ಬೈಂದೂರು ರೋಟರಿ ಕ್ಲಬ್ ಕುಟುಂಬ ಸದಸ್ಯರಿಂದ ದುಬೈ ಪ್ರವಾಸ, ಸಹಮಿಲನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ರೋಟರಿ ಕ್ಲಬ್ ಕುಟುಂಬ ಸದಸ್ಯರ ದುಬೈ ಪ್ರವಾಸದ ಸಂದರ್ಭದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ದುಬೈ ಸಂಸ್ಥೆಯು ಬರ್‌ದಯಬೈನ ರಿಜೆಂಟ್ ಪ್ಯಾಲೆಸ್ ಹೋಟೆಲ್‌ನಲ್ಲಿ ಸಹಮಿಲನ, ಸನ್ಮಾನ ಹಾಗೂ ವಿಶೇಷ ಔತಣಕೂಟವನ್ನು ಏರ್ಪಡಿಸಿತ್ತು.

Call us

Call us

Click Here

Visit Now

ಸಹಮಿಲನ ಕಾರ್ಯಕ್ರಮದಲ್ಲಿ ಕುಂದಾಪುರ ರೋಟರಿ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ಅವರ ನೂತನ ವೆಬ್ಸೈಟನ್ನು ದಿನೇಶ್ ದೇವಾಡಿಗ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ರೋಟರಿ ಕ್ಲಬ್‌ನಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕ್ರೀಯಾಶೀಲ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಬೈಂದೂರು ರೋಟರಿ ಕ್ಲಬ್‌ನ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ (ಅಪ್ಪು ಮಾಸ್ತರ್) ದಂಪತಿಗಳನ್ನು ನ್ಮಾನಿಸಲಾಯಿತು. ಬೈಂದೂರಿನ ಹಿರಿಯ ರೋಟರಿ ಸದಸ್ಯರಾದ ಡಾ. ಎಮ್.ಎಸ್. ಶೆಟ್ಟಿ ಹಾಗೂ ಚಂದ್ರಕಲಾ ದಂಪತಿಗಳನ್ನು ಗೌರವಿಸಲಾಯಿತು.

Click here

Click Here

Call us

Call us

ಈ ಸಂದರ್ಭ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾಧನ್ ದಾಸ್, ಉಪಾಧ್ಯಕ್ಷ ದಿನೇಶ್ ದೇವಾಡಿಗ, ಕಾರ್ಯದರ್ಶಿ ಸುಧಾಕರ ಪೂಜಾರಿ ಮತ್ತು ಚಂದ್ರಶೇಖರ್, ದುಬೈನಲ್ಲಿ ನೆಲೆಸಿರುವ ಕರುಣಾಕರ ಶೆಟ್ಟಿ, ರಿತೇಶ್ ಶೆಟ್ಟಿ, ವಾಸು ದೇವಾಡಿಗ, ಜಗದೀಶ ದೇವಾಡಿಗ, ಬೈಂದೂರು ರೋಟರಿ ಸದಸ್ಯರಾದ ನಿತಿನ್ ಶೆಟ್ಟಿ, ಮಂಜುನಾಥ ಶೆಟ್ಟಿ, ಜಾನ್ ಸಿ. ಥಾಮಸ್, ಎಂ.ಎನ್ ಶೇರಿಗಾರ್, ಡಾ. ಕೆ.ಆರ್ ನಂಬಿಯಾರ್, ಐ. ನಾರಾಯಣ ತಮ್ಮ ಕುಟುಂಬ ಸದಸ್ಯರೊಂದಿಗೆ ಸದಸ್ಯರೊಂದಿಗೆ ಸಹಮಿಲನದಲ್ಲಿ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

17 + one =