ಕುಂದಾಪುರ: ಸಿಎ ತರಬೇತಿ ಮುಂಚೂಣಿಯಲ್ಲಿ ಕೆರಿಯರ್ಸ್ ಕೋಚಿಂಗ್ ಸಂಸ್ಥೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ನಗರದ ಮುಖ್ಯರಸ್ತೆಯಲ್ಲಿರುವ ಸಾಯಿ ಸೆಂಟರ್‌ನ ಮೂರನೇ ಮಹಡಿಯಲ್ಲಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೆರಿಯರ‍್ಸ್ ಕೋಚಿಂಗ್ ಸಂಸ್ಥೆ ಸಿಎ ಕೋರ್ಸ್ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಸಿಎ-ಸಿಪಿಟಿ, ಸಿಎ-ಐಪಿಸಿಸಿ ಹಾಗೂ ಸಿಎ-ಐಪಿಸಿಸಿ ಅಂತಿಮ ವರ್ಷದ ಕೋರ್ಸುಗಳ ತರಬೇತಿಗೆ ಅತ್ಯಾಧುನಿಕ ಮಾದರಿಯನ್ನು ಸಂಸ್ಥೆ ಅಳವಡಿಸಿಕೊಂಡಿದ್ದು, ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರರಾದ ಚಾರ್ಟೆಡ್ ಅಕೌಂಟೆಂಟ್ ರಾಜೇಶ್ ಶೆಟ್ಟಿ ಮತ್ತು ಪ್ರತಾಪ್‌ಚಂದ್ರ ಶೆಟ್ಟಿ ತಲ್ಲೂರು ಅವರು ತಿಳಿಸಿದ್ದಾರೆ.

Call us

Call us

ಸಿಎ-ಸಿಪಿಟಿ ಕೋರ್ಸ್‌ನ ತರಬೇತಿ ಕ್ಲಾಸುಗಳು ಮೇ 25ರಂದು ಬೆಳಿಗ್ಗೆ ಆರಂಭಗೊಳ್ಳಲಿದ್ದು, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತದೆ. ವೆಕೇಶನಲ್ ಕೋರ್ಸ್‌ಗಳು ಅಕ್ಟೋಬರ್, ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯುತ್ತವೆ. ಐಪಿಸಿಸಿ ಕೋರ್ಸ್‌ಗೆ ತರಬೇತಿ ಜೂನ್ ೧೫ರಿಂದ ಆರಂಭಗೊಳ್ಳುವುದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ರೆಗ್ಯುಲರ್ ತರಬೇತಿ ಕ್ಲಾಸುಗಳು ಶೀಘ್ರದಲ್ಲಿಯೇ ಆರಂಭಗೊಳ್ಳಲಿವೆ.

ಕೋಚಿಂಗ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮತ್ತು ನುರಿತ ಶಿಕ್ಷಕರಿಂದ ಸರಳ ಭಾಷೆಯಲ್ಲಿ ಆಕರ್ಷಕ ಬೋಧನೆ ಸಂಸ್ಥೆಯ ವೈಶಿಷ್ಟ್ಯವಾಗಿದೆ. ವೆಕೇಶನಲ್ ಬ್ಯಾಚಿನ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗುತ್ತದೆ. ಗ್ರಂಥಾಲಯ ಸೌಲಭ್ಯ ಇದೆ. ಪಟ್ಟಣಗಳಿಗೆ ಹೋಲಿಸಿದರೆ ಕೆರಿಯರ‍್ಸ್ ಕೋಚಿಂಗ್ ಸಂಸ್ಥೆಯಲ್ಲಿ ಸಿಪಿಟಿ ಮತ್ತು ಐಪಿಸಿಸಿ ಕೋರ್ಸುಗಳ ತರಬೇತಿ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿರುವುದು ಆರ್ಥಿಕವಾಗಿ ಹಿಂದುಳಿದ, ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

Call us

Call us

ಕೆರಿಯರ‍್ಸ್ ಕೋಚಿಂಗ್ ಸಂಸ್ಥೆಯಲ್ಲಿ ಐಪಿಸಿಸಿ ತರಬೇತಿ ಪಡೆದ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ದಾಖಲಿಸಿದ್ದು, ವಿದ್ಯಾರ್ಥಿಗಳ ಪಾಲಕರಲ್ಲಿ ತೃಪ್ತಿ ತಂದಿದೆ. ತರಬೇತಿ ಶಿಕ್ಷಣದೊಂದಿಗೆ ಉಚಿತವಾಗಿ ಯೋಗ, ಧ್ಯಾನ, ನೈತಿಕ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗಿದ್ದು, ವಿದ್ಯಾರ್ಥಿಗಳ ಪರಿಪೂರ್ಣ ಕಲಿಕೆಗೆ ಸಂಸ್ಥೆ ತನ್ನದೇ ಆದ ಕೊಡುಗೆ ನೀಡಿದೆ. ಗುಣಮಟ್ಟದ ಶಿಕ್ಷಣದಂತೆಯೇ ಉತ್ತಮ ಗುಣಮಟ್ಟದ ಕೋಚಿಂಗ್ ಕೂಡಾ ವಿದ್ಯಾಕಾಂಕ್ಷಿಗಳಿಗೆ ಯಶಸ್ಸಿನ ಮೆಟ್ಟಿಲಾಗಬಹುದು ಎಂಬುದಕ್ಕೆ ಸಂಸ್ಥೆ ಮಾದರಿಯಾಗಿದೆ. ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬೇಕಾದ ವಿಳಾಸ: ಕೆರಿಯರ‍್ಸ್ ಕೋಚಿಂಗ್, 3ನೇ ಮಹಡಿ, ಸಾಯಿ ಕಾಂಪ್ಲೆಕ್ಸ್, ಮುಖ್ಯರಸ್ತೆ, ಕುಂದಾಪುರ.

  • ದೂರವಾಣಿ: 8105436303, 9845925983.

Leave a Reply

Your email address will not be published. Required fields are marked *

four × 4 =