ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬಿಜೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬಿಜೂರು ರೈಲ್ವೆ ಗೇಟ್ 74ರ ಸಮೀಪ ರೈಲು ಡಿಕ್ಕಿಯಾಗಿ 9 ಜಾನುವಾರು ಸಾವನ್ನಪ್ಪಿದ ಘಟನೆ ನಡೆದಿದೆ.
ಬಿಜೂರು ಮೂರ್ಗೊಳಿಹಕ್ಲು ದೈವಸ್ಥಾನದ ಎದುರಿನ ರೈಲ್ವೆ ಹಳಿಯ ಮೇಲೆ ಜಾನುವಾರುಗಳು ಒಂದರ ಹಿಂದೆ ಒಂದರಂತೆ ನಡೆದುಕೊಂಡು ಹೋಗುತ್ತಿರುವಾಗ ಗೋವಾದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಜಾನುವಾರುಗಳು ಸಾವನ್ನಪ್ಪಿದೆ. ಬೈಂದೂರು ಪೊಲೀಸ್ ಠಾಣಾ ಸಿಬ್ಬಂದಿ ಮಾರ್ಗದರ್ಶನದಲ್ಲಿ ಸ್ಥಳೀಯರು ಜೆಸಿಬಿ ಮೂಲಕ ಹೊಂಡ ತೆಗೆದು ಹೂತುಹಾಕಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/