ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಲ್ಟೋ ಕಾರು ಹಾಗೂ ಇನ್ಸುಲೇಟರ್ ವಾಹನದ ನಡುವಿನ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮಗ ದಾರುಣವಾಗಿ ಮೃತಪಟ್ಟದ ಘಟನೆ ಕೋಟ ಮೂರುಕೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬಾರಕೂರು ಬೆಣ್ಣೆಕುದ್ರು ನಿವಾಸಿಗಳಾದ ಗಿರಿಜಾ (52) ಹಾಗೂ ಅವರ ಮಗ ಅವಿನಾಶ್ (27) ಮೃತ ದುರ್ದೈವಿಗಳು. ಘಟನೆಯನ್ನು ಕಾರಿನಲ್ಲಿದ್ದ ಮತ್ತಿರ್ವರು ಗಂಭೀರ ಗಾಯಗೊಂಡಿದ್ದಾರೆ.
ಆರತಕ್ಷತೆ ಕಾರ್ಯಕ್ರಮಕ್ಕಾಗಿ ಮನೆಯಿಂದ ಕೋಟದ ಕಾಸನಗುಂದುವಿಗೆ ತೆರಳುತ್ತಿದ್ದ ವೇಳೆ ಕೋಟ ಮೂರುಕೈ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪದ ಕಾರು ವಿಭಾಜಕವೇರಿ ಎದುರಿನಿಂದ ಬರುತ್ತಿದ್ದ ಕಂಟೇನರ್‌ಗೆ ಡಿಕ್ಕಿಯಾಗಿತ್ತು. ಕಾರು ಚಲಾಯಿಸುತ್ತಿದ್ದ ಅವಿನಾಶ್ ಹಾಗೂ ಅವರ ಪಕ್ಕದಲ್ಲಿ ಕುಳಿತಿದ್ದ ಅವರ ತಾಯಿ ಸ್ಥಳದಲ್ಲಿಯೇ ಮೃತಪಟ್ಟರೇ, ಹಿಂಬಂದಿ ಸೀಟಿನಲ್ಲಿ ಕುಳಿತ ಇಬ್ಬರ ಪೈಕಿ ಓರ್ವರ ಸ್ಥತಿ ಚಿಂತಾಜನಕವಾಗಿದ್ದು, ಇನ್ನೊರ್ವರು ಗಂಭೀರ ಗಾಯಗೊಂಡಿದ್ದಾರೆ. ಮೃತ ಅವಿನಾಶ್ ವಿದೇಶದಲ್ಲಿ ಕಾರ್ ಮೆಕ್ಯಾನಿಕ್ ಆಗಿದ್ದರು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.