ಬನ್ನಿ ಕುಂದಾಪುರದಲ್ಲಿ ನಿಮಗಾಗಿ ತೆರೆದುಕೊಳ್ಳುತ್ತಿದೆ ಕಾರ್ಟೂನು ಪ್ರಪಂಚ. ನೋಡಿ ಬರೋಣ ಕೊಂಚ

Call us

Call us

Call us

Call us

ಹಾಸ್ಯದ ಹೈವೇಲಿ ನಗೋಕೆ ನೂರಾರು ನೆಪಗಳು!

ಕುಂದಾಪ್ರ ಡಾಟ್ ಕಾಂ ವರದಿ.

Call us

Click Here

Click here

Click Here

Call us

Visit Now

Click here

ದೇಶಕ್ಕೆ ಹಲವು ವ್ಯಂಗ್ಯಚಿತ್ರಕಾರರನ್ನು ಕೊಟ್ಟ ಕುಂದಾಪುರ ಮತ್ತೆ ಕಾರ್ಟೂನಿಂದಲೇ ಸದ್ದು ಮಾಡಹೊರಟಿದೆ. ಮಣ್ಣಿನ ಗುಣವೂ, ಪ್ರತಿಭೆಗೆ ಸಾಣೆ ಹಿಡಿದ ಫಲವೂ ಕುಂದಾಪುರದ ವ್ಯಂಗ್ಯಚಿತ್ರಕಾರರು ಪ್ರಪಂಚವನ್ನೇ ಅಣಕಿಸಿ, ನಗಿಸಿ ಯಶಕಂಡಿದ್ದಾರೆ. ಕುಂದಾಪುರದಲ್ಲಿದ್ದುಕೊಂಡೇ ಕಾರ್ಟೂನ್ ಪ್ರಪಂಚಕ್ಕೆ ತೆರೆದುಕೊಳ್ಳುವುದರ ಜೊತೆಗೆ ಕಾರ್ಟೂನ್ ಲೋಕದ ಹೊಸ ಸಾಧ್ಯತೆಗಳನ್ನು ಅರಿತು, ಬೆರೆತು, ಕಾರ್ಟೂನಿಷ್ಟ್ ಹಾಗೂ ಕಾರ್ಟೂನ್ ಪ್ರೀಯರಿಗೆ ಮುಖಾಮುಖಿಯಾಗುತ್ತಾ, ನಿಮ್ಮಲ್ಲಿನ ಕಾರ್ಟೂನ್ ಪ್ರೀತಿಯನ್ನು ಗುರುತಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದ ಖ್ಯಾತ ಕಾರ್ಟೂನಿಷ್ಠ್ ಸತೀಶ್ ಆಚಾರ‍್ಯ ಅವರ ಮುಂದಾಳತ್ವದಲ್ಲಿಯೇ ಈ ಭಾರಿಯ ಕಾರ್ಟೂನು ಹಬ್ಬ ಕಳೆಗಟ್ಟುತ್ತಿದೆ.

ಡಿಸೆಂಬರ್ 10ರಿಂದ ಕುಂದಾಪುರದ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಟೂನ್ ಹಬ್ಬದಲ್ಲಿ ಕುಂದಾಪುರದ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರ ಪ್ರದರ್ಶನ, ಕಾರ್ಟೂನ್ ಕಾರ್ಯಾಗಾರ, ಪ್ರಸಿದ್ಧ ಕಾರ್ಟೂನಿಷ್ಠರೊಂದಿಗೆ ಸಂವಾದ, ಕ್ಯಾರಿಕೇಚರ್, ವಿದ್ಯಾರ್ಥಿನಿರಿಗೆ ಮಾಯಾ ಕಾಮತ್ ಸ್ವರ್ಧೆ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಲವಾರು ಸ್ವರ್ಧೆ, ವಿಶಿಷ್ಠ ಸೆಲ್ಫಿ ಕಾರ್ನರ್, ಕಾರ್ಟೂನ್ ಪುಸ್ತಕ ಹೀಗೆ ಎಲ್ಲವೂ ಸವಿಯುವ ಸುವರ್ಣಾವಕಾಶ ನಿಮ್ಮದಾಗಲಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಹೊಸ ತಲೆಮಾರಿನ ಕಾರ್ಟೂನಿಷ್ಟ್ ಗಳನ್ನು ಪ್ರೋತ್ಸಾಹಿಸುವ, ಕಾರ್ಟೂನ್ ಕುರಿತು ಆಸಕ್ತಿಯನ್ನು ಬೆಳೆಸುವ, ನಾಡಿನ ಹೆಸರಾಂತ ಕಾರ್ಟೂನಿಷ್ಠರೊಂದಿಗೆ ಸಂವಾದಿಸುವ ಸಲುವಾಗಿ ಹಮ್ಮಿಕೊಂಡ ಕಾರ್ಟೂನ್ ಹಬ್ಬ ಕುಂದಾಪುರದ ಮಟ್ಟಗೆ ಒಂದು ವಿಶಿಷ್ಟವಾದ ಪ್ರಯತ್ನವೆನಿಸಿಕೊಂಡಿದೆ

