ಬೈಂದೂರು ಸ.ಮಾ.ಹಿ.ಪ್ರಾ. ಶಾಲೆ: ನಿವೃತ್ತಿಗೊಂಡ ಶಿಕ್ಷಕಿ ಭಾಗಿರಥಿ ಮೊಗೇರ ಅವರಿಗೆ ಬೀಳ್ಕೊಡುಗೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿವೃತ್ತಿಗೊಂಡ ಶಿಕ್ಷಕಿ ಭಾಗಿರಥಿ ಮೊಗೇರ ಅವರಿಗೆ ಬೀಳ್ಕೊಡುಗೆ ಸಮಾರಂಭ ಗುರುವಾರ ಜರುಗಿತು.

Call us

Call us

ಅಧ್ಯಕ್ಷತೆ ವಹಿಸಿದ ಶಾಲಾ ಪದವೀಧರ ಮುಖ್ಯೋಪಾಧ್ಯಾಯರಾದ ಜನಾರ್ಧನ್ ಶಿಕ್ಷಕರ ಉತ್ತಮ ಸೇವೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸ ಹಾಗೂ ಆತ್ಮ ಸಂತೃಪ್ತಿ ಸಾಧ್ಯ ಎಂದರು.

Call us

Call us

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕರುಣಾರ ಶೆಟ್ಟಿ, ಬೈಂದೂರು ವಲಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಶೇಖರ ಪೂಜಾರಿ, ನಿವೃತ್ತ ಶಿಕ್ಷಕಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಸಂಜಯ್ ದೇವಾಡಿಗ, ನಿವೃತ್ತ ಮುಖ್ಯೋಪಾಧ್ಯಾಯರಾದ ಬಾಲಯ್ಯ ಶೇರುಗಾರ್, ದೈಹಿಕ ಶಿಕ್ಷಕರಾದ ಪ್ರಭಾಕರ್ ಹೆಚ್., ಸಹ ಶಿಕ್ಷಕರಾದ ಅನ್ನಪೂರ್ಣ, ನಾಗರತ್ನ, ಸರಸ್ವತಿ ಮಮತಾ ಉಪಸ್ಥಿತರಿದ್ದರು

ಶಾಲಾ ಸಹ ಶಿಕ್ಷಕಿ ವೀಣಾ ಹೆಗಡೆ ಸ್ವಾಗತಿಸಿದರು ಸುಜಾತ ಧನ್ಯವಾದ ಸಲ್ಲಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು ಶಾಲಾ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಯವರು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಪೋಷಕರು ಶಿಕ್ಷಕಿಯವರಿಗೆ ಆತ್ಮೀಯವಾಗಿ ಶುಭ ಹಾರೈಸಿದರು. ತದನಂತರ ಶಿಕ್ಷಕಿಯವರನ್ನು ಶಾಲಾ ಶಿಕ್ಷಕ ವೃಂದದವರು ಮನೆಯವರೆಗೆ ಹೋಗಿ ಬೀಳ್ಕೊಟ್ಟರು.

Leave a Reply

Your email address will not be published. Required fields are marked *

20 − 14 =