ಬೈಂದೂರು ಯುವ ಕಾಂಗ್ರೆಸ್: ಹುತಾತ್ಮ ಯೋಧರಿಗೆ ದೀಪನಮನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗಡಿಭಾಗದಲ್ಲಿ ಚೀನಾದ ಕುಕೃತ್ಯದಿಂದಾಗಿ ಹುತಾತ್ಮರಾದ ಭಾರತದ ವೀರ ಯೋಧರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಪುಷ್ಪಾರ್ಚನೆಗೈದು, ದೀಪನಮನದೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬೈಂದೂರು ಬೈಪಾಸ್ ಬಳಿಕ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್. ಮದನ್ ಕುಮಾರ್, ಕೆಪಿಸಿಸಿ ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ, ಬ್ಲಾಕ್ ಕಾರ್ಯದರ್ಶಿ ನಾಗರಾಜ ಗಾಣಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಅಲ್ಪಸ್ಂಖ್ಯಾತರ ಘಟಕ ಅಧ್ಯಕ್ಷ ತಬ್ರೇಜ್ ನಾಗೂರು, ಮಂಜುನಾಥ ಪೂಜಾರಿ, ಗಣೇಶ ಪೂಜಾರಿ, ಉಮೇಶ ದೇವಾಡಿಗ, ಮಣಿಕಂಠ ದೇವಾಡಿಗ, ವಿಜಯ್ ನಾಗೂರು, ಸುಬ್ರಹ್ಮಣ್ಯ ಪೂಜಾರಿ ಉಪ್ಪುಂದ, ಪ್ರಕಾಶ್ ಪೂಜಾರಿ, ಲಕ್ಷಣ ಬೈಂದೂರು ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಇದನ್ನೂ ಓದಿ:
► ಉಡುಪಿ ಕೊರೋನಾ ಅಪ್‌ಡೇಟ್: ಒಟ್ಟು 946 ಮಂದಿ ಡಿಸ್ಚಾರ್ಜ್. ಇಂದು ಪಾಸಿಟಿವ್ ಇಲ್ಲ – https://kundapraa.com/?p=38761 .
► ಕುಂದಾಪುರ & ಬೈಂದೂರು: ಆತಂಕ ತೊರೆದು ಪರೀಕ್ಷೆ ಬರೆದ ದ್ವಿತೀಯ ಪಿಯು ವಿದ್ಯಾರ್ಥಿಗಳು – https://kundapraa.com/?p=38754 .

 

Leave a Reply

Your email address will not be published. Required fields are marked *

12 − 3 =