ಬೈಂದೂರು: ಒತ್ತಿನಣೆ ಗುಡ್ಡ ಮತ್ತೆ ಕುಸಿದು ರಾಷ್ಟ್ರೀಯ ಹೆದ್ದಾರಿ ಬಂದ್, ಕಷ್ಟವಾಗುತ್ತಿದೆ ಬದಲಿ ಮಾರ್ಗದ ಸಂಚಾರ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನೆನ್ನೆಯಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಸಮೀಪದ ಒತ್ತಿನಣೆ ಗುಡ್ಡ ಮತ್ತೆ ಕುಸಿದಿದ್ದ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಬ್ಲಾಕ್ ಆಗಿದೆ. ಶನಿವಾರ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಗುಡ್ಡ ಜರಿದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸುಮಾರು ಒಂದೂವರೆ ಕಿ.ಮೀ ತನಕ ಸಾಲುಗಟ್ಟಿ ನಿಂತಿವೆ.

Call us

Call us

Visit Now

ಬೆಳಿಗ್ಗೆಯಿಂದಲೇ ಮಣ್ಣು ತೆರವು ಕಾರ್ಯಾಚರಣೆ ಆರಂಭಗೊಂಡಿದ್ದರೂ, ಭಾರಿ ಮಳೆಯಿಂದಾಗಿ ಅಡ್ಡಿಯುಂಟಾಗುತ್ತಿದೆ. ರಸ್ತೆಯಲ್ಲಿಯೇ ಗುಡ್ಡದ ನೀರು ಹರಿದು ಬರುತ್ತಿದ್ದು ಕಾರ್ಯಾಚರಣೆಗೆ ತೊಡಕು ಉಂಟು ಮಾಡುತ್ತಿದೆ. ಬೈಂದೂರು ದೊಂಬೆ ಮೂಲಕ ಹಾಗೂ ಶಿರೂರು ಪೇಟೆಯಿಂದ ಮದ್ದೋಡಿ ರಸ್ತೆಯಲ್ಲಿ ಲಘು ವಾಹನಗಳಿಗೆ ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದ್ದರೂ ರಸ್ತೆ ಕಿರಿದಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Click Here

Click here

Click Here

Call us

Call us

ಎರಡು ದಿನಗಳ ಹಿಂದಷ್ಟೇ ಕುಸಿದಿತ್ತು:
ಮೊದಲ ಮಳೆಗೆ ಗುಡ್ಡ ಕುಸಿತ ಆರಂಭವಾಗಿದ್ದು ಎರಡು ದಿನಗಳ ಹಿಂದಷ್ಟೇ ಹೆದ್ದಾರಿ ಬ್ಲಾಕ್ ಆಗಿತ್ತು. ಸತತವಾಗಿ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಐಆರ್‌ಬಿ ಕಂಪೆನಿಯ ಮೇಲೆಯೂ ಕೇಸ್ ದಾಖಲಿಸಲಾಗಿತ್ತು. ಮಳೆಯಿಂದಾಗಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಗುಡ್ಡ ಕುಸಿಯದಂತೆ ಮೆಸ್ ಅಳವಡಿಸುವ ಕಾರ್ಯ ನಡೆಯುತ್ತಿದ್ದ ಮಳೆಯಿಂದಾಗಿ ನಿಧಾನವಾಗುತ್ತಿದೆ ಎಂದು ಕಂಪೆನಿಯ ಇಂಜಿನಿಯರ್‌ಗಳು ತಿಳಿಸಿದ್ದರು. ಆದರೆ ಎರಡು ದಿನಗಳಲ್ಲಿ ಮತ್ತೆ ಕುಸಿತ ಉಂಟಾಗಿರುವುದು ಅವರ ನಿದ್ದೆಗೆಡಿಸಿದೆ.

ಸಾಕಷ್ಟು ಭಾರಿ ಅಪಾಯದ ಮುನ್ಸೂಚನೆ ನೀಡಿದ ಬಳಿಕವೂ ಕಂಪೆನಿ ಕಂದಕ ಕೊರೆದು ರಸ್ತೆ ನಿರ್ಮಿಸಿತ್ತು. ಈದೀಗ ಮಳೆಗೆ ಗುಡ್ಡ ಕುಸಿಯಲಾರಂಭಿಸಿದ್ದು ಈ ಮಾರ್ಗದಲ್ಲಿ ಸಂಚಾರವೇ ಅಪಾಯಕಾರಿಯಾಗಿ ಪರಿಣಮಿಸಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಬೈಂದೂರಿನ ನಾಗರಿಕರು ಹೇಳುತ್ತಿದ್ದಾರೆ.

► ಬೈಂದೂರು: ಒತ್ತಿನಣೆ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ ಬಂದ್  – http://kundapraa.com/?p=23344


On account of unscientific execution of national highway widening work, Ottinene hillock lining the national highway No 66 that has been dug up all around slumped and got deposited on the national highway 66.

Leave a Reply

Your email address will not be published. Required fields are marked *

16 + 15 =