ಬೈಂದೂರು ತಾ.ಪಂ ಮಾದರಿಯನ್ನಾಗಿಸದಿದ್ದರೂ, ಒಂದಿಷ್ಟು ಕೆಲಸ ಮಾಡಿದ ತೃಪ್ತಿಯಿದೆ: ಮಹೇಂದ್ರ ಪೂಜಾರಿ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ಬೈಂದೂರು ತಾಲೂಕು ಪಂಚಾಯಿತ್‌ನ ಪ್ರಸ್ತುತ ಅವಧಿಯ ಕೊನೆಯ ಸಾಮಾನ್ಯ ಸಭೆ ಜರುಗಿತು.

Call us

Click Here

Click here

Click Here

Call us

Visit Now

Click here

ಬೈಂದೂರು ತಾ. ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ ಮಾತನಾಡಿ ಬೈಂದೂರು ತಾಪಂ ಅಧ್ಯಕ್ಷ ಸ್ಥಾನ ಅಲಂಕರಿಸುವ ಮುನ್ನಾ ಮಾದರಿ ತಾಲೂಕು ಪಂಚಾಯಿತಿಯಾಗಿ ರೂಪಿಸುವ ಗುರಿಯಿಟ್ಟುಕೊಂಡಿದ್ದು, ಅಧಿಕಾರ ಅವಧಿ ಮುಗಿಯುತ್ತಿದ್ದು, ಸಂಪೂರ್ಣ ಮಾದರಿ ತಾಪಂ ಆಗಿ ಮಾಡಲಾಗಿಲ್ಲ. ನಮ್ಮ ಮೇಲಿನ ಜನಪ್ರತಿನಿಧಿಗಳ ಸಹಕಾರ ಸಿಕ್ಕಿದ್ದರೆ ಪೂರ್ಣ ಪ್ರಮಾಣದಲ್ಲಿ ತಾಲೂಕು ಅಭಿವೃದ್ಧಿ ಸಾಧ್ಯವಾಗುತ್ತಿತ್ತು. ಆದರೂ ಒಂದಿಷ್ಟು ಕೆಲಸ ಮಾಡಿದ ಆತ್ಮತೃಪ್ತಿ ಇದೆ. ತಾಪಂ ಸದಸ್ಯರು ಪಕ್ಷಭೇದವಿಲ್ಲದೆ ಅಭಿವೃದ್ಧಿ ವಿಷಯದಲ್ಲಿ ನೀಡಿದ ಸಹಕಾರ ಅಧಿಕಾರಿಗಳ ಬದ್ದತೆ ಅಷ್ಟೂಇಷ್ಟೂ ಕೆಲಸ ಮಾಡಿದ ತೃಪ್ತಿ ತಂದಿದೆ. ಸಹಕರಿಸಿದ ಅಧಿಕಾರಿ ವರ್ಗ ಹಾಗೂ ತಾಪಂ ಸದಸ್ಯರಿಗೆ ಆಭಾರಿಯಾಗಿದ್ದೇನೆ ಎಂದರು.

