ಬೈಂದೂರು ಮಂಜುನಾಥ ಸ್ಟೋರ್ಸ್ ಸ್ಥಾಪಕ ಸುಬ್ರಹ್ಮಣ್ಯ ನಾವುಡ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಸೆ.24: ಬೈಂದೂರು ಮಂಜುನಾಥ ಸ್ಟೋರ್ಸ ಸ್ಥಾಪಕ  ಸುಬ್ರಹ್ಮಣ್ಯ ನಾವುಡ ಅವರು ವಯೋಸಹಜ ಬಳಲಿಕೆಯಿಂದ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ಅವರು ಈ ಹಿಂದೆ ಕೂಟ ಮಹಾಜಗತ್ತು ಕಿರಿಮಂಜೇಶ್ವರ ವಲಯದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಿತಭಾಷಿ, ವ್ಯವಹಾರದಲ್ಲಿ ಅತ್ಯಂತ ಪ್ರಾಮಾಣಿಕರಾಗಿ, ಸ್ನೇಹಜೀವಿಯಾಗಿದ್ದರು. ಮೃತರು ಪತ್ನಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಕಳೆದ ಕೆಲವಾರು ವರ್ಷಗಳಿಂದ ಬೈಂದೂರು ಮಂಜುನಾಥ ಸ್ಟೋರ್ಸ್’ನ್ನು ಗಣೇಶ್ ನಾಯಕ್ ಹಾಗೂ ಶ್ರೀನಿವಾಸ ನಾಯಕ್ ಸಹೋದರರು ಮುನ್ನಡೆಸುತ್ತಿದ್ದು, ಇಂದಿಗೂ ಅದು ನಾವಡರ ಅಂಗಡಿ ಎಂದೇ ಪ್ರಸಿದ್ಧಿ ಪಡೆದಿದೆ.

 

Leave a Reply

Your email address will not be published. Required fields are marked *

5 × 4 =