ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಬೈಂದೂರು, ಯಡ್ತರೆ ಮತ್ತು ಪಡುವರಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಬೈಂದೂರನ್ನು ಪಟ್ಟಣ ಪಂಚಾಯಿತಿ ಆಗಿ ರಾಜ್ಯ ಸರ್ಕಾರವು ಮೇಲ್ದರ್ಜೆಗೇರಿಸಿದೆ. ಈ ಸಂಬಂಧ ನಗರಾಭಿವೃದ್ಧಿ ಸಚಿವಾಲಯ ಹೊರಡಿಸಿದ ಅಧಿಸೂಚನೆಯನ್ನು ಡಿ. 31ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

Call us

Call us

Visit Now

ನೂತನ ಪಟ್ಟಣ ಪಂಚಾಯಿತಿ ಪ್ರದೇಶವು 2011ರ ಜನಗಣತಿಯ ಪ್ರಕಾರ 24,957ಜನಸಂಖ್ಯೆ, 433 ಜನಸಾಂದ್ರತೆ ಮತ್ತು ಶೇ. 55 ಕೃಷಿಯೇತರ ಚಟುವಟಿಕೆಗಳ ಉದ್ಯೋಗ ಹೊಂದಿರುವುದರಿಂದ ಪಟ್ಟಣ ಪಂಚಾಯಿತಿ ಆಗುವ ಅರ್ಹತೆ ಪಡೆದಿದೆ ಎಂದು ಅಧಿಸೂಚನೆ ತಿಳಿಸಿದೆ. ಕುಂದಾಪ್ರ ಡಾಟ್ ಕಾಂ ವರದಿ.

Click here

Call us

Call us

ಹೊಸ ಪಟ್ಟಣ ಪಂಚಾಯಿತಿಯು 54.24 ಚದರ ಕಿಲೋಮೀಟರು ವ್ಯಾಪ್ತಿ ಹೊಂದಿರುತ್ತದೆ. ಪೂರ್ವಕ್ಕೆ ಪಶ್ಚಿಮ ಘಟ್ಟ ಮತ್ತು ಯಳಜಿತ ಗ್ರಾಮ, ಪಶ್ಚಿಮಕ್ಕೆ ಅರಬೀ ಸಮುದ್ರ, ಉತ್ತರದಲ್ಲಿ ಭಾಗಶ: ಶಿರೂರು ಗ್ರಾಮ ಮತ್ತು ಪಶ್ಚಿಮ ಘಟ್ಟ ಹಾಗೂ ದಕ್ಷಿಣದಲ್ಲಿ ಸುಮನಾವತಿ ನದಿ ಇದರ ಗಡಿಯಾಗಿರುತ್ತವೆ. ಕುಂದಾಪ್ರ ಡಾಟ್ ಕಾಂ ವರದಿ.

ತಗ್ಗರ್ಸೆ ಗ್ರಾಮ ಸೇರ್ಪಡೆ : ಹಿಂದಿನ ಗ್ರಾಮ ಪಂಚಾಯಿತಿ ಮರುಸಂಘಟನೆಯ ಕಾಲದಲ್ಲಿ ಬೈಂದೂರು ಗ್ರಾಮ ಪಂಚಾಯಿತಿಯ ಭಾಗವಾಗಿದ್ದ ತಗ್ಗರ್ಸೆ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯಿತಿ ಘೋಷಣೆಯಾಗಿತ್ತು. ಆದರೆ ಅದು ಅಸ್ತಿತ್ವಕ್ಕೆ ಬಾರದೆ ಬೈಂದೂರು ಗ್ರಾಮ ಪಂಚಾಯಿತಿಯ ಭಾಗವಾಗಿಯೇ ಮುಂದುವರಿದಿತ್ತು. ಅಧಿಸೂಚನೆಯಲ್ಲಿ ಬೈಂದೂರು ಗ್ರಾಮ ಪಂಚಾಯಿತಿ ಪ್ರದೇಶವನ್ನು ಪಟ್ಟಣ ಪಂಚಾಯಿತಿಗೆ ಸೇರಿಸಿರುವುದರಿಂದ ಹಾಗೂ ಯಳಜಿತ ಗ್ರಾಮ ಅದರ ಗಡಿ ಎಂದಿರುವುದರಿಂದ ತಗ್ಗರ್ಸೆ ಗ್ರಾಮವು ಪಟ್ಟಣ ಪಂಚಾಯಿತಿಯ ಭಾಗವಾಗಲಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಅಧಿಸೂಚನೆಯ ಕುರಿತು ಆಕ್ಷೇಪಣೆ ಅಥವಾ ಸಲಹೆಗಳನ್ನು ನೀಡಬಯಸುವವರು ಅದರ ಪ್ರಕಟಣೆಯ ದಿನದಿಂದ ಒಂದು ತಿಂಗಳೊಳಗೆ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ೯ನೆ ಮಹಡಿ, ವಿ.ವಿ. ಗೋಪುರ, ಬೆಂಗಳೂರು ಅವರಿಗೆ ಸಲ್ಲಿಸಬಹುದಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

 

 

Leave a Reply

Your email address will not be published. Required fields are marked *

two × 2 =