ಗೌರವ ಡಾಕ್ಟರೇಟ್ ಪುರಸ್ಕೃತ ರವಿ ಶೆಟ್ಟಿಗೆ ಬೈಂದೂರು ಬ್ಲಾಕ್ ಜೆಡಿಎಸ್‌ನಿಂದ ಅಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜರ್ಮನಿಯ ಇಂಟರ್ ನ್ಯಾಶನಲ್ ಓಪನ್ ಯೂವರ್‌ಸಿಟಿ ವತಿಯಿಂದ ಕಾರ್ಮಿಕ ಮುಖಂಡ ಹಾಗೂ ಕಾರ್ಮಿಕ ವೇದಿಕೆಯ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷ, ಜೆಡಿಎಸ್‌ನ ಯುವ ನಾಯಕ ರವಿ ಶೆಟ್ಟಿ ಬೈಂದೂರು ಇವರಿಗೆ ಇತ್ತೀಚೆಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಈ ಹಿನ್ನೆಲೆಯಲ್ಲಿ ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾ ಭವನದಲ್ಲಿ ಬೈಂದೂರು ಬ್ಲಾಕ್ ಜೆಡಿಎಸ್ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು.

ಬೈಂದೂರು ಬ್ಲಾಕ್ ಜೆಡಿಎಸ್ ಅಧ್ಯಕ್ಷ ಯು. ಸಂದೇಶ ಭಟ್ ರವರು ರವಿ ಶೆಟ್ಟಿ ಇವರಿಗೆ ಶುಭ ಹಾರೈಸಿ ಅಭಿನಂದಿಸಿ ಮಾತನಾಡುತ್ತಾ ರವಿ ಶೆಟ್ಟಿ ಅವರು ಕಾರ್ಮಿಕರು ಹಾಗೂ ಷೋಷಿತರು, ರೈತ ಪರ, ಹಲವಾರು ಹೋರಾಟ ನಡೆಸಿ ಕಾರ್ಮಿಕ ಸಂಘಟನೆ ಮುನ್ನೆಡೆಸಿರುತ್ತಾರೆ ಮತ್ತು ಜೆಡಿಎಸ್ ವತಿಯಿಂದ ಜನಪಯೋಗಿ ಕೆಲಸಗಳನ್ನು ಮಾಡಿರುವುದರಿಂದ ಸಂಧಿರುವ ಗೌರವ ಡಾಕ್ಟರೇಟ್ ಸಾಮಾಜಿಕ ಮತ್ತು ಷೋಷಿತರ ಪರವಾಗಿ ದುಡಿಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿದೆ ಹಾಗೂ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಲಿ ಎಂದು ಹೇಳಿದರು.

ಪಕ್ಷದ ಹಿರಿಯ ನಾಯಕ ರಾಜು ದೇವಾಡಿಗ ರವಿ ಶೆಟ್ಟಿ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಮಾತನಾಡುತ್ತಾ ರವಿ ಶೆಟ್ಟಿಯವರು ಸಮಾಜ ಮುಖಿ ಕೆಲಸ ಇನ್ನಷ್ಟು ನಿರಂತರವಾಗಿ ಮಾಡಲಿ ಹಾಗೂ ಸಮಾಜಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ನಾಯಕರಾದ ನಿತೀನ್ ಬಿ ಶೆಟ್ಟಿ ಹಾಗೂ ಜಯಶೀಲ ಶೆಟ್ಟಿ ಮಾರಿಕಾಂಬ ಯೂತ್ ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಲಾಕ್ ಜೆಡಿಎಸ್ ವಕ್ತಾರ ಗುರುರಾಜ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

five + seven =