ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಮಾರುಕಟ್ಟೆಯಲ್ಲಿ ದೊರೆಯುವ ಹತ್ತಾರು ಬಗೆಯ ಹಣ್ಣು, ತರಕಾರಿಗಳನ್ನು ನಮ್ಮ ತೋಟದಲ್ಲಿಯೂ ಬೆಳೆಸಬಹುದಲ್ವಾ. ತೆಂಗು, ಹಲಸು, ಗೇರು ಮುಂತಾದ ತೋಟಗಾರಿಕಾ ಬೆಳೆಗಳಿಂದ ಹಿಡಿದು ಕೈದೋಟದಲ್ಲಿ ಅರಳುವ ಸುಂದರ ಹೂವಿನ ಗಿಡಗಳನ್ನು ನಾವೂ ಬೆಳೆಸಬಹುದಲ್ವ. ಹೀಗೊಂದು ಯೋಚನೆ ಸಾಕಷ್ಟು ಭಾರಿ ನಿಮಗೂ ಬಂದಿದೆಯೇ. ಹಾಗಿದ್ದರೆ ನಿಮ್ಮ ಯೋಜನೆಗಳನ್ನು ಸಾಕಾರಗೊಳಿಸಲು ಇದೇ ಸರಿಯಾದ ಸಮಯ. ಬೈಂದೂರು ವತ್ತಿನಣೆ ಬಳಿ ಬರುವ ಕರ್ನಾಟಕ ನರ್ಸರಿಯಲ್ಲಿ ನೂರಾರು ಬಗೆಯ ಫಲ-ಪುಪ್ಪದ ಗಿಡಗಳ ಸಂಗ್ರಹವಿದೆ. ಇಲ್ಲಿ 5,000ಕ್ಕೂ ಅಧಿಕ ಅಪೂರ್ವ ಸಸ್ಯ ಸಂಕುಲವಿದ್ದು ಈ ಪೈಕಿ 400ಕ್ಕೂ ಹೆಚ್ಚು ಪ್ರಭೇದದ ಹಣ್ಣಿನ ಗಿಡಗಳು, ಶುದ್ದ ಕಾಂಡದ ಕಸಿ ಮಾಡಿದ ಗಿಡ, ಹೈಬ್ರೀಡ್ ಗಿಡಗಳು, ಒಳಾಂಗಣ ಹಾಗೂ ಹೊರಾಂಗಣಕ್ಕೆ ಹೊಂದಿಕೊಳ್ಳುವ ಅಲಂಕಾರಿಕ ಹೂವಿನ ಗಿಡಗಳು ನರ್ಸರಿಯಲ್ಲಿವೆ.
ಯಾವೆಲ್ಲ ಗಿಡಗಳಿವೆ?
ಮೂರು ಕೆ.ಜಿ ತೂಕದ ಹಣ್ಣು ನೀಡುವ ಮಾವಿನ ಗಿಡ, ಒಂದು ಕೆ.ಜಿ ಹಣ್ಣು ನೀಡುವ ಸೀತಾಫಲ ಗಿಡ, ಥಾಯ್ಲೆಂಡ್ ಹಣ್ಣುಗಳು, ಶುಗರ್ ಕಡಿಮೆ ಮಾಡುವ ಇಂಡೋನೇಷ್ಯಾದ ಮಕ್ಕುಟದೇವ ಹಣ್ಣು, ಸೀಡ್ಲೆಸ್ ಲಿಂಬು, ಲಕ್ಷಣ ಫಲ, ರಂಬೂತಾನ್, ಒಂದೂವರೆ ವರ್ಷದಲ್ಲಿ ಫಲ ನೀಡುವ ಹಲಸು, ಸೀಡ್ಲೆಸ್ ಹಲಸು ಸೇರಿದಂತೆ 35 ಪ್ರಭೇದದ ಹಲಸಿನ ಗಿಡಗಳು, ರೆಡ್ ಮುಸುಂಬಿ, ಬನಾನ, ಚಿಕ್ಕು, ಫಿಂಗರ್ ಲೆಮನ್, ಮಲೇಷಿಯನ್ ಹಣ್ಣುಗಳು, ಕೆಂಪು ಹಲಸು, ಎರಡು ವರ್ಷದಲ್ಲಿ ಫಲ ಕೊಡುವ ತೆಂಗಿನ ಗಿಡ, ಅಧಿಕ ಇಳುವರಿ ನೀಡುವ ಗೇರು ಗಿಡ, ಥಾಯ್ಲೆಂಡ್ ಮ್ಯಾಂಗೊ, ಸ್ವೀಟ್ ಚರ್ರಿ, ತೆಕ್ಕನ್ ಕಾಳು ಮೆಣಸು, ಒಂದು ಗೊಂಚಲಲ್ಲಿ 25ಕ್ಕೂ ಹೆಚ್ಚು ಬೀಜ ಬರುವ ಗೇರು ಗಿಡ, ಥಾಯ್ಲೆಂಡ್ ವಾಟರ್ ಆಪಲ್, ವರ್ಷದಲ್ಲಿ ಮೂರು ಸಾರಿ ಫಲ ನೀಡುವ ಮಾವಿನ ಗಿಡ, ಒಂದೂವರೆಯಿಂದ ಎರಡು ಕೆ.ಜಿ ತೂಕ ಇರುವ ವಿಶೇಷ ತೆಂಗಿನಕಾಯಿ ಬೆಳೆಯುವ ಗಿಡಗಳು ಸೇರಿದಂತೆ ಹಲವು ಬಗೆಯ ಗಿಡಗಳ ಸಂಗ್ರಹವಿದೆ.
ಪ್ರಾಯೋಗಿಕ ಯಶಸ್ಸಿನ ಬಳಿಕವೇ ಮಾರಾಟ:
ತೋಟಗಾರಿಕೆಯಲ್ಲಿ 35 ವರ್ಷಗಳ ಅನುಭವ ಹೊಂದಿರುವ ಬೆನ್ನಿ ಚಾಕೋ ಅವರು ಉದ್ಯಮಿ ವೆಂಕಟೇಶ ಕಿಣಿ ಅವರೊಂದಿಗೆ ಆರಂಭಿಸಿದ ಕರ್ನಾಟಕ ನರ್ಸರಿ ಬೈಂದೂರು ಭಾಗದಲ್ಲಿ ಖ್ಯಾತಿ ಗಳಿಸಿದೆ. ಶೀಘ್ರ ಫಲ, ಹೆಚ್ಚು ಇಳುವರಿ ನೀಡುವ ಹಣ್ಣು ಹಾಗೂ ಇತರೆ ಗಿಡಗಳ ಬಗ್ಗೆ, ಬೆನ್ನಿ ಚಾಕೋ ಅವರು ಇಲ್ಲಿನ ಭೌಗೋಳಿಕ ಅಂಶ ಹಾಗೂ ಮಣ್ಣಿಗೆ ಅನುಗುಣವಾಗಿ ಸಂಶೋಧನೆ ನಡೆಸಿ ತಮ್ಮ ವಿಶಾಲವಾದ ಫಾರ್ಮ್ನಲ್ಲಿ ಗಿಡಗಳನ್ನು ಬೆಳೆಸುತ್ತಾರೆ. ಗಿಡಗಳು ಸ್ಥಳಿಯ ವಾತಾವರಣಕ್ಕೆ ಒಗ್ಗಿಕೊಂಡು ಬೆಳೆದು ಫಲ ಬಿಡುವುದು ಖಾತರಿಯಾದರೆ ಮಾತ್ರವೇ ಆ ತಳಿಯ ಗಿಡಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ.
ವಿವರಗಳಿಗೆ ಸಂಪರ್ಕಿಸಿ
ಕರ್ನಾಟಕ ನರ್ಸರಿ, ಎನ್.ಎಚ್-66 ಬೈಂದೂರು ಮೊ: 9241487056, 9483142266