ತಾಪಂ ಸದಸ್ಯ ಪ್ರಮೀಳಾ ದೇವಾಡಿಗ ಮಾತನಾಡಿ ಪಡುವರಿ ಅಂಗನಾಡಿ ಖಾಸಗಿ ಜಾಗದಲ್ಲಿದ್ದು, ಸರ್ಕಾರಿ ಜಾಗ ಗುರುತಿಸಿ ಕೊಡುವಂತೆ ಸಭೆಯಲ್ಲಿ ಒತ್ತಾಯಿಸುತ್ತಾ ಬಂದಿದ್ದರೂ ಆಗಲಿಲ್ಲ. ಅಂಗನವಾಡಿಗೆ 10ಸೆನ್ಸ್ ಸರ್ಕಾರಿ ಭೂಮಿ ಇಲ್ಲವಾ ಎಂದು ಪ್ರಶ್ನಿಸಿದರು. ಇದಕ್ಕೆ ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ ಪ್ರತಿಕ್ರಿಯಿಸಿ, ಅಂಗನವಾಡಿ ಇದ್ದ ಖಾಸಗಿ ಜಾಗದ ಬಳಿಯೇ ಸರ್ಕಾರಿ ಭೂಮಿಯಿದ್ದರೂ ನಿಯಮ ಉಲ್ಲಂಘಿಸಿ ಸರ್ಕಾರಿ ನೌಕರನಿಗೆ 94ಸಿಯಲ್ಲಿ ಮಂಜೂರು ಮಾಡಿದ್ದೀರಿ. ಅಂಗನವಾಡಿಗೆ ಬೇರೆ ಜಾಗ ಸಿಗದಿದ್ದರೆ ಸರ್ಕಾರಿ ನೌಕರರನಿಗೆ ನೀಡಿದ ಜಾಗ ರದ್ದುಮಾಡಿ ಅಂಗನವಾಡಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ಐದು ವರ್ಷದಿಂದ ಗೋ ಶಾಲೆ ನಿರ್ಮಾಣಕ್ಕೆ ಗೋಮಾಳಗಳ ಗುರುತಿಸಿ ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದು, ಕೊನೆ ಸಭೆವರೆಗೂ ಜಾಗ ಗುರುತಿಸಿ ಕೊಟ್ಟಿಲ್ಲ. ಜಾಗ ಕೊಟ್ಟರೆ ನಾವೇ ಮುಂದೆ ನಿಂತು ಗೋ ಶಾಲೆ ಮಾಡಿ ಗೋವುಗಳ ಸಾಕುತ್ತೇವೆ. ಜಾನುವಾರುಗಳು ರಸ್ತೆಬದಿ, ಗದ್ದೆಬಯಲಲ್ಲಿ ದಿನ ಕಳೆಯುತ್ತಿದ್ದು, ಕೃಷಿ ಕೂಡಾ ಹಾಳುಮಾಡುತ್ತವೆ. ಗೋಶಾಲೆಗೆ ಜಾಗ ನೀಡುವಂತೆ ವಿರೋಧ ಪಕ್ಷದ ಜಗದೀಶ್ ದೇವಾಡಿಗ ಒತ್ತಾಯಿಸಿದ್ದು, ಆಡಳಿತ ಪಕ್ಷದ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಪುಷ್ಪರಾಜ್, ಶ್ಯಾಮಲಾ ಕುಂದರ್, ಪ್ರಮೀಳಾ ದೇವಾಡಿಗ ಬೆಂಬಲಿಸಿದರು.

Call us

ತಹಸೀಲ್ದಾರ್ ಕಿರಣ್ ಜಿ .ಗೌರಯ್ಯ ಮಾತನಾಡಿ ಬೈಂದೂರು ವ್ಯಾಪ್ತಿಯಲ್ಲಿ 94ಸಿಯಲ್ಲಿ 423 ಅರ್ಜಿ ಮಂದಿದ್ದು, ಅದರಲ್ಲಿ 52ಅರ್ಜಿ ಮಾತ್ರ ವಿಲೇವರಿ ಮಾಡಲು ಸಾಧ್ಯವಿದೆ. ಉಳಿದ ಫಲಾನುಭವಿಗಳ ಅರ್ಜಿ ಹಾಕಿರುವ ಜಾಗ ಡೀಮ್ಡ್, ಗೋಮಾಳ, ಪರಂಬೂಕವಾಗಿದ್ದು ವಿಲೇವಾರಿ ಮಾಡಲು ಅಡ್ಡಿಯಾಗುತ್ತಿದೆ. ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿದ್ದು, ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ಬಿಟ್ಟುಕೊಟ್ಟರೆ ಮಾತ್ರ ಅರ್ಜಿದಾರರಿಗೆ ಜಾಗ ನೀಡಲು ಸಾಧ್ಯ. ಮಾಜಿ ಸೈನಿಕರು ಸರ್ಕಾರಿ ಜಾಗ ಗುರುತಿಸಿದರೆ ನೀಡಲು ಅಡ್ಡಿಯಿಲ್ಲ. ಗೋ ಶಾಲೆಗೆ ಸರ್ಕಾರಿ ಜಾಗ ಗುರುತಿಸಿ ನೀಡಲಾಗುತ್ತದೆ.

