ಬೈಂದೂರು ಬೀಚ್ ಉತ್ಸವದ ಪೋಸ್ಟರ್, ಸ್ಟಿಕ್ಕರ್ ಬಿಡುಗಡೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೆಸುಗೆ ಫೌಂಡೇಶನ್ ಹಾಗೂ ಪಡುವರಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಬೈಂದೂರು ಸೋಮೇಶ್ವರದಲ್ಲಿ ಮೊದಲ ಭಾರಿಗೆ ಡಿ.೨೮ರಿಂದ ಜ.೧ರ ತನಕ ಜರುಗುತ್ತಿರುವ ’ಬೈಂದೂರು ಬೀಚ್ ಉತ್ಸವ’ದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಪೋಸ್ಟರ್ ಹಾಗೂ ಸ್ಟಿಕ್ಕರ್‌ಗಳನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ ಬಿಡುಗಡೆಗೊಳಿಸಿದರು.

Call us

Call us

Click Here

Visit Now

ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ಗೌರಿ ದೇವಾಡಿಗ, ತಾ.ಪಂ ಸದಸ್ಯೆ ಗಿರಿಜಾ ಖಾರ್ವಿ, ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಪಂ ಸದಸ್ಯ ರಘುರಾಮ ಪೂಜಾರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಕೆ.ಜಿ. ನಾಗಪ್ಪ ಶೇರುಗಾರ್, ಸೊಡಿತಾರ್ ಸುಬ್ರಾಯ ಶೇರುಗಾರ್, ಪ್ರಸನ್ನಕುಮಾರ್ ಉಪ್ಪುಂದ, ಮುದಾಸಿರ್ ಬೈಂದೂರು, ಪ್ರಿಯದರ್ಶಿನಿ ಬೆಸ್ಕೂರು, ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು, ರಾಮಕ್ಷತ್ರಿಯ ಮಾತೃ ಮಂಡಳಿ ಬೈಂದೂರು ಇದರ ಮಾಜಿ ಅಧ್ಯಕ್ಷ ಆಶಾ ಜಗದೀಶ ಪಟವಾಲ್, ಬೆಸುಗೆ ಫೌಂಡೇಶನ್‌ನ ಪ್ರಮುಖರಾದ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Click here

Click Here

Call us

Call us

ಜಯಾನಂದ ಹೋಬಳಿದಾರ್ ಸ್ವಾಗತಿಸಿದರು. ಬೆಸುಗೆ ಫೌಂಡೇಶನ್ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರುಣಕುಮಾರ್ ಶಿರೂರು ಕಾರ್ಯಕ್ರಮದ ವಿವರ ತಿಳಿಸಿದರು. ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬೈಂದೂರಿನ ಭೌಗೋಳಿಕ ಲಕ್ಷಣ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ತಕ್ಕುದಾಗಿಲ್ಲ. ಆದರೆ ನಿಸರ್ಗದತ್ತವಾಗಿ ಒಲಿದುಬಂದಿರುವ ಪ್ರಾಕೃತಿಕ ಸೌಂದರ್ಯವನ್ನು ಅಭಿವೃದ್ಧಿ ಪಡಿಸಿ ಅತ್ಯುತ್ತಮ ಪ್ರವಾಸಿತಾಣವನ್ನಾಗಿಸುವ ವಿಫುಲ ಅವಕಾಶಗಳಿವೆ. ಇಲ್ಲಿನ ಸಮುದ್ರ, ಜಲಪಾತ, ದೇಗುಲ ಸೇರಿದಂತೆ ಹತ್ತಾರು ಪ್ರದೇಶಗಳು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದ್ದು ಅದರ ಅಭಿವೃದ್ಧಿಯತ್ತ ಪ್ರಾಂಜಲ ಮನಸ್ಸಿನಿಂದ ಗಮನ ಹರಿಸಬೇಕಿದೆ. – ಕೆ. ವೆಂಕಟೇಶ ಕಿಣಿ, ಅಧ್ಯಕ್ಷರು ಬೆಸುಗೆ ಫೌಂಡೇಶನ್ ರಿ. ಬೈಂದೂರು

Leave a Reply

Your email address will not be published. Required fields are marked *

five × two =