ಬೈಂದೂರು

ಕುಂದಾಪ್ರ ಡಾಟ್ ಕಾಂ | ಉಡುಪಿ ಜಿಲ್ಲೆಯ ಶಿರೋಭಾಗದಲ್ಲಿರುವ ಬೈಂದೂರು ತನ್ನದೇ ಆದ ಕಾರಣಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಥಾನ ಪಡೆದಿದೆ. ಶಿಕ್ಷಣ, ಕಲೆ, ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ನಾಡು, ಚೆಲುವಿನ ಬೀಡು. ಅದು ನಮ್ಮ ಬೈಂದೂರು. ತಪಸ್ಸನ್ನಾಚರಿಸಿದ ಕಾರಣದಿಂದಾಗಿ ಬಿಂದುಪುರ ಎಂಬ ಹೆಸರು ಬಂದಿತು. ಕ್ರಮೇಣ ಅದು ಬೈದೂರು ಆಗಿ ನಂತರ ಬೈಂದೂರು ಎಂದು ಕರೆಯಲ್ಪಟ್ಟಿತು ಎಂಬುದು ಐತಿಹ್ಯ. ನಿಮ್ಮ ಬೈಂದೂರಿನ ಸಮಗ್ರ ಸುದ್ದಿ ಮಾಹಿತಿಗಳನ್ನು ಕುಂದಾಪ್ರ ಡಾಟ್ ಕಾಂ ನಿಮಗೆ ಹೊತ್ತು ತರುತ್ತಿದೆ.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಸಾಮಾಗ್ರಿ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ವತಿಯಿಂದ ಶುಕ್ರವಾರ ವಿವಿಧ ಗ್ರಾಮಗಳ ಅಗತ್ಯವುಳ್ಳ ಸಾರ್ವಜನಿಕರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಬೈಂದೂರು ತಾಲೂಕಿನ ಎಲ್ಲೂರು, [...]

ಕುಂದಾಪುರ & ಬೈಂದೂರು ತಾಲೂಕು: ಅಗತ್ಯ ವಸ್ತು ಕೊಳ್ಳಲು ಸಮಯ ನಿಗದಿ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯ ತನಕ [...]

ಯಡ್ತರೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮುಂದೂಡಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ನವೀಕೃತ ಗರ್ಭಗುಡಿ ಸಮರ್ಪಣೆ ಹಾಗೂ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕಾರ್ಯಕ್ರಮವು ಎಪ್ರಿಲ್ 05ರಿಂದ [...]

ಕೋವಿಡ್-19: ಕುಂದಾಪುರ ರ‍್ಯಾಪಿಡ್ ಆ್ಯಕ್ಷನ್ ತಂಡದ ಸಭೆ, ಅನಗತ್ಯ ಸಂಚರಿಸುವವರಿಗೆ ಪೊಲೀಸ್ ತಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಕೋವಿಡ್-19 (ಕೊರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಎಸಿ ರಾಜು ಕೆ., [...]

ಜನತಾ ಕರ್ಪ್ಯೂಗೆ ಕುಂದಾಪುರ, ಬೈಂದೂರು ತಾಲೂಕು ಸಂಪೂರ್ಣ ಸ್ತಬ್ಧ

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ/ಬೈಂದೂರು: ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಪ್ಯೂಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಉತ್ತಮ [...]

ಯತ್ತಾಬೇರು ವನದುರ್ಗಾ ಮಾತೆ ಸನ್ನಿಧಿ: ಜೀರ್ಣೋದ್ಧಾರ ಕಾರ್ಯಕ್ಕೆ ಸಿದ್ಧತೆ

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಸುಮಾರು ಎಂಟು ನೂರು ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮದ ಯತ್ತಾಬೇರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ, ಭಕ್ತರ ಪಾಲಿನ [...]

ಯಡ್ತರೆ ನೇತಾಜಿ ಯುವಕ ಮಂಡಲದ ಟೀ-ಶರ್ಟ್ ಅನಾವರಣ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಯಡ್ತರೆ ನೇತಾಜಿ ಯುವಕ ಮಂಡಲದ ಟೀ-ಶರ್ಟ್ ಅನ್ನು ಯುವಕ ಮಂಡಲದ ಗೌರವ ಅಧ್ಯಕ್ಷ ಹೇರಿಯ ದೇವಾಡಿಗ ಹಾಗೂ ಸಂಘ ಅಧ್ಯಕ್ಷ ರಾಘವೇಂದ್ರ ಪೂಜಾರಿ ಸಂಘದ [...]

ಎ.19ರಂದು ನಾಗೂರಿನಲ್ಲಿ ಬಿಲ್ಲವ ವಧು-ವರ ಅನ್ವೇಷಣೆ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬಿಲ್ಲವ ಅಸೋಸಿಯೇಶನ್ ಬೆಂಗಳೂರು ರಿ. ನೇತೃತ್ವದಲ್ಲಿ ಬೈಂದೂರು ತಾಲೂಕು ಬಿಲ್ಲವರ ಸಂಘದ ಸಹಯೋಗದೊಂದಿಗೆ ಎ.19ರ ಭಾನುವಾರ ನಾಗೂರಿನ ಸಾಗರ ಸಭಾ ಭವನದಲ್ಲಿ ವಧು-ವರ ಅನ್ವೇಷಣೆ [...]

ಬೈಂದೂರು: ಮಹಿಳಾ ಸಾಧಕರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶುಮಂದಿರದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಬೈಂದೂರು ಮತ್ತು ಸೇವಾ ಸಂಗಮ ಶಿಶುಮಂದಿರದ ಮಾತೃ ಮಂಡಳಿಯ ಸಹಯೋಗದಲ್ಲಿ ಇನ್ನರ್ ವ್ಹಿಲ್ ಕ್ಲಬ್‌ನ [...]

ಯಡ್ತರೆ – ನಾಕಟ್ಟೆ ಗರಡಿ: ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿ ನೂತನ ಶಿಲಾಮಯ ದೇಗುಲ ಸಮರ್ಪಣೆ – ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಕ್ರಮಗಳು ಎಪ್ರಿಲ್ 5ರಿಂದ 13ರ [...]