ಸಿಎ ರಾಮಚಂದ್ರ ಪ್ರಭು ಅವರಿಗೆ ಬೆಸ್ಟ್ ಚಾಪ್ಟರ್ ಓವರ್‌ಸೀಸ್ ಅವಾರ್ಡ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಸ್ಕತ್‌ನ ಚಾಪ್ಟರ್ ಆಫ್ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಪಾಧ್ಯಕ್ಷ, ನಾಯ್ಕನಕಟ್ಟೆಯ ಸಿಎ ರಾಮಚಂದ್ರ ಪ್ರಭು ಅವರು ಬೆಸ್ಟ್ ಚಾಪ್ಟರ್ ಓವರ್‌ಸೀಸ್  ಕೆಟಗರಿ -2 ಅವಾರ್ಡ್ ದೊರೆತಿದೆ.

Call us

ದೇಹಲಿಯ ಅಶೋಕ ಹೋಟೆಲ್‌ನಲ್ಲಿ ಶುಕ್ರವಾರ ಜರುಗಿದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ 70ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಹಣಕಾಸು ಮತ್ತು ಕಾರ್ಪರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು.

Call us

ನಾಯ್ಕನಕಟ್ಟೆಯ ಪ್ರಭುಕೇರಿಯವರಾದ ರಾಮಚಂದ್ರ ಪ್ರಭು ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಾಯ್ಕನಕಟ್ಟೆಯಲ್ಲಿಯೂ, ಪಿಯು ಶಿಕ್ಷಣವನ್ನು ಉಪ್ಪುಂದ ಹಾಗೂ ಪದವಿ ಶಿಕ್ಷಣವನ್ನು ಬೈಂದೂರು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪೂರೈಸಿದ್ದಾರೆ.

Leave a Reply

Your email address will not be published. Required fields are marked *

four × 1 =