ಮಕ್ಕಳಿಬ್ಬರು ಮೃತ – ತಂದೆ-ತಾಯಿ ಗಂಭೀರ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೌಟುಂಬಿಕ ಸಮಸ್ಯೆಯಿಂದ ನೊಂದ ಕುಟುಂಬವೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಬೈಂದೂರಿನ ಗಂಗಾನಾಡು ಗೋಳಿಕಕ್ಕಾರು ಎಂಬಲ್ಲಿ ನಡೆದಿದ್ದು, ಘಟನೆಯಲ್ಲಿ ಶಂಕರನಾರಾಯಣ ಹೆಬ್ಬಾರ್ ಹಾಗೂ ಅವರ ಮಡದಿ ಮಹಾಲಕ್ಷ್ಮೀ ಗಂಭೀರ ಸ್ಥಿತಿಯಲ್ಲಿದ್ದರೇ, ದಂಪತಿಗಳ ಪುತ್ರ ಅಶ್ವಿನ್‌ಕುಮಾರ್ ಹೆಬ್ಬಾರ್ (15), ಪುತ್ರಿ ಐಶ್ವರ್ಯಲಕ್ಷ್ಮಿ ಹೆಬ್ಬಾರ್ (13) ಸಾವನ್ನಪ್ಪಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಾಲಭಾದೆ ಹಾಗೂ ಕೌಟುಂಬಿಕ ಸಮಸ್ಯೆಯಿಂದ ನೊಂದ ಕುಟುಂಬ ಭಾನುವಾರ ರಾತ್ರಿ ವಿಷಸೇವಿಸಿ ಆತ್ಮಹತ್ಯೆಗೆ ಮುಂದಾಗಿರಬಹುದು ಎಂದು ಶಂಕಿಸಲಾಗಿದೆ. ಶಂಕರನಾರಾಯಣ ಅವರೊಂದಿಗೆ ಮಡದಿ ಹಾಗೂ ಮಕ್ಕಳೂ ವಿಷ ಸೇವಿಸಿದ್ದು, ಬೆಳಿಗ್ಗೆ ಘಟನೆಯ ಬಗೆಗೆ ತಿಳಿಯುತ್ತಿದ್ದಂತೆ ಸ್ಥಳೀಯರೋರ್ವರು ಎಲ್ಲರನ್ನೂ ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರಾದರೂ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದರು. ಕುಂದಾಪ್ರ ಡಾಟ್ ಕಾಂ.
ಗಂಭೀರ ಸ್ಥಿತಿಯಲ್ಲಿರುವ ಶಂಕರನಾರಾಯಣ ಹೆಬ್ಬಾರ್ ಅವರ ಮಡದಿಯನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಶಂಕರನಾರಾಯಣ ಹೆಬ್ಬಾರ್ ಅಪಾಯದಿಂದ ಪಾರಾಗಿದ್ದು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಳಿಕಕ್ಕಾರು ನಿವಾಸಿಯಾಗಿದ್ದ ಶಂಕರನಾರಾಯಣ ಹೆಬ್ಬಾರ್ ಅಡುಗೆ ವೃತ್ತಿ ಮಾಡಿಕೊಂಡಿದ್ದರು. ಅವರ ಪುತ್ರ, ಮೃತ ಅಶ್ವಿನಿಕುಮಾರ್ ಹೆಬ್ಬಾರ್ ಬೈಂದೂರು ಜ್ಯೂನಿಯರ್ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದರೇ ಆತನ ತಂಗಿ ಐಶ್ವಯಲಕ್ಷ್ಮಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಳು. ಈರ್ವರು ಕಲಿವಿಕೆಯಲ್ಲಿ ಮುಂದಿದ್ದರು. ಬೈಂದೂರು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. © ಕುಂದಾಪ್ರ ಡಾಟ್ ಕಾಂ.