನಾಸಮ್ ತಿರುಗಾಟ ಮತ್ತು ಜನಮನದಾಟದೊಂದಿಗೆ ತಿರುಗಾಟ ಮಾಡಿದ್ದಾರೆ. ನಾಟಕ ಕ್ಷೇತ್ರದಲ್ಲಿ ಮಿಂಚಲು ಸ್ಪೂರ್ತಿಯ ಸೆಲೆಯಾದವರು ಪ್ಲೋರಿನಾ ನೂರ್ಹಾನ್. ಕುಂದಾಪ್ರ ಡಾಟ್ ಕಾಂ ಲೇಖನ.

ಹೀಗೆ ಅಭಿನಯ, ಹಾಡು, ನಾಟಕಗಳಲ್ಲಿ ಹೀಗೆ ಸಿಕ್ಕ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ತನ್ನ ಅಂತರಂಗದ ಪ್ರತಿಭೆಗೆ ನೀರೆರೆದು, ಇಂದು ಉತ್ತಮ ಕಲಾವಿದನಾಗಿ ಮೆಚ್ಚುಗೆ ಗಳಿಸುತ್ತಿದ್ದಾರೆ.

ನೀನಾಸಮ್‌ನಲ್ಲಿ ರಂಗ ತರಬೇತಿಯನ್ನು ಪಡೆಯುವಾಗಲೇ ಆಷಾಡದ ಒಂದು ದಿನ, ಮಿಡ್ ಸಮ್ಮರ್ ನೈಟ್ ಡ್ರೀಮ್, ಹ್ಯಾಮ್ಲೆಟ್, ನೀರಿನ ತಾಣ, ತಾಳಿಕಟ್ಟೋಕ್ಕೂಲೀನೇ, ಓಥೆಲೋ, ಶೂದ್ರತಪಸ್ವಿ, ಊರುಕೇರಿ ನಾಟಕಗಳಲ್ಲಿ ಅಭಿನಯಿಸಿ ಮೆಚ್ಚುಗೆಯನ್ನುಗಳಿಸಿದ್ದಾನೆ.

ಪಾಂಡುರಂಗ ವಿಠಲ ಧಾರವಾಹಿಯಲ್ಲಿ ಪಾಂಡುರಂಗ, ಪಾರ್ವತಿ ಪರಮೇಶ್ವರ ಧಾರವಾಹಿಯಲ್ಲಿ ಸಿಗಡಿ ಶೀನನಾಗಿ ಕಾಣಿಸಿಕೊಂಡಿದ್ದಾರೆ. ’ಟೊರ ಟೊರ’ ಸಿನಿಮಾದಲ್ಲಿ ಅಭಿನಯಿಸಿ ಇದೀಗ ’ನೂರೊಂದು ನೆನಪು’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕಲಾವಿದನು ನಟನ ಕ್ಷೇತ್ರದಲ್ಲಿ ಬೆಳವಣಿಗೆ ಆಗಬೇಕಾದರೆ ಸಮಯ ಪ್ರಜ್ಞೆ ಮತ್ತು ತನ್ನನ್ನು ತೊಡಗಿಸಿಕೊಳ್ಳುವಿಕೆ ಅವಶ್ಯ ಅನ್ನುತ್ತಾರೆ.

Call us

ಧಾರವಾಹಿಗಳಲ್ಲಿ ಕುಂದಗನ್ನಡಕ್ಕೆ ಸ್ವಲ್ಪಮಟ್ಟದ ಬೇಡಿಕೆಯಿದೆ. ಕರಾವಳಿಯ ಕಲಾವಿದರು ರಾಜ್ಯಮಟ್ಟದ ಧಾರವಾಹಿಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುಲು ಸಾಧ್ಯವಾಗುತ್ತಿಲ್ಲ ಕಲಾವಿದರಿಗೆ ಅವಕಾಶಗಳು ಕಡಿಮೆ ಮತ್ತು ಶೂಟಿಂಗ್ ಬೆಂಗಳೂರುನಂತಹ ನಗರಗಳಲ್ಲಿ ಮಾತ್ರ ನಡೆಯುತ್ತದೆ. ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೊಟಕುಗೊಳಿಸುತ್ತಾರೆ. ಹಾಗೆ ಆಗಬಾರದು ಅವಕಾಶಗಳನ್ನು ಉಪಯೋಗಿಸಿಕೊಂಡು ಬೆಳಯಬೇಕು. ರಂಗಭೂಮಿಯ ಕಲಾವಿದರು ಇಂದು ಸಿನಿಮಾ ಧಾರವಾಹಿ ಕ್ಷೇತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಕಾರಣ ಆರ್ಥಿಕವಾಗಿ ಮತ್ತು ಬೆಳವಣಿಗೆ ಆಗಲು ಅವಕಾಶಗಳು ತುಂಬ ಇದೆ. ರಂಗಭೂಮಿಯ ಕಲಾವಿದ ಸಿನಿಮಾ ಕ್ಷೇತ್ರಕ್ಕೂ ಬಂದರೂ ಮಾನಸಿಕವಾಗಿ ಅವರು ರಂಗಭೂಮಿಯಲ್ಲಿ ಇರುತ್ತಾರೆ ಎನ್ನುವುದು ಸೂರ್ಯ ಎಂ ಅವರ ಮನದಾಳದ ಮಾತು. ಕುಂದಾಪ್ರ ಡಾಟ್ ಕಾಂ ಲೇಖನ

ನೇಸರನು ಜಗತ್ತನ್ನು ಬೆಳಗುವಂತೆ ಗ್ರಾಮೀಣ ಪ್ರತಿಭೆಯಾಗಿರುವ ಸೂರ್ಯ ಎಂ ನಾಟಕ, ಧಾರವಾಹಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿಲಿ ಮಾದರಿಯಾಗಲಿ ಎಂದು ಹಾರೈಸೋಣ. / ಕುಂದಾಪ್ರ ಡಾಟ್ ಕಾಂ ಲೇಖನ/

news-surya4 soorya-moodubage-drama1

Leave a Reply

Your email address will not be published. Required fields are marked *

two × three =