* ಏನೇನಿರುತ್ತೆ:
ಕಾರ್ಟೂನ್ ಪ್ರದರ್ಶನ – ಕುಂದಾಪುರ ಮೂಲದವರಾಗಿದ್ದು ದೇಶದ ಪ್ರಸಿದ್ಧ ಪತ್ರಿಕೆ ಹಾಗೂ ವೆಬ್-ಸೈಟ್ ಗಳಿಗೆ ಕಾರ್ಟುನ್ ಬರೆಯುತ್ತಿರುವವರ ಕಾರ್ಟೂನ್ ಪ್ರದರ್ಶನ
ಕಾರ್ಟೂನ್ ಕಾರ್ಯಾಗಾರ, ಮಾಸ್ಟರ್ ಸ್ಟ್ರೋಕ್ – ಖ್ಯಾತ ವ್ಯಂಗ್ಯಚಿತ್ರಕಾರರಿಂದ ಸ್ಥಳದಲ್ಲೇ ಒಂದೇ ವಿಷಯದಲ್ಲಿ ಕಾರ್ಟೂನ್ ರಚನೆ ಅದರ ಕುರಿತಂತೆ ಮಾತುಕತೆ ಇರಲಿದೆ.
ಸ್ಥಳದಲ್ಲೇ ಕ್ಯಾರಿಕೇಚರ್ – ಶಾಲೆಗೆ ನಿಧಿ ಸಂಗ್ರಹಿಸುವ ಸಲುವಾಗಿ ಖ್ಯಾತ ಕಾರ್ಟೂನಿಷ್ಠಗಳಿಂದ ಕ್ಯಾರಿಕೇಚರ್ ರಚಿಸಿಕೊಡಲಾಗುವುದು.
ವಿದ್ಯಾರ್ಥಿಗಳಿಗೆ ಕಾರ್ಟೂನ್ ಸ್ವರ್ಧೆ– ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯ್ದ ವಿಷಯಗಳಲ್ಲಿ ಕಾರ್ಟೂನ್ ರಚಿಸುವ ಸ್ವರ್ಧೆ.  (ಕುಂದಾಪ್ರ ಡಾಟ್ ಕಾಂ ವರದಿ)
ವಿದ್ಯಾರ್ಥಿನಿಯರಿಗೆ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ – ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ ಜರುಗಲಿದೆ.
ಡಾಕ್ಟರ್ ಜೊತೆ ಡೂಡ್ಲಿಂಗ್ – ಕುಂದಾಪುರ ಪರಿಸರದ ಕಾರ್ಟೂನ್ ಪ್ರಿಯ ವೈದ್ಯರುಗಳಿಗಾಗಿ ಕಾರ್ಟೂನ್ ಗೀಚುವ ವಿಶೇಷ ಅವಕಾಶ
ಕಾರ್ಟೂನ್ ಪುಸ್ತಕ – ಕಾರ್ಟೂನ್ ಪ್ರೀಯರಿಗಾಗಿ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಕಾರ್ಟೂನ್ ಪುಸ್ತಕ ಲಭ್ಯವಿರುತ್ತೆ
ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳು – ಕಾರ್ಟೂನ್ ಡೈಲಾಗ್ ಬರೆಯುವುದು, ಕ್ಯಾರಿಕೇಚರ್ ರಚಿಸುವುದು ಮುಂತಾದ ಸ್ವರ್ಧೆಗಳು ಹಾಗೂ ಆಕರ್ಷಕ ಬಹುಮಾನ
ಸೆಲ್ಫಿ ಕಾರ್ನರ್ – ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಲು ಇಲ್ಲವೇ ವೈಯಕ್ತಿಕ ಸಂಗ್ರಹಕ್ಕಾಗಿ ವಿಶಿಷ್ಟ ಸೆಲ್ಫಿ ಕಾರ್ನರ್.

Call us

Cartoon Habba 2016 at Kundapura - Cartoonist Satish Acharya and team (3) Cartoon Habba 2016 at Kundapura - Cartoonist Satish Acharya and team (2) Cartoon Habba 2016 at Kundapura - Cartoonist Satish Acharya and team (4)

Leave a Reply

Your email address will not be published. Required fields are marked *

four × 4 =