ಬೈಂದೂರು ಪ್ಯಾಲೇಸ್: ಬೈಂದೂರಿನ ಮೊದಲ ಐಶಾರಾಮಿ ಅಪಾರ್ಟ್‌ಮೆಂಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರಿನ ಮೊದಲ ಲಕ್ಸುರಿ ಅಪಾರ್ಟ್‌ಮೆಂಟ್ ಪ್ರಾಜೆಕ್ಟ್ ‘ಬೈಂದೂರು ಪ್ಯಾಲೇಸ್’ಗೆ ಸೆ.12ರಂದು ಶಂಕುಸ್ಥಾಪನೆ ನೆರವೇರಲಿದೆ. ಬೈಂದೂರು ರಾಷ್ಟ್ರೀಯ ಹೆದ್ದಾರಿ – 66ರಲ್ಲಿ  ಹೊಸ ಬಸ್ ನಿಲ್ದಾಣದ ಸಮೀಪ ಆರಂಭಗೊಳ್ಳಲಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಹೆಲ್ತ್ ಕ್ಲಬ್, ಸ್ವಿಮ್ಮಿಂಗ್ ಪೂಲ್, ಒಳಾಂಗಣ ಕ್ರೀಡೆ, 24*7 ಸೆಕ್ಯೂರಿಟಿ, ಸಿಸಿ ಟಿವಿ, ಕ್ಲಬ್ ಹೌಸ್, ಜಾಗಿಂಗ್ ಟ್ರ್ಯಾಕ್, ಶಟಲ್ ಕೋರ್ಟ್, ಮಿನಿ ಮಾರ್ಕೆಟ್, ಲಿಫ್ಟ್, ಜನರೇಟರ್ ಬ್ಯಾಕಪ್, ವಿಶಾಲ ಕಾರು ಪಾರ್ಕಿಂಗ್ ಮೊದಲಾದ ಸೌಕರ್ಯಗಳು ಇರಲಿವೆ.

ಬೈಂದೂರಿನಲ್ಲಿ ಈಗಾಗಲೇ ರುಪೀ ಮಾಲ್ ಆರಂಭಿಸಿರುವ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಬಳಿ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿರುವ ಆರ್. ಎಸ್. ವೆಂಚರ‍್ಸ್ ಸಂಸ್ಥೆಯು ಉದ್ಯಮಿ ವೆಂಕಟೇಶ್ ಕಿಣಿ ಅವರೊಂದಿಗೆ ಜಂಟಿಯಾಗಿ ‘ಬೈಂದೂರು ಪ್ಯಾಲೇಸ್’ ಪ್ರಾಜೆಕ್ಟ್ ಕೈಗೆತ್ತಿಕೊಂಡಿದೆ. ಬೈಂದೂರಿನ ಮೊದಲ ಪ್ರಾಜೆಕ್ಟ್ ಆಗಿರುವ ಕಾರಣ ಆರ್. ಎಸ್. ವೆಂಚರ‍್ಸ್ ’ಮಾದರಿ ಫ್ಲಾಟ್’ ನಿರ್ಮಿಸಿದ್ದು ಬೈಂದೂರು ಪ್ಯಾಲೇಸ್‌ನ ಫ್ಲಾಟ್‌ಗಳು ಪೂರ್ಣಗೊಂಡ ಬಳಿಕ ಹೇಗಿರಲಿವೆ ಎಂಬುದರ ಸ್ಪಷ್ಟ ಚಿತ್ರಣ ದೊರೆಯಲಿದೆ. ಮಾದರಿ ಫ್ಲಾಟ್‌ಗಳನ್ನು ಗ್ರಾಹಕರು ಉಚಿತವಾಗಿ ವೀಕ್ಷಿಸಬಹುದಾಗಿದೆ.

ಈ ಪ್ರಾಜೆಕ್ಟ್‌ನಲ್ಲಿ ಒಂದು ಬೆಡ್, ಎರಡು ಬೆಡ್ ಹಾಗೂ ಮೂರು ಬೆಡ್ ಅಪಾರ್ಟ್‌ಮೆಂಟ್‌ಗಳು ಇರಲಿವೆ. ಅಪಾರ್ಟ್‌ಮೆಂಟ್‌ನಲ್ಲಿ ಒಂದು ಬೆಡ್‌ಗೆ 15 ಲಕ್ಷ, ಎರಡು ಬೆಡ್‌ಗೆ 22 ಲಕ್ಷ, ಹಾಗೂ ಮೂರು ಬೆಡ್ ಫ್ಲಾಟ್‌ಗೆ 29 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ. ಬೈಂದೂರು ಪ್ಯಾಲೇಸ್ ಪ್ರವರ್ತಕರು ಪ್ರಮುಖ ಬ್ಯಾಂಕ್ ಹಾಗೂ ಆರ್ಥಿಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಅರ್ಹ ಗ್ರಾಹಕರಿಗೆ ಪ್ರತಿ ಫ್ಲಾಟ್ ದರದ ೯೦% ತನಕ ಸಾಲ ಸೌಲಭ್ಯ ಒದಗಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ರುಪೀ ಮಾಲ್‌ನ ಮೊದಲ ಮಹಡಿಯಲ್ಲಿ ಮಾದರಿ ಫ್ಲಾಟ್ ವೀಕ್ಷಣೆಗೆ ಮುಕ್ತ ಅವಕಾಶವಿದ್ದು, ಸೆಪ್ಟೆಂಬರ್ ೧೪ರಿಂದ ಬೆಳಿಗ್ಗೆ 9:30ರಿಂದ ರಾತ್ರಿ 8 ಗಂಟೆಯ ತನಕ ಭೇಟಿ ನೀಡಬಹುದಾಗಿದೆ.

 

Leave a Reply

Your email address will not be published. Required fields are marked *

eighteen − eleven =