ಬೈಂದೂರು: ಶ್ರೀ ಮೂಕಾಂಬಿಕಾ ಕಾಂಪ್ಲೆಕ್ಸ್ ಲೋಕಾರ್ಪಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಗಾಂಧಿ ಮೈದಾನದ ಎದುರು ನೂತನವಾಗಿ ನಿರ್ಮಾಣಗೊಂಡ ಅತ್ಯಾಧುನಿಕ ವಾಣಿಜ್ಯ ಮಳಿಗೆ ‘ಶ್ರೀ ಮೂಕಾಂಬಿಕಾ ಕಾಂಪ್ಲೆಕ್ಸ್’ ಲೋಕಾರ್ಪಣೆಗೊಂಡಿತು.

Click here

Click Here

Call us

Call us

Visit Now

Call us

Call us

ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ನಿರಂತರ ಉತ್ಸಾಹ, ಧನತ್ಮಕವಾದ ಚಿಂತನೆಗಳಿದ್ದರೆ. ಅಂತಹವರಿಗೆ ದೇವರ ಸಹಾಯವಿರುತ್ತದೆ. ಆ ದಿಸೆಯಲ್ಲಿ ಇಂದಿನ ಯುವಜನತೆ ಸಮಾಜದ ಹಾಗೂ ಊರಿನ ಅಭಿವೃದ್ಧಿಯ ಪರ ದಿಕ್ಕು ಬದಲಾಯಿಸುವ ಉದ್ದೇಶದಿಂದ ಯಾವುದೇ ಉದ್ಯಮ, ವ್ಯವಹಾರ ಮಾಡುವಂತಾಗಲು ಧೈರ್ಯದಿಂದ ಮುಂದುವರಿದಾಗ ಮಾತ್ರ ಖಂಡಿತವಾಗಿಯೂ ಯಶಸ್ಸು ದೊರಕುವುದು ಎಂದರು.

ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟೂರಿನ ಋಣ ದೊಡ್ಡದೆನಿಸಿಕೊಳ್ಳುತ್ತದೆ. ಬದುಕು, ಉದ್ಯೋಗಕ್ಕಾಗಿ ಎಲ್ಲಿಗೇ ತೆರಳಿದರೂ ತನ್ನೂರಿನ ಮಣ್ಣಿನ ಋಣ ತೀರಿಸುವ ಗುಣ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ದುಡಿಮೆಯ ಒಂದು ಭಾಗವನ್ನು ತನ್ನೂರಿನ ಅಭಿವೃದ್ಧಿಗಾಗಿ ತೊಡಗಿಸಿಕೊಂಡ ಮಂಜುನಾಥ ಎಸ್. ಪಡುವರಿಯವರ ಕಾರ್ಯ ಅನುಕರಣೀಯ ಎಂದರು.

ಉದ್ಯಮಿಗಳಾದ ಬಿ. ಜಗನ್ನಾಥ ಶೆಟ್ಟಿ, ಪಿ. ಸೂಲಿಯಣ್ಣ ಶೆಟ್ಟಿ, ಶ್ರೀರಾಮ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ಅಧ್ಯಕ್ಷ ನಾಗರಾಜ ಕಾಮಧೇನು ಕೋಟೇಶ್ವರ, ಇಂದಿರಾ ಹಾಗೂ ಎಸ್. ಬಾಲಯ್ಯ ಶೇರುಗಾರ್ ದಂಪತಿಗಳು, ವಿದ್ಯಾಸ್ಮಿತಾ ಮಂಜುನಾಥ ಪಡುವರಿ, ಸುಬ್ರಹ್ಮಣ್ಯ ಎಸ್. ಪಡುವರಿ, ಸೀಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಭಾಸ್ಕರ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.

byndoor-shri-mookambika-complex-opp-gandhi-maidhana-1 byndoor-shri-mookambika-complex-opp-gandhi-maidhana-2byndoor-shri-mookambika-complex-opp-gandhi-maidhana-3 byndoor-shri-mookambika-complex-opp-gandhi-maidhana-5byndoor-shri-mookambika-complex-opp-gandhi-maidhana-4news-s-m-complex2

Call us

Leave a Reply

Your email address will not be published. Required fields are marked *

four × three =