ಬಸ್ ಮುಷ್ಕರ್: ಕುಂದಾಪುರದಲ್ಲಿ ಪ್ರಯಾಣಿಕರ ಪರದಾಟ

Call us

Call us

ಕುಂದಾಪುರ: ಕೇಂದ್ರ ಸರಕಾರದ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ- 2015’ಅಂಗಿಕಾರಗೊಳ್ಳುವುದನ್ನು ವಿರೋಧಿಸಿ ಅಖೀಲ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ ಇಂದು (ಎ. 30) ದೇಶಾದ್ಯಂತ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದರ ಪರಿಣಾಮ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Click Here

Call us

Call us

ಕುಂದಾಪುರ ತಾಲೂಕಿನಲ್ಲಿಯೂ ಸರಕಾರಿ ಬಸ್ ಸಂಚಾಯ ಸ್ಥಗಿತಗೊಂಡಿದ್ದರೇ, ಖಾಸಗಿ ಬಸ್ಸುಗಳ ಓಡಾಟ ವಿರಳವಾಗಿತ್ತು. ಕುಂದಾಪುರ ತಾಲೂಕಿನ ಕೆಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಲೋಕಲ್ ಬಸ್ಸುಗಳು ವಿರಳವಾಗಿ ಸಂಚರಿಸುತ್ತಿರುವುದು ಕಂಡುಬಂತು. ಆದರೆ ಕುಂದಾಪುರದಿಂದ ಬೈಂದೂರು, ಭಟ್ಕಳಕ್ಕೆ ಸಂಚರಿಸು ಖಾಸಗಿ ಬಸ್ಸುಗಳು ಕೂಡ ರಸ್ತೆಗಿಳಿಯದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಆಟೋರಿಕ್ಷಾ ಚಾಲಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರಾದರೂ ರಿಕ್ಷಾಗಳ ಸಂಚಾರ ಕಂಡುಬರುತ್ತಿತ್ತು. ಸಂಜೆಯಾಗುತ್ತಿದ್ದಂತೆ ದೂರದ ಮುಂಬೈ, ಬೆಂಗಳೂರಿಗೆ ಸಂಚರಿಸುವ ಖಾಸಗಿ ಬಸ್ಸುಗಳು ತಮ್ಮ ಪ್ರಯಾಣವನ್ನು ಆರಂಭಿಸಿದವು.
ಉಡುಪಿಯಲ್ಲಿ ಸಿಐಟಿಯು ಸಂಯೋಜಿತ ಬಸ್‌ ನೌಕರರ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುದುದಾಗಿ ತಿಳಿಸಿತ್ತು. ಖಾಸಗಿ ಬಸ್‌ ಮಾಲಕರು ತಾವು ಬಂದ್‌ ಆಚರಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರಾದರೂ, ನೌಕರರು ಮುಷ್ಕರದಲ್ಲಿ ಭಾಗವಹಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು..

Click here

Click Here

Call us

Visit Now

ಪದವಿ ಪರೀಕ್ಷೆಗಳು ಮುಂದಕ್ಕೆ

ರಾಷ್ಟ ವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯವು ಎ. 30ರಂದು ನಡೆಸಲು ನಿಗದಿ ಪಡಿಸಿದ್ದ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂಡಿದೆ. ಬಿ.ಎ. 4ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಮೇ 12ಕ್ಕೆ, ಬಿಎಸ್ಸಿ 4ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಮೇ 6ಕ್ಕೆ, ಬಿಕಾಂ 4ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಮೇ 4ಕ್ಕೆ , ಬಿ.ಎ. 6ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಮೇ 5ಕ್ಕೆ, ಬಿಬಿಎಂ 3 ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಮೇ 8ಕ್ಕೆ ಹಾಗೂ ಬಿಬಿಎಂ 6ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಮೇ 2ಕ್ಕೆ ಮುಂದೂಡಲಾಗಿದೆ ಎಂದು ವಿ.ವಿ. ತಿಳಿಸಿದೆ.

ಟ್ಯಾಕ್ಸಿ, ಕ್ಯಾಬ್ ಸಂಚಾರ:
ಬಸ್ಸುಗಳ ಸಂಚಾರವಿದ್ದರಿಂದ ಓಮ್ನಿ, ಟ್ಯಾಕ್ಸಿ ಮುಂತಾದ ವಾಹನಗಳು ಪ್ರಯಾಣಿಕರ ಅನುಕೂಲಕ್ಕಾಗಿ ಸಂಚರಿಸುತ್ತಿದ್ದುದು ಕೆಲವೆಡೆ ಕಂಡುಬಂತು.

Call us

ಸಮಾರಂಭಗಳಗೆ ತೆರಳುವವರ ಪರದಾಟ
ಇಂದು ಹಲವೆಡೆ ಮದುವೆ ಮುಂತಾದ ಶುಭಸಮಾರಂಭಗಳಿದ್ದವು. ಬಂದ್ ಇದ್ದ ಪರಿಣಾಮ ದೂರದ ಊರಿನ ಸಂಬಂಧಿಗಳಿಗೆ ಶುಭಸಮಾರಂಭದಲ್ಲಿ ಭಾಗವಹಿಸಲು ತೊಡಕುಂಟಾಯಿತು. ಕೆಲವರು ಸಮಾರಂಭಗಳಿಗೆ ಆಯೋಜಿಸಿದ್ದ ವಾಹನಗಳನ್ನೇ ಅವಲಂಬಿಸಿದರೇ, ಕೆಲವರು ಖಾಸಗಿ ವಾಹನಗಳಲ್ಲಿ ದೂರದಿಂದ ಬಂದು ಸಮಾರಂಭದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

11 + 18 =