ಬೈಂದೂರು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಗದೀಶ ಪಟವಾಲ್ ಅಪಘಾತದಲ್ಲಿ ನಿಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಪಡುವರಿ ನಿವಾಸಿ ಜಗದೀಶ ಪಟವಾಲ್ (62) ಯಡ್ತರೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ನಿಧನರಾಗಿದ್ದಾರೆ.

Call us

Call us

ಬೈಕಿನಲ್ಲಿ ಪತ್ನಿ ಆಶಾ ಅವರೊಂದಿಗೆ ಬಿಜೂರು ಕಡೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಯಡ್ತರೆ ಜಂಕ್ಷನ್ ಬಳಿ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದ ಪರಿಣಾಮ ಜಗದೀಶ ಪಟವಾಲ್ ಹಾಗೂ ಅವರ ಪತ್ನಿ ರೋಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಈರ್ವರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.‌ ಜಗದೀಶ ಪಟವಾಲ್ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್ ಸವಾರನ ಕಾಲಿಗೆ ಗಾಯಗಳಾಗಿದೆ.

Call us

Call us

ಜಗದೀಶ ಪಟವಾಲ್ ಅವರು ಬೈಂದೂರು ಹಿತರಕ್ಷಣಾ ವೇದಿಕೆ ಅಧ್ಯಕ್ಷರಾಗಿ, ಶ್ರೀ ಮೂಕಾಂಬಿಕಾ ರೈಲ್ವೆ ಹೋರಾಟ ಸಲಹಾ ಸಮಿತಿ ಸ್ಥಾಪಕ ಸದಸ್ಯ ಹಾಗೂ ಕಾರ್ಯದರ್ಶಿಯಾಗಿ ಮೂಕಾಂಬಿಕಾ ರೈಲ್ವೆ ನಿಲ್ದಾಣ ಅಭಿವೃದ್ದಿಪಡಿಸಲು ಸಮಿತಿಯೊಂದಿಗೆ ಶ್ರಮವಹಿಸಿದ್ದರು. ಬೈಂದೂರು ನಾಗರಿಕ ವೇದಿಕೆ ಮೂಲಕ ತಾಲೂಕು ರಚನಾ ಸಮಿತಿಯೊಂದಿಗೆ ಹೋರಾಟಕ್ಕೆ ಕೈ ಜೋಡಿಸಿದ್ದರು.

ಜಗದೀಶ ಪಟವಾಲ್ ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಜಗದೀಶ ಪಟವಾಲ್ ಅವರ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಗೌರವಾರ್ಥವಾಗಿ ಮಧ್ಯಾಹ್ನ 01 ಗಂಟೆಯಿಂದ 04 ಘಂಟೆಯವರೆಗೆ ಬೈಂದೂರು ಪೇಟೆಯ ಅಂಗಡಿಮುಂಗಟ್ಟುಗಳನ್ನು ಮುಚ್ಚಲಾಗಿತ್ತು.

Leave a Reply

Your email address will not be published. Required fields are marked *

fourteen + eleven =