
ಕಾರ್ಟೂನಿಷ್ಠರಿಗೆ ವಿಶೇಷ ದೃಷ್ಠಿಕೋನವಿದೆ: ಕಾರ್ಟೂನು ಹಬ್ಬ ಉದ್ಘಾಟಿಸಿ ಡಾ ಸಂಧ್ಯಾ ಎಸ್. ಪೈ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಟೂನಿಷ್ಠರಿಗೆ ವಿಶೇಷ ದೃಷ್ಠಿಕೋನವಿದೆ. ನಮಗೆ ಗೊತ್ತಿರುವುದು, ಗೊತ್ತಿಲ್ಲದ್ದು, ಒಳಿತು ಕೆಡುಕುಗಳನ್ನು ರೇಖೆಗಳ ಮೂಲಕ ತೋರಿಸುವ ಚಾಕಚಕ್ಯತೆ ಅವರಲ್ಲಿದೆ. ಸಮಾಜದ ಓರೆ ಕೋರೆಗಳನ್ನು ಚಿತ್ರಿಸಿ ದೇಶಕಟ್ಟುವ
[...]