ಕೊಡೇರಿಯಲ್ಲಿ ಫೆ.10ರಂದು ನಾಡದೋಣಿ ಮೀನುಗಾರರ ಬೃಹತ್ ಸಮಾವೇಶಕ್ಕೆ ಸಿದ್ಧತೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ವಲಯ ನಾಡದೋಣಿ ಮೀನುಗಾರರ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೃಹತ್ ಸಮಾವೇಶ ಫೆ. 10 ರಂದು ಬೆಳಗ್ಗೆ 10 ಗಂಟೆಗೆ ಉಪ್ಪುಂದ ಕೊಡೇರಿ ಬಂದರು ಬಳಿ ನಡೆಯಲಿದೆ ಎಂದು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಶೋಮಶೇಖರ ಕೆ. ಎಂ ತಿಳಿಸಿದ್ದಾರೆ.

Call us

Call us

ಉಪ್ಪುಂದದ ನಾಡದೋಣಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಸಂಸದ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಸೋಮಶೇಖರ ಕೆ.ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಪರಿಹಾರ ನಿಧಿ ಯೋಜನೆಯನ್ನು, ಮೀನುಗಾರಿಕಾ ಸಚಿವ ಪ್ರಮೋದ ಮಧ್ವರಾಜ್ ಮೀನುಗಾರಿಕಾ ಮಾಹಿತಿ ಕೇಂದ್ರವನ್ನು, ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ. ಖಾದರ ಸಂಘದ ಸದಸ್ಯರ ವೈಬ್‌ಸೈಟ್‌ನ್ನು ಅನಾವರಣಗೊಳಿಸಲಿದ್ದು, ಶಾಸಕ ಕೆ. ಗೋಪಾಲ ಪೂಜಾರಿ ಜೀವರಕ್ಷಕ ಪ್ರಶಸ್ತಿ ವಿತರಿಸಲಿದ್ದಾರೆ.

Call us

Call us

ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ಕುಮಾರ ಶೆಟ್ಟಿ, ಆಸ್ಕರ ಫೆರ್ನಾಂಡಿಸ್, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ಜಯಶ್ರೀ ಮೊಗವೀರ, ದ.ಕ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ ಸುವರ್ಣ, ಉಪ್ಪುಂದ ಗ್ರಾ.ಪಂ. ಅಧ್ಯಕ್ಷೆ ದುರ್ಗಮ್ಮ, ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಖಾರ್ವಿ, ಶಿರೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಭಾಸ್ಕರ ಖಾರ್ವಿ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಶಿರೂರು ಅಲ್ಪಸಂಖ್ಯಾತರ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಅಬ್ದುಲ್ ಅಜೀದ್, ಉಡುಪಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಚಂದ್ರಕಾಂತ ಕರ್ಕೇರ, ದ.ಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಶರತ್ ಗುಡ್ಡೆಕೊಪ್ಪ, ಉತ್ತರ ಕನ್ನಡ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸದಾನಂದ ಜಟ್ಟಿ ಹರಿಕಂತ್ರ, ವಲಯ ನಾಡದೋಣಿ ಮೀನುಗಾರರ ಸಂಘದ ಸ್ಥಾಕಪಾಧ್ಯಕ್ಷರಾದ ಮದನ ಕುಮಾರ, ಎ.ಪ್ರಭಾಕರ ಖಾರ್ವಿ, ಕೆ. ಮುತ್ತಯ್ಯ ಖಾರ್ವಿ, ರವೀಂದ್ರ ಖಾರ್ವಿ, ಬಿ.ಅಣ್ಣಪ್ಪ ಖಾರ್ವಿ, ನವೀನಚಂದ್ರ ಉಪ್ಪುಂದ, ಬಿ. ರತ್ನಾಕರ ಖಾರ್ವಿ, ಡಿ. ರಾಮಚಂದ್ರ ಖಾರ್ವಿ, ಬಿ. ಕುಮಾರ ಖಾರ್ವಿ ಉಪಸ್ಥಿತರಿರುವರು ಎಂದರು.

ಸೀಮೆ ಎಣ್ಣೆ ವಿತರಣೆ, ಮೀನುಗಾರಿಕಾ ಸಲಕರಣೆಗಳಿಗೂ ಸಹಾಯಧನ ನೀಡುವುದು, ಸಾಂಪ್ರದಾಯಿಕ ಮೀನುಗಾರಿಕೆಯನ್ನು ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ತಂದು ಸಹಾಯಧನ ನೀಡಿ ಮೀನುಗಾರಿಕೆಗೆ ಉತ್ತೇಜನ ನೀಡುವುದು, ಮೀನುಗಾರಿಕೆಗೂ ಬಡ್ಡಿರಹಿತ ಸಾಲ ಮೊದಲಾದವುಗಳ ಬಗ್ಗೆ ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಆ ದಿನ ನಾಡದೋಣೆ ಮೀನುಗಾರಿಕೆಗೆ ರಜೆ ನೀಡಲಾಗಿದ್ದು, ಕೊಡೇರಿ ಬಂದರು ಬಳಿ ಎಲ್ಲಾ ದೋಣಿಗಳು ಲಂಗಾರು ಹಾಕಲಿದ್ದು ಮೂರು ಜಿಲ್ಲೆಯ ಮೀನುಗಾರ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂಘದ ಗೌರವಾಧ್ಯಕ್ಷರಾದ ಮದನಕುಮಾರ, ನವೀನಚಂದ್ರ ಉಪ್ಪುಂದ, ಉಪಾಧ್ಯಕ್ಷ ಕೇಶವ ಖಾರ್ವಿ, ಕಾರ್ಯದರ್ಶಿ ನರೇಶ ಕೊಡೇರಿ ಹಾಜರಿದ್ದರು.

ಕೇಂದ್ರ ಸರ್ಕಾರ ಸೀಮೆಎಣ್ಣೆ ಮುಕ್ತ ಮಾಡಿದರೆ ಸಾಂಪ್ರದಾಯಿಕ ಮೀನುಗಾರರಿಗೆ ಸಮಸ್ಯೆಯಾಗುತ್ತದೆ. ಅವರು ಉದ್ಯೋಗ ಕಳೆದುಕೊಂಡು ಬೀದಿಗೆ ಬರುವ ಆತಂಕ ಎದುರಾಗುತ್ತದೆ. ಇದರಿಂದ ಮೀನುಗಾರರಿಗೆ ವಿನಾಯಿತಿ ನೀಡಬೇಕಾಗಿದೆ. ಕೃಷಿಕರಿಗೆ ನೀಡುವಂತೆ ಮೀನುಗಾರರಿಗೂ ಬಡ್ಡಿರಹಿತ ಸಾಲ ಹಾಗೂ ಬಂದರು ಅಭಿವೃದ್ದಿಗೆ ಒತ್ತುಕೊಡಲು, ಸಿಆರ್‌ಝೆಡ್ ಸಮಸ್ಯೆ ಸೇರಿದಂತೆ ಮೀನುಗಾರರ ವಿವಿಧ ಸಮಸ್ಯೆಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದು. – ನವೀನಚಂದ್ರ ಉಪ್ಪುಂದ, ಗೌರವಾಧ್ಯಕ್ಷರು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ.

Leave a Reply

Your email address will not be published. Required fields are marked *

one × 2 =