ಯಡಮೊಗೆಯ ಉದಯ ಗಾಣಿಗರ ಕುಟುಂಬಕ್ಕೆ ಬೈಂದೂರು ಮಂಡಲ ಬಿಜೆಪಿಯಿಂದ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇತ್ತಿಚಿಗೆ ಹತ್ಯೆಗೀಡಾದ ಯಡಮೊಗೆ ಗ್ರಾಮದ ಉದಯ ಗಾಣಿಗ ಅವರ ಕುಟುಂಬಕ್ಕೆ ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ರೂ.1 ಲಕ್ಷವನ್ನು ಮಾನವೀಯ ನೆಲೆಯಲ್ಲಿ ಹಸ್ತಾಂತರಿಸಿದರು.

ನೆರವು ಹಸ್ತಾಂತರಿಸಿ ಸಾಂತ್ವಾನದ ಮಾತನಾಡಿದ ಅವರು, ಪೋಲಿಸರು ಈಗಾಗಲೇ ತಪ್ಪಿತಸ್ಥರನ್ನು ಬಂಧಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕಾನೂನು ಪ್ರಕಾರ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ. ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ನಾವು ಪಕ್ಷ ಬದ್ಧವಿದೆ ಎಂದರು.

ಈ ಸಂದರ್ಭ ಬಿಜೆಪಿ ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಜೆಡ್ಡು ಮತ್ತು ಪ್ರಿಯದರ್ಶಿನಿ ಬೆಸ್ಕೂರು, ಮಾಜಿ ಜಿ.ಪಂ.ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಹರ್ಷ ಮೆಲ್ಕೋಡ್, ಪ್ರವೀಣ್ ಕುಮಾರ್ ಶೆಟ್ಟಿ ಕೊಡ್ಲಾಡಿ, ಶ್ರೀಗಣೇಶ್ ಉಪ್ಪುಂದ, ರವಿ ಗಾಣಿಗ ಮಲ್ಲಾರಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

one × one =