ಬೈಂದೂರಿನಲ್ಲಿ ಅಪಪ್ರಚಾರದ ಮುಂದೆ ಅಭಿವೃದ್ಧಿಯ ಪ್ರಚಾರ ಸೋತಿತು: ಕೆ. ಗೋಪಾಲ ಪೂಜಾರಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ಭಾರಿ ಚುನಾವಣೆಯಲ್ಲಿ ಅಪಪ್ರಚಾರ, ಜಾತಿಯ ನಡುವೆ ವಿಷಬೀಜ ಭಿತ್ತುವ ತಂತ್ರ, ಹಿಂದೂತ್ವ ಹಾಗೂ ಮೋದಿಯ ಹೆಸರನ್ನಷ್ಟೇ ಬಂಡವಾಳವಾಗಿಸಿಕೊಂಡಿದ್ದರಿಂದ ಬೈಂದೂರಿನಲ್ಲಿ ಬಿಜೆಪಿ ಗೆದ್ದಿದೆ. ಅಪಪ್ರಚಾರದ ಮುಂದೆ ಕ್ಷೇತ್ರಾದ್ಯಂತ ಮಾಡಿರುವ ಅಭಿವೃದ್ಧಿ ಕಾರ್ಯಗಳು ಗೌಣವಾಗಿ ಉಳಿದವು. ಆದರೆ ನಾವು ಸೋಲನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸುತ್ತೇವೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಪರಾಜಿತ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದರು.

Call us

Call us

Visit Now

ಅವರು ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಲ್ಲಾ ವರ್ಗದವರನ್ನೂ ಸಮಭಾವದಿಂದ ಕಂಡು ಅಭಿವೃದ್ಧಿಗೆ ಮತನೀಡಿ ಎಂದಿದ್ದೇವು. ಎಲ್ಲಿಯೂ ಅಪಪ್ರಚಾರಕ್ಕೆ ಹೋಗಲಿಲ್ಲ. ಅಪಪ್ರಚಾರ ಹೆಚ್ಚಿಗೆ ದಿನ ಉಳಿಯದು. ಜನ ಮತ್ತೆ ನಮ್ಮ ಕಾರ್ಯವನ್ನು ನೋಡಿ ಬೆಂಬಲಿಸಲಿದ್ದಾರೆಂಬ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

Click here

Click Here

Call us

Call us

ಕಾಂಗ್ರೆಸ್ ಪಕ್ಷದಲ್ಲಿ ಪಲಾಯಾನ ಬದ್ಧಿಯಿಲ್ಲ. ಎಂತಹ ಸೋಲನ್ನಾದರೂ ಎದುರಿಸಿ ಸಮರ್ಥವಾಗಿ ಮತ್ತೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತೇನೆ. ನನಗೆ ಈ ಅಲೆಯ ಅಬ್ಬರದಲ್ಲಿ ಸೋಲಾಗಿರಬಹುದು ಆದರೆ ಮುಂದೆ ನಡೆಯಲಿರುವ ಎಲ್ಲಾ ಸ್ಥಳೀಯಾಡಳಿತದ ಚುನಾವಣೆಗಳಲ್ಲಿ ನಾನೇ ಸ್ವತಃ ನೇತೃತ್ವವಹಿಸಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ತಂದುಕೊಡುವಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ಸೋಲು ಗೆಲುವು ಎರಡನ್ನೇ ನಾನು ಕಂಡಿದ್ದೇನೆ. ಸೋತಾಗಲೂ ಗೆದ್ದಾಗಲೂ ನಿಮ್ಮೊಂದಿಗೆ ಇದ್ದೇನೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದಿಗೂ ಎದೆಗುಂದಬಾರದು. ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಯಾರಿಗೇ ತೊಂದರೆಯಾದರೂ ತಮ್ಮ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ ಎಂದು ಕಾರ್ಯಕರ್ತರನ್ನು ಹುರಿದಂಬಿಸಿದರು.

Click Here

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ೫ ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಕುಳಿತು ಅಭಿವೃದ್ಧಿ ಮಾಡುವವರಿಗೆ ಬೆಂಬಲ ನೀಡಲಿದೆ. ನಾವೆಂದಿಗೂ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಮುಂದೆಯೂ ಮಾಡುವಿದಿಲ್ಲ. ಯಾರೇ ಅಧಿಕಾರದಲ್ಲಿರಲಿ ಅಭಿವೃದ್ಧಿ ಮಾಡುವವರಿಗೆ ನಮ್ಮ ಸಹಕಾರ ಇದೆ. ಬೈಂದೂರಿನಲ್ಲಿ ಮೆಡಿಕಲ್ ಕಾಲೇಜು, ವಿಮಾನ ನಿಲ್ದಾಣ, ಇಂಜಿನಿಯರಿಂಗ್ ಕಾಲೇಜು, ವಾರಾಹಿ ನೀರನ್ನು ಬಳಸಿಕೊಂಡು ಕುಡಿಯುವ ನೀರಿನ ಯೋಜನೆ ಹೀಗೆ ಹಲವಾರು ಭರವಸೆಗಳನ್ನು ಕೊಟ್ಟಿದ್ದಾರೆ. ಅವೆಲ್ಲವೂ ಅನುಷ್ಠಾನಗೊಳ್ಳಲಿ ಎಂದು ನಾನು ಹಾರೈಸುತ್ತೇನೆ ಎಂದರು.

ತಾನು ಪ್ರತಿ ಶುಕ್ರವಾರ ಬೆಳಿಗ್ಗೆ ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ, ಮಧ್ಯಾಹ್ನ ವಂಡ್ಸೆ ಕಛೇರಿಯಲ್ಲಿ ಸಾರ್ವಜನಿಕರ ಅಹವಾಲು ಕೇಳಲು ಇರಲಿದ್ದೇನೆ. ನನ್ನಿಂದಾಗುವ ಸೇವೆಯಲ್ಲಿ ಜನರಿಗೇ ಸದಾ ಮಾಡಲಿದ್ದೇನೆ. ಎಲ್ಲರ ವರ್ಗದ ಜನರಿಗೆ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಈ ಸಂದರ್ಭ ಬೈಂದೂರು ಕ್ಷೇತ್ರದ ಮತದಾರರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಕೆಪಿಸಿಸಿ ಸದಸ್ಯರಾದ ಎಂ.ಎ ಗಫೂರ್, ರಘುರಾಮ ಶೆಟ್ಟಿ, ಮಂಜಯ್ಯ ಶೆಟ್ಟಿ, ಬೈಂದೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಕಾಂಗ್ರೆಸ್ ಮುಖಂಡರುಗಳಾದ ಗೋಕುಲ್ ಶೆಟ್ಟಿ, ದೇವಾನಂದ ಶೆಟ್ಟಿ, ಪಿಎಲ್ ಜೋಸ್, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ ಸ್ವಾಗತಿಸಿದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಕೀಲ ಪ್ರಸನ್ನಕುಮಾರ್ ಶೆಟ್ಟಿ ಕೆರಾಡಿ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

4 × two =