ಕಂಬಳದಲ್ಲಿ 9.15 ಸೆಂಕೆಂಡಿಗೆ 100 ಮೀಟರ್ ಕ್ರಮಿಸಿ ದಾಖಲೆ ಬರೆದ ವಿಶ್ವನಾಥ ದೇವಾಡಿಗ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿ ಜನಪದ ಕ್ರೀಡೆ ಕಂಬಳದಲ್ಲಿ ಕೋಣಗಳನ್ನು ಕೇವಲ 9.15 ಸೆಂಕೆಡುಗಳಲ್ಲಿ 100 ಮೀಟರ್ ಓಡಿಸಿರುವ ಬೈಂದೂರು ತಾಲೂಕಿನ ನಾಯ್ಕನಕಟ್ಟೆಯ ಯುವಕ ದಾಖಲೆ ನಿರ್ಮಿಸಿದ್ದಾರೆ. ಐಕಳ ಕಾಂತಾಂಬಾರೆ-ಬೂದಾಬಾರೆಯಲ್ಲಿ ನಡೆದ ಕಂಬಳದಲ್ಲಿ ವಿಶ್ವನಾಥ ದೇವಾಡಿಗ ಈ ದಾಖಲೆ ಮಾಡಿದ್ದಾರೆ.

Click Here

Call us

Call us

ಈ ಹಿಂದೆ ಸುರೇಶ್ ಶೆಟ್ಟಿ 100 ಮೀಟರ್ ದೂರವನ್ನು 9.37 ಸೆಕೆಂಡ್, ಶ್ರೀನಿವಾಸ ಗೌಡ 9.55 ಸೆಕೆಂಡ್, ಆನಂದ 9.57 ಸೆಂಕೆಡುಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದರು. ಶನಿವಾರ ನಡೆದ ಕಂಬಳದಲ್ಲಿ ಈ ಹೊಸ ದಾಖಲೆ ನಿರ್ಮಾಣವಾಗಿದೆ. ಕಂಬಳದ ಚಾನ್ಸ್ ಓಟದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ಅವರ ಬೊಳ್ಳ ಮತ್ತು ದೋನಿ ಕೋಣಗಳನ್ನು ವಿಶ್ವನಾಥ್ ಅವರು ಓಡಿಸಿದ್ದು 125 ಮೀ. ದೂರವನ್ನು 11.44 ಸೆಕೆಂಡುಗಳಲ್ಲಿ ಓಡಿದ್ದಾರೆ. ಈ ಸಮಯವನ್ನು 100 ಮೀ.ಗೆ ಹೋಲಿಕೆ ಮಾಡಿದರೆ 9.15 ಸೆಕೆಂಡ್ ಆಗಲಿದೆ. ಈ ಸುತ್ತು ಆಟೋ ಸ್ಟಾರ್ಟ್ ಮತ್ತು ಸೆನ್ಸಾರ್ ಮೂಲಕವೇ ನಿರ್ಧರಿಸಲಾಗಿದ್ದು, ಇದರಿಂದ ಹೊಸ ದಾಖಲೆದೆ ಸೇರ್ಪಡೆಯಾಗಿದೆ.

Click here

Click Here

Call us

Visit Now

 

Leave a Reply

Your email address will not be published. Required fields are marked *

eleven − 10 =