ಪಡಿತರ ವಿತರಣೆ ಕೇಂದ್ರದಲ್ಲಿ ಪಡೆದ ಅಕ್ಕಿ ಮನೆಗೂ ಹೋಗದೆ ಮಾರಲಾಗುತ್ತಿದೆ. ಪಡಿತರ ವಿತರಣೆ ಕೇಂದ್ರ ಮುಂದೆ ಮಾರುತಿ ಓಮ್ನಿ ಕಾರ್‌ನಲ್ಲಿ ಅಕ್ಕಿ ವಿಕ್ರಯಿಸುವವರು ಕಾದು ನಿಲ್ಲುತ್ತಾರೆ. ಅಕ್ಕಿ ಸಮೇತ ವಾಹನ ಹಿಡಿದುಕೊಟ್ಟರೂ ಅಕ್ಕಿ ವಿಕ್ರಯಿಸಿದ ವ್ಯಕ್ತಿ ಚೀಲ ಬದಲಾಯಿಸುವುದರಿಂದ ಪಡಿತರ ಅಕ್ಕಿ ಎಂದು ಗುರುತಿಸಲು ಚೀಲ ಬಲಾಗದ್ದರಿಂದ ಆಗದೆ ಪಡಿತರ ಅಕ್ಕಿ ಎನ್ನುವುದು ರುಜುವಾತಾಗಿಲ್ಲ ಎಂದು ಅಧಿಕಾರಿಗಳು ಷರಾ ಬರೆಯುವ ಮೂಲಕ ಕೇಸ್ ಮುಚ್ಚಿಹೋಗುತ್ತದೆ ಪಡಿತರ ವಿತರಣೆಯಲ್ಲಿ ಕೊಚ್ಚಿಗೆ ಅಕ್ಕಿ ನೀಡುವುದರಿಂದ ಮಾರಾಟ ಮಾಡಲು ಆಗುತ್ತಿಲ್ಲ. ಕೊಚ್ಚಿಗೆ ಅಕ್ಕಿಗೆ ಕಡಿಮೆ ಮತ್ತು ಬೆಳ್ತಿಗೆ ಅಕ್ಕಿಗೆ ಹೆಚ್ಚು ಬೆಲೆಯಲ್ಲಿ ವಿಕ್ರಯಿಸುವುದರಿಂದ ಪಡಿತರ ಕೇಂದ್ರಕ್ಕೆ ಕುಚ್ಚಲಕ್ಕಿ ವಿತರಣೆ ಮಾಡಬೇಕು. ಸಾಧ್ಯವಾದರೆ ಊರು ಕುಚ್ಚಕ್ಕೆ ನೀಡುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಒತ್ತಾಯಿಸಿದರು. ವಿರೋಧ ಪಕ್ಷದ ಜಗದೀಶ್ ದೇವಾಡಿಗ ಕೊಚ್ಚಲಕ್ಕಿ ನೀಡುವಂತೆ ಒತ್ತಾಯಿಸಿದ್ದು, ಆಡಳಿತ ಪಕ್ಷದ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ ಬೆಂಬಲಿಸಿದರು.

ನಾಡಾ ಗ್ರಾಮದಲ್ಲಿ ಸ್ವಜಲಧಾರೆ, ಬಹುಗ್ರಾಮ ಕುಡಿಯುವ ನೀರು ಯೋಜನೆ ಇದ್ದು, ಇದರಿಂದ ನಾಡಾ ವ್ಯಾಪ್ತಿಯಲ್ಲಿ ಸರ್ಕಾರಿ ಬಾವಿಯಲ್ಲಿ ನೀರಿದ್ದರೂ ಉಪಯೋಗಕ್ಕೆ ಬಾರದೆ ವೇಸ್ಟ್ ಆಗುತ್ತಿದೆ. ನಾಡಾ ಗ್ರಾಪಂ ಬಾವಿಗಳ ಲೀಸ್ ಆಧಾರಲ್ಲಿ ಕೃಷಿ ಹಾಗೂ ಖಾಸಗಿ ಕೈಗಾರಿಕೆಗಳಿಗೆ ನೀಡಿದರೆ ಗ್ರಾಪಂಗೆ ವರಮಾನ ಬರುವುದಲ್ಲದೆ ನೀರಿನ ಸದ್ಬಳಕೆ ಆಗುತ್ತದೆ ಎಂದು ಪ್ರವೀಣ್ ಕುಮಾರ್ ಕಡ್ಕೆ ಸಲಹೆಗೆ ಉತ್ತರಿಸಿದ ಸಣ್ಣ ನಿರಾವರಿ ಇಲಾಖೆ ಅಧಿಕಾರಿ ಗ್ರಾಪಂ ನಿರ್ಣಯ ಮಾಡಿ ಜಿಪಂಗೆ ನೀಡಿ, ಒಪ್ಪಿಗೆ ಪಡೆಯುವ ಮೂಲಕ ನೀರು ಬಳಸಿಕೊಳ್ಳಬಹುದು ಎಂದರು.

ಶಿಕ್ಷಕರ ಹಾಜರಾತಿ, ಮೆಸ್ಕಾಂ, ಕಾರ್ಮಿಕ ಇಲಾಖೆ, ಆರೋಗ್ಯ, ಕಂದಾಯ, ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಾಲಿನಿ ಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬೈಂದೂರು ಪ್ರಭಾರ ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ, ಇಒ ಭಾರತಿ ಇದ್ದರು.

 

Leave a Reply

Your email address will not be published. Required fields are marked *

three + four =