ಬೈಂದೂರು ಪ.ಪಂ. ಕ್ಷೇತ್ರ ವಿಂಗಡಣೆ: ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸೂಚನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಪಟ್ಟಣ ಪಂಚಾಯತ್ ರಚನೆಗೆ ಸಂಬಂಧಿಸಿದಂತೆ, 2011ರ ಜನಗಣತಿಯ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡುವ ಕುರಿತು, ಉಡುಪಿ ಜಿಲ್ಲಾಧಿಕಾರಿಗಳು, ಬೈಂದೂರು ಪಟ್ಟಣ ಪಂಚಾಯತ್ನ ಎಲ್ಲಾ 20 ವಾರ್ಡುಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಮಾಡುವ ಪೂರ್ವದಲ್ಲಿ ಸಾರ್ವಜನಿಕರು ಸಲ್ಲಿಸಲ್ಪಡುವ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ವಾರ್ಡ್ಗಳ ಕ್ಷೇತ್ರ ವಿಂಡಣೆಯನ್ನು ಅಂತಿಮ ಗೊಳಿಸಬೇಕಾಗಿರುವುದರಿಂದ ಎಲ್ಲಾ ವಾರ್ಡ್ಗಳ ವ್ಯಾಪ್ತಿಯ ಪ್ರದೇಶವನ್ನು ಗಡಿ ಗುರುತುಗಳ ಸಮೇತ ಅಧಿಸೂಚನೆ ಹೊರಡಿಸಿರುತ್ತಾರೆ.

Call us

Call us

ಪ್ರತಿಯೊಂದು ವಾರ್ಡಿನ ಕ್ಷೇತ್ರದ ಗಡಿ ಗುರುತು, ಮನೆ ನಂಬ್ರ ಇತ್ಯಾದಿ ವಿವರಗಳು ಬೈಂದೂರು ಪಟ್ಟಣ ಪಂಚಾಯತ್ ಹಾಗೂ ತಾಲೂಕು ಕಛೇರಿಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮಗೆ ಬೇಕಾದ ಮಾಹಿತಿಗಳನ್ನು ಪಡೆಯಬಹುದಾಗಿದೆ.

Call us

Call us

ಕ್ಷೇತ್ರ ವಿಂಗಡಣೆ ಕುರಿತು ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅಥವಾ ಸಲಹೆ ಸೂಚನೆಗಳು ಇದ್ದಲ್ಲಿ ಡಿಸೆಂಬರ್ 22ರ ಒಳಗೆ, ಸೂಕ್ತ ದಾಖಲೆ ಹಾಗೂ ಸಂಪೂರ್ಣ ವಿಳಾಸದೊಂದಿಗೆ ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ, ಬೈಂದೂರು ತಾಲೂಕು ಕಛೇರಿಗೆ ಹಾಗೂ ಪಟ್ಟಣ ಪಂಚಾಯತ್ ಕಛೇರಿಗೆ ಸಲ್ಲಿಸಬಹುದಾಗಿದೆ ಎಂದು ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

thirteen − eleven =