ಊರ್ಮನೆ ಸಮಾಚಾರ

ಕುಂದಾಪುರ ತಾಲೂಕಿನ ಸುದ್ದಿ ಸಮಾಚಾರಗಳ ಹಂದರ

ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಡಾ.ಕಾಶೀನಾಥ ಪೈ

ಕುಂದಾಪುರ: 1938ರಲ್ಲಿ ಆರಂಭಗೊಂಡು ಗಂಗೊಳ್ಳಿಯಲ್ಲಿ ಸರಸ್ವತಿ ವಿದ್ಯಾಲಯ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿರುವ ಪ್ರತಿಷ್ಠಿತ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಸ್ಕೂಲ್ ಅಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ಗಂಗೊಳ್ಳಿಯ ಪ್ರಸಿದ್ಧ ವೈದ್ಯರಾಗಿರುವ ಡಾ.ಕಾಶೀನಾಥ ಪಿ.ಪೈ ಆಯ್ಕೆಯಾಗಿದ್ದಾರೆ. [...]

ಕುಂದಾಪುರ ಮಹಿಳಾ ಠಾಣೆ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

ಕುಂದಾಪುರ: ಇಲ್ಲಿನ ಮಹಿಳಾ ಪೊಲೀಸ್ ರಾಣೆಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿ ತಾಲೂಕಿನ ಮಹಿಳಾ ಮಿತ್ರ ಹಾಗೂ ಮಕ್ಕಳ ಮಿತ್ರದ ಪ್ರತಿನಿಧಿಗಳು ಹಾಗೂ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟದ [...]

ಮಧ್ಯದಂಗಡಿ ಪರವಾನಿಗೆ ನೀಡುವುದನ್ನು ವಿರೋಧಿಸಿ ಪ್ರತಿಭಟನೆ

ಕುಂದಾಪುರ: ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯದಂಗಡಿಗಳಿಗೆ ಪರವಾನಿಗೆ ನೀಡುವುದನ್ನು ವಿರೋಧಿಸಿ ಇಲ್ಲಿನ ಗ್ರಾಮಸ್ಥರು ಕಾಳವಾರ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯದಂಗಡಿಯನ್ನು ಆರಂಭಿಸಲು [...]

ದೇವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

ಕುಂದಾಪುರ: ಸಂಘ-ಸಂಸ್ಥೆಯನ್ನು ಬೆಳೆಸುವುದಷ್ಟೇ ಅಲ್ಲದೇ, ಸಮಾಜದ ಬಡವರ ಕುರಿತು ಕಳಕಳಿಯನ್ನು ಹೊಂದಿ ಅವರನ್ನು ಪ್ರೋತ್ಸಾಹಿಸುವುದು ಕೂಡ ಮುಖ್ಯವಾಗುತ್ತದೆ ಎಂದು ಸಹಕಾರಿ ಯೂನಿಯನ್ ನ ಅಧ್ಯಕ್ಷ ಕಿಶನ್‌ಕುಮಾರ್ ಹೆಗ್ಡೆ ಕೊಳ್ಕೆಬೈಲು ಹೇಳಿದರು. ಅವರು [...]

ಚಂದ್ರ ಪೂಜಾರಿಯ ಚಿಕಿತ್ಸೆಗೆ ನೆರವಾಗಿ

ಕುಂದಾಪುರ: ತಾಲೂಕಿನ ವಕ್ವಾಡಿ ಗ್ರಾಮದ ಗೊಳಿಕಟ್ಟೆ ನಿವಾಸಿ ಗೋವಿಂದ ಪೂಜಾರಿ ಹಾಗೂ ದೇವಕಿ ದಂಪತಿಗಳ ಮಗ ಚಂದ್ರ ಪೂಜಾರಿ ಎಂಬುವರು ಮೇದೋಜಿರಕ ಗೃಂಥಿಯ ಊತ ಹಾಗೂ ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸಿಸ್ [...]

ಶಟಲ್ ಬ್ಯಾಡ್ಮಿಂಟನ್: ಅಮಿತ್,ಪ್ರವೀಣ್ ಜೋಡಿ ಪ್ರಥಮ

ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ಶ್ರೀ ರಾಘವೇಂದ್ರ ಸ್ಪೋಟ್ಸ್ ಕ್ಲಬ್ ಗಂಗೊಳ್ಳಿ ಮತ್ತು ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಉಡುಪಿ [...]

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬೆಳವಣಿಗೆ : ಶಾಸಕ ಗೋಪಾಲ ಪೂಜಾರಿ

ಗಂಗೊಳ್ಳಿ: ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರೆಯಬೇಕೆನ್ನುವ ದೃಷ್ಟಿಯಿಂದ ರಾಜ್ಯ ಸರಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದರಿಂದ ಶಿಕ್ಷಣ ಕ್ಷೇತ್ರ ಕ್ರಾಂತಿಕಾರಕ ಬೆಳವಣಿಗೆ ಕಂಡಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಮಕ್ಕಳಿಗೆ ಮಧ್ಯಾಹ್ನದೂಟದ [...]

ಕೊಲ್ಲೂರು: ಕೆನರಾ ಬ್ಯಾಂಕ್ ಹೈಮಾಸ್ಟ್ ದೀಪ ಕೊಡುಗೆ

ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಹನ ನಿಲುಗಡೆ ಪ್ರದೇಶದಲ್ಲಿ ಕೆನರಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಮೂರುವರೆ ಲಕ್ಷ ರೂ. ವೆಚ್ಚದ ಹೈ-ಮಾಸ್ಟ್ ವಿದ್ಯುತ್ ದೀಪಸ್ಥಂಭವನ್ನು ಸೋಮವಾರ ದೇವಳದ [...]

ವಿದ್ಯುತ್ ಕಂಬವನ್ನು ಸುತ್ತವರಿದ ಬಳ್ಳಿಗಳು

ಗಂಗೊಳ್ಳಿ: ನೆಲದ ಮೇಲೆ ಬೆಳೆದ ಹೂಬಳ್ಳಿಗಳು ಗಿಡ ಗಂಟಿಗಳು ಹತ್ತಿರದಲ್ಲಿರುವ ಮನೆ, ಅಂಗಡಿ ಮುಗ್ಗಟ್ಟು ಅಥವಾ ಕಂಬಗಳನ್ನು ಹತ್ತಿ ಬೆಳೆಯುವುದು ಮಳೆಗಾಲದಲ್ಲಿ ಸಾಮಾನ್ಯ. ಆದರೆ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಶ್ರೀ ಚಕ್ರೇಶ್ವರಿ [...]

ಭಾರತ ಮಾತಾ ಪೂಜನ ಕಾರ್ಯಕ್ರಮ

ಗಂಗೊಳ್ಳಿ: ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಿದರೆ ಮಕ್ಕಳಲ್ಲಿ ದೇಶಭಕ್ತಿ ಮೂಡಲು ಸಹಾಯಕವಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಪ್ರಾಣತ್ಯಾಗ ಮಾಡಿದ ಅನೇಕ ದೇಶಭಕ್ತರನ್ನು, ಯೋಧರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು. ದೇಶದೆಲ್ಲೆಡೆ